ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಟೀಂ ಇಂಡಿಯಾ ಕ್ರಿಕೆಟಿಗರನ್ನು ಸನ್ಮಾನಿಸಿದ ಮೋದಿ ಸಂವಾದ ನಡೆಸಿದ್ದಾರೆ. ಈ ವೇಳೆ ಮೋದಿ ಜೊತೆ ಕ್ರಿಕೆಟಿಗರು ಆತ್ಮೀಯವಾಗಿ ಮಾತನಾಡಿದ್ದಾರೆ. ಇದೇ ವೇಳೆ ಮಣ್ಣಿನ ರುಚಿ ಹೇಗಿತ್ತು ಎಂದು ಮೋದಿ ನಾಯಕ ರೋಹಿತ್ ಶರ್ಮಾ ಬಳಿ ಪ್ರಶ್ನಿಸಿದ್ದಾರೆ.

ನವದೆಹಲಿ(ಜು.05) ಪ್ರಧಾನಿ ನರೇಂದ್ರ ಮೋದಿ ಟೀಂ ಇಂಡಿಯಾ ಕ್ರಿಕೆಟಿಗರನ್ನು ಸನ್ಮಾನಿಸಿ ಆಟಗಾರರ ಜೊತೆ ಸಂವಾದನ ನಡೆಸಿದ್ದಾರೆ. ಈ ವೇಳೆ ಮೋದಿ ನಾಯಕ ರೋಹಿತ್ ಸೇರಿದಂತೆ ಕ್ರಿಕೆಟಿಗರಲ್ಲಿ ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ. ರೋಹಿತ್‌ಗೆ ಮಣ್ಣಿನ ರುಚಿ ಹೇಗಿತ್ತು ಎಂದು ಪ್ರಶ್ನಿಸಿದ್ದಾರೆ. ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ತವರಿಗೆ ಆಗಮಿಸಿದ ಟೀಂ ಇಂಡಿಯಾ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ತೆರಳಿತ್ತು. ಮೋದಿ ಜೊತೆ ಉಪಹಾರ ಸವಿದ ಆಟಗಾರರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರೋಹಿತ್‌ಗೆ ಮೋದಿ ಕೇಳಿದ ಮಣ್ಣಿನ ರುಚಿ ಪ್ರಶ್ನಗೆ ಇಡೀ ತಂಡವೇ ಹಾಸ್ಯ ಚಟಾಕಿ ಸಿಡಿಸಿತ್ತು.

ಟಿ20 ವಿಶ್ವಕಪ್‌ ಟ್ರೋಫಿ ಗೆಲುವಿನ ಬಳಿಕ ಭಾರತದ ನಾಯಕ ರೋಹಿತ್‌ ಶರ್ಮಾ ಪಿಚ್‌ ಮೇಲಿನ ಮಣ್ಣು ತಿಂದು ಸಂಭ್ರಮಿಸಿದ್ದರು. 24 ಗ್ರ್ಯಾನ್‌ಸ್ಲಾಂ ಟೆನಿಸ್‌ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ನೋವಾಕ್‌ ಜೋಕೋವಿಚ್‌ 2011ರಲ್ಲಿ ವಿಂಬಲ್ಡನ್‌ ಗೆದ್ದ ಬಳಿಕ ಸಂಭ್ರಮಾಚರಣೆ ವೇಳೆ ಅಂಗಳದ ಮಣ್ಣು ತಿಂದಿದ್ದರು.ಇವರಿಬ್ಬರ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು.

ಸಂಭ್ರಮ ಯಾತ್ರೆಯಲ್ಲಿ ಕೊಹ್ಲಿ ಟ್ರೋಫಿ ನೀಡುತ್ತಿದ್ದಂತೆ ಭಾವುಕರಾದ ರಿಷಬ್ ಪಂತ್!

ವಾಂಖೇಡೆಯಲ್ಲಿ ಸನ್ಮಾನ, ₹125 ಕೋಟಿ ಚೆಕ್‌ ಹಸ್ತಾಂತರ
ಬೃಹತ್‌ ಮೆರವಣಿಗೆ ಬಳಿಕ ಆಟಗಾರರು ವಾಂಖೇಡೆ ಕ್ರೀಡಾಂಗಣಕ್ಕೆ ಆಗಮಿಸಿದರು. ಮೈದಾನದುದ್ದಕ್ಕೂ ಆಟಗಾರರು ಟ್ರೋಫಿ ಹಿಡಿದು ಸಾಗುತ್ತಿದ್ದಂತೆಯೇ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು. ಬಳಿಕ ಆಟಗಾರರಿಗೆ ಬಿಸಿಸಿಐ ವತಿಯಿಂದ ಸನ್ಮಾನ ಮಾಡಲಾಯಿತು. ವಿಶ್ವಕಪ್‌ ವಿಜೇತ ತಂಡಕ್ಕೆ ಬಿಸಿಸಿಐ ಘೋಷಿಸಿದ್ದ 125 ಕೋಟಿ ರು. ನಗದು ಬಹುಮಾನವನ್ನು ಇದೇ ವೇಳೆ ಹಸ್ತಾಂತರಿಸಲಾಯಿತು. ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಕಾರ್ಯದರ್ಶಿ ಜಯ್‌ ಶಾ, ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಮಳೆ ನಡುವೆ ತುಂಬಿ ತುಳುಕಿದ ವಾಂಖೇಡೆ
ಭಾರತ ತಂಡದ ವಿಜಯೋತ್ಸವಕ್ಕೆ ಸಾಕ್ಷಿಯಾಗಲು ಅಪಾರ ಪ್ರಮಾಣದ ಅಭಿಮಾನಿಗಳು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನೆರೆದಿದ್ದರು. ಮಳೆ ಸುರಿಯುತ್ತಿದ್ದರೂ ಕ್ರೀಡಾಂಗಣ ಸಂಜೆ ವೇಳೆ ಅಭಿಮಾನಿಗಳಿಂದ ತುಂಬಿ ತುಳುಕಿತು. ಹೊರಗೆ ಭಾರಿ ಪ್ರಮಾಣದಲ್ಲಿ ಪ್ರೇಕ್ಷಕರು ಮೆರವಣಿಗೆ ವೀಕ್ಷಿಸುತ್ತಿದ್ದರೂ, ಕ್ರೀಡಾಂಗಣದಲ್ಲೂ ಜನಸಾಗರ ನೆರೆದಿತ್ತು. ಮೈದಾನ ಪ್ರವೇಶಿಸಲು ಹಲವು ಗಂಟೆಗಳ ಕಾಲ ಪ್ರೇಕ್ಷಕರು ಹೊರಗೆ ಕಾಯಬೇಕಾಯಿತು.

ಟೀಂ ಇಂಡಿಯಾ ವಿಜಯಿಯಾತ್ರೆಗೆ 3 ಲಕ್ಷಕ್ಕೂ ಅಧಿಕ ಫ್ಯಾನ್ಸ್ ಭಾಗಿ, ಹಲವರಿಗೆ ಗಾಯ!