ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಹರ್ಮನ್‌ಪ್ರೀತ್ ಕೌರ್ ಪಡೆ; ಭಾರತದ ಸೆಮೀಸ್ ಹಾದಿ ಲೆಕ್ಕಾಚಾರ ಏನು? ಇಲ್ಲಿದೆ ಡೀಟೈಲ್ಸ್
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಮೊದಲ ಪಂದ್ಯದಲ್ಲೇ ಮುಗ್ಗರಿಸುವ ಮೂಲಕ ಸೆಮೀಸ್ ಹಾದಿ ಕಠಿಣವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ದುಬೈ: ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನವರಿಕೆಯೊಂದಿಗೆ ಅರಬ್ಬರ ನಾಡಿಗೆ ಬಂದಿಳಿದಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಮೊದಲ ಪಂದ್ಯದಲ್ಲಿಯೇ ಆಘಾತಕಾರಿ ಸೋಲು ಅನುಭವಿಸುವ ಮೂಲಕ ಸೆಮೀಸ್ ಹಾದಿಯನ್ನು ದುರ್ಗಮಗೊಳಿಸಿಕೊಂಡಿದೆ.
ಹೌದು, ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಸತತ 10 ಟಿ20 ಪಂದ್ಯಗಳನ್ನು ಸೋತು ಟೂರ್ನಿಯಲ್ಲಿ ಪಾಲ್ಗೊಂಡಿತ್ತು. ಆದರೆ ಕಿವೀಸ್ ತಂಡವು ತಾನಾಡಿದ ಮೊದಲ ಪಂದ್ಯದಲ್ಲಿಯೇ ಬಲಿಷ್ಠ ಭಾರತ ವಿರುದ್ದ ಗ್ರೂಪ್ 'ಎ' ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿ 58 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಕಿವೀಸ್ ಎದುರು ಹರ್ಮನ್‌ಪ್ರೀತ್ ಕೌರ್ ಪಡೆ ಸೋಲು ಅನುಭವಿಸುತ್ತಿದ್ದಂತೆಯೆ ಭಾರತ ಮಹಿಳಾ ಕ್ರಿಕೆಟ್ ತಂಡದ ಸೆಮಿಫೈನಲ್ ಹಾದಿ ಕೊಂಚ ದುರ್ಗಮ ಎನಿಸಲಾರಂಭಿಸಿದೆ.
10 ವರ್ಷಗಳ ವಿರಾಟ್ ಕೊಹ್ಲಿಯ ದಾಖಲೆಯನ್ನು ಕೇವಲ 3 ವರ್ಷದಲ್ಲೇ ಬ್ರೇಕ್ ಮಾಡಲು ಸೂರ್ಯಕುಮಾರ್ ರೆಡಿ
'ಎ' ಗುಂಪಿನಲ್ಲಿ ಭಾರತ ಮಾತ್ರವಲ್ಲದೇ ನ್ಯೂಜಿಲೆಂಡ್, ಪಾಕಿಸ್ತಾನ, ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ಹಾಗೂ ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಇದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಮಾತ್ರ ಸೆಮಿಫೈನಲ್ ಪ್ರವೇಶಿಸಲು ಅರ್ಹತೆ ಪಡೆಯಲಿವೆ. ಇದೀಗ ಕಿವೀಸ್ ಎದುರು 58 ರನ್ ಅಂತರದ ಸೋಲು ಅನುಭವಿಸುತ್ತಿದ್ದಂತೆಯೇ ಭಾರತದ ನೆಟ್ ರನ್‌ರೇಟ್ -2.900 ಗೆ ಕುಸಿದಿದೆ.
ಈಗ ಸೆಮೀಸ್ ಲೆಕ್ಕಾಚಾರ ಹೇಗೆ?
ಭಾರತ ಮಹಿಳಾ ಕ್ರಿಕೆಟ್ ತಂಡವು ಸೆಮಿಫೈನಲ್ ಪ್ರವೇಶಿಸಬೇಕಿದ್ದರೇ, ಭಾನುವಾರ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಹಾಗೂ ಅಕ್ಟೋಬರ್ 09ರಂದು ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಕೇವಲ ಗೆಲುವು ಸಾಧಿಸುವುದು ಮಾತ್ರವಲ್ಲದೇ ಒಳ್ಳೆಯ ನೆಟ್ ರನ್‌ರೇಟ್ ಕಾಯ್ದುಕೊಳ್ಳುವ ಅಗತ್ಯವೂ ಇದೆ. ಇದಾದ ಬಳಿಕ ಹರ್ಮನ್‌ಪ್ರೀತ್ ಕೌರ್ ಪಡೆಯು ತನ್ನ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ 6 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಗೆಲುವು ಸಾಧಿಸಿದರೆ ಸೆಮೀಸ್ ಹಾದಿ ಸುಗಮವಾಗಲಿದೆ.
ಭಾರತ-ಕಿವೀಸ್ ಬೆಂಗಳೂರು ಟೆಸ್ಟ್ ಟಿಕೆಟ್ ಸೇಲ್ ಶುರು; ಕನಿಷ್ಠ ಟಿಕೆಟ್ ಬೆಲೆ ಎಷ್ಟು? ಎಲ್ಲಿ ಟಿಕೆಟ್ ಖರೀದಿಸೋದು?
ಒಂದು ವೇಳೆ ಭಾರತ ತಂಡವು, ಆಸ್ಟ್ರೇಲಿಯಾ ಎದುರು ಸೋಲು ಕಂಡರೆ, ನ್ಯೂಜಿಲೆಂಡ್ ತಂಡವು ಎರಡಕ್ಕಿಂತ ಹೆಚ್ಚು ಗೆಲುವು ಸಾಧಿಸಬಾರದು. ಹೀಗಾದಲ್ಲಿ ನೆಟ್ ರನ್‌ರೇಟ್ ಉತ್ತಮವಾಗಿರುವ ಎರಡು ತಂಡಗಳು 'ಎ' ಗುಂಪಿನಿಂದ ಸೆಮೀಸ್‌ಗೆ ಅರ್ಹತೆ ಪಡೆಯಲಿವೆ.
ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ನಾಯಕಿ ಸೋಫಿ ಡಿವೈನ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು 160 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಭಾರತ 19 ಓವರ್‌ನಲ್ಲಿ 102 ರನ್‌ಗಳಿಗೆ ಸರ್ವಪತನ ಕಂಡಿತು.