Asianet Suvarna News Asianet Suvarna News

Colour Discrimination: ಜೀವನಪೂರ್ತಿ ವರ್ಣ ತಾರತಮ್ಯ ಎದುರಿಸಿದ್ದೆ: ಮಾಜಿ ಕ್ರಿಕೆಟಿಗ ಶಿವರಾಮಕೃಷ್ಣನ್ ಬೇಸರ.!

* ತಾವೆದುರಿಸಿದ ವರ್ಣಭೇದ ನೀತಿ ಬಿಚ್ಚಿಟ್ಟ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ

* ಜೀವನಪೂರ್ತಿ ಬಣ್ಣದ ಕಾರಣದಿಂದ ತಾರತಮ್ಯ ಎದುರಿಸಿದ್ದೆ ಎಂದ ಶಿವರಾಮಕೃಷ್ಣನ್

* ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆ

I have Faced colour discrimination all my life Says Former Cricketer L Sivaramakrishnan kvn
Author
Bengaluru, First Published Nov 29, 2021, 11:15 AM IST

ನವದೆಹಲಿ(ನ.29): ಇಂಗ್ಲೆಂಡ್‌ ಕ್ರಿಕೆಟ್‌ (England Cricket) ವಲಯದಲ್ಲಿ ವರ್ಣಭೇದ ಬಗ್ಗೆ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಭಾರತ ಕ್ರಿಕೆಟ್‌ ತಂಡದ (Indian Cricket Team) ಮಾಜಿ ಆಟಗಾರ ಲಕ್ಷ್ಮಣ್‌ ಶಿವರಾಮಕೃಷ್ಣನ್ (L Sivaramakrishnan) ಕೂಡಾ ತಾವು ಬಣ್ಣದ ಕಾರಣಕ್ಕೆ ಅವಮಾನ, ತಾರತಮ್ಯಕ್ಕೆ ಒಳಗಾಗಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ವೀಕ್ಷಣೆ ವಿವರಣೆಗಾರರು ಟೀಕೆಗಳನ್ನು ಎದುರಿಸುವ ಬಗ್ಗೆ ಮಾಡಲಾದ ಟ್ವೀಟ್‌ ಒಂದಕ್ಕೆ ಕಮೆಂಟ್‌ ಮಾಡಿರುವ ಅವರು, ‘ನಾನು ನನ್ನ ಜೀವನಪೂರ್ತಿ ಬಣ್ಣದ ಕಾರಣಕ್ಕೆ ತಾರತಮ್ಯ ಹಾಗೂ ಟೀಕೆಗೆ ಒಳಗಾಗಿದ್ದೇನೆ. ಹೀಗಾಗಿ ಇದು ನನ್ನನ್ನು ಗೊಂದಲಕ್ಕೀಡು ಮಾಡುವುದಿಲ್ಲ. ಆದರೆ ದುರದೃಷ್ಟವಶಾತ್‌ ಇದು ನನ್ನ ದೇಶದಲ್ಲಿ ಸಂಭವಿಸುತ್ತಿದೆ’ ಎಂದು ಹೇಳಿದ್ದಾರೆ.

ಭಾರತದ ಪರ 9 ಟೆಸ್ಟ್‌, 16 ಏಕದಿನ ಪಂದ್ಯವಾಡಿರುವ ಶಿವರಾಮಕೃಷ್ಣನ್‌ ವೀಕ್ಷಣೆ ವಿವರಣೆಗಾರರಾಗಿಯೂ ಕಾರ‍್ಯನಿರ್ವಹಿಸಿದ್ದಾರೆ. ಶಿವರಾಮಕೃಷ್ಣನ್‌ ಅವರ ಈ ಆರೋಪಕ್ಕೂ ಮುನ್ನವೇ 2017ರಲ್ಲಿ ಭಾರತದ ಆರಂಭಿಕ ಆಟಗಾರ ಅಭಿನವ್‌ ಮುಕುಂದ್‌ (Abhinav Mukund) ಅವರು ಬಣ್ಣದ ಕಾರಣಕ್ಕೆ ಅವಮಾನಕ್ಕೆ ಒಳಗಾಗಿದ್ದೆ ಎಂದು ಆರೋಪಿಸಿದ್ದರು. ಕಳೆದ ವರ್ಷ ಟೀಂ ಇಂಡಿಯಾ (Team India) ಹಾಗೂ ಕರ್ನಾಟಕ ತಂಡದ ಮಾಜಿ ಆಟಗಾರ ದೊಡ್ಡ ಗಣೇಶ್‌ (Dodda Ganesh) ಕೂಡಾ ತಾವು ವರ್ಣಭೇದ ತಾರತಮ್ಯಕ್ಕೆ ಒಳಗಾಗಿರುವ ಬಗ್ಗೆ ಹೇಳಿಕೊಂಡಿದ್ದರು.

ಭಾರತ ಪರ ಏಳು ಟೆಸ್ಟ್ ಪಂದ್ಯಗಳನ್ನಾಡಿರುವ ಅಭಿನವ್ ಮುಕುಂದ್‌, ನಾನು 15 ವರ್ಷದವನಿದ್ದಾಗಲೇ ದೇಶದೊಳಗೆ ಹಾಗೂ ದೇಶದಾಚೆ ಸಾಕಷ್ಟು ಪ್ರಯಾಣ ನಡೆಸಿದ್ದೇನೆ. ನಾನು ಹುಡುಗನಿದ್ದಾಗ ಜನರು ನನ್ನ ಬಣ್ಣವನ್ನಾಧರಿಸಿ ತಾರತಮ್ಯ ಮಾಡುತ್ತಿದ್ದುದು ನನ್ನನ್ನು ಅಚ್ಚರಿಗೀಡಾಗುವಂತೆ ಮಾಡುತ್ತಿತ್ತು ಎಂದು ಹೇಳಿದ್ದರು. ಯಾರ್ಕ್‌ಶೈರ್ ತಂಡದ ಆಟಗಾರ ಅಜೀಮ್ ರಫೀಕ್‌ ಇಂಗ್ಲೆಂಡ್‌ನಲ್ಲಿ ತಾವೆದುರಿಸಿದ್ದ ಜನಾಂಗೀಯ ನೀತಿಯ ಬಗ್ಗೆ ತುಟಿಬಿಚ್ಚಿದ್ದರು. ಇದಾದ ಬಳಿಕ ಇಂಗ್ಲೆಂಡ್ ಕ್ರಿಕೆಟ್‌ ವಲಯದಲ್ಲಿ ಸದ್ಯ ವರ್ಣಭೇದ ನೀತಿ (racial discrimination) ಸಾಕಷ್ಟು ಸದ್ದು ಮಾಡುತ್ತಿದೆ.

Ind vs NZ Kanpur Test: ಹರ್ಭಜನ್ ಸಿಂಗ್ ವಿಕೆಟ್‌ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್‌..!

ರಹಸ್ಯ ಹಂಚಿಕೊಳ್ಳಲು ಕಮಿನ್ಸ್‌ಗೆ ಹೇಳಿದ್ದ ಕ್ರಿಕೆಟ್‌ ಆಸ್ಪ್ರೇಲಿಯಾ !

ಮೆಲ್ಬರ್ನ್‌: ಆಸ್ಪ್ರೇಲಿಯಾ ಟೆಸ್ಟ್‌ ತಂಡದ ನಾಯಕನಾಗಿ (Australia Test Captain) ಆಯ್ಕೆಯಾಗುವ ಮೊದಲು ಆಸ್ಪ್ರೇಲಿಯಾ ಕ್ರಿಕೆಟ್‌ ಮಂಡಳಿ, ತಮ್ಮ ಬಳಿ ಯಾವುದೇ ರಹಸ್ಯಗಳಿದ್ದರೆ ಹೇಳಿ ತಪ್ಪೊಪ್ಪಿಕೊಳ್ಳುವಂತೆ ಹೇಳಿಕೊಂಡಿತ್ತು ಎಂಬುದನ್ನು ಪ್ಯಾಟ್‌ ಕಮಿನ್ಸ್‌ (Pat Cummins) ಬಹಿರಂಗಪಡಿಸಿದ್ದಾರೆ.

ಎಬಿಸಿ ಸ್ಪೋಟ್ಸ್‌ರ್‍ ಜೊತೆ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಖಂಡಿತವಾಗಿಯೂ ಈ ರೀತಿಯ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಈ ಬಗ್ಗೆ ನಾನು ವಿವರವಾಗಿ ಏನೂ ಹೇಳುವುದಿಲ್ಲ. ಅದು ಉತ್ತಮವಾದ ಮುಕ್ತ ಚರ್ಚೆಯಾಗಿತ್ತು. ನಾವು ವಿಭಿನ್ನ ಸಂಗತಿಗಳ ಬಗ್ಗೆ ಮಾತನಾಡಿದ್ದೇವೆ ಮತ್ತು ಅದು ತೃಪ್ತಿದಾಯಕವಾಗಿತ್ತು’ ಎಂದು ಹೇಳಿದ್ದಾರೆ.

Pat Cummins: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕನಾಗಿ ಪ್ಯಾಟ್ ಕಮಿನ್ಸ್‌ ನೇಮಕ

2017ರಲ್ಲಿ ಟ್ಯಾಸ್ಮೇನಿಯಾ ಕ್ರಿಕೆಟ್‌ನ ಮಹಿಳಾ ಸಿಬ್ಬಂದಿಗೆ ಅಶ್ಲೀಲ ಫೋಟೋ ಹಾಗೂ ಸಂದೇಶ ಕಳುಹಿಸಿದ ಪ್ರಕರಣದ ಬಗ್ಗೆ ಕ್ರಿಕೆಟ್‌ ಆಸ್ಪ್ರೇಲಿಯಾ ತನಿಖೆ ಚುರುಕುಗೊಳಿಸಿದ ಹಿನ್ನೆಲೆಯಲ್ಲಿ ಟಿಮ್‌ ಪೈನ್‌ (Tim Paine) ಕಳೆದ ವಾರವಷ್ಟೇ ಟೆಸ್ಟ್‌ ನಾಯಕತ್ವದಿಂದ ಕೆಳಗಿಳಿದಿದ್ದರು. ಹೀಗಾಗಿ ತಂಡದ ಉಪನಾಕನಾಗಿದ್ದ ಕಮಿನ್ಸ್‌ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ. ಪೈನ್‌ಗೂ ಮೊದಲು ಟೆಸ್ಟ್‌ ನಾಯಕನಾಗಿದ್ದ ಸ್ಟೀವ್‌ ಸ್ಮಿತ್‌ (Steve Smith) ಚೆಂಡು ವಿರೂಪ ಪ್ರಕರಣದಲ್ಲಿ ನಾಯಕತ್ವ ತ್ಯಜಿಸಿದ್ದರು. ಇದರೊಂದಿಗೆ ಆಸೀಸ್‌ ಟೆಸ್ಟ್‌ ತಂಡದ ಕೊನೆಯ ಇಬ್ಬರು ನಾಯಕರು ವಿವಾದದ ಮೂಲಕವೇ ನಾಯಕತ್ವ ತ್ಯಜಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್‌ ಆಸ್ಪ್ರೇಲಿಯಾ (Cricket Australia) ನೂತನ ನಾಯಕನ ಜತೆ ಈ ರೀತಿ ಮುಕ್ತ ಚರ್ಚೆ ನಡೆಸಿದೆ ಎನ್ನಲಾಗಿದೆ.

Follow Us:
Download App:
  • android
  • ios