Asianet Suvarna News Asianet Suvarna News

ಬೆಂಗಳೂರಲ್ಲಿ 1 ಟೆಸ್ಟ್‌, 1 ಟಿ20: 2021-22 ಭಾರತದ ತವರಿನ ವೇಳಾಪಟ್ಟಿ ಪ್ರಕಟ!

* 2022ರ ಫೆಬ್ರವರಿಯಲ್ಲಿ ಲಂಕಾ ವಿರುದ್ಧ ಟೆಸ್ಟ್‌

* ಜೂನ್‌ನಲ್ಲಿ ದ.ಆಫ್ರಿಕಾ ವಿರುದ್ಧ ಟಿ20 ಪಂದ್ಯ

* ಬೆಂಗಳೂರಲ್ಲಿ 1 ಟೆಸ್ಟ್‌, 1 ಟಿ20

Home season Team India to play 4 Tests 3 ODIs and 14 T20Is pod
Author
Bangalore, First Published Sep 21, 2021, 11:43 AM IST
  • Facebook
  • Twitter
  • Whatsapp

ನವದೆಹಲಿ(ಸೆ.21): ಭಾರತ ಕ್ರಿಕೆಟ್‌ ತಂಡದ 2021-22ರ ತವರಿನ ವೇಳಾಪಟ್ಟಿಪ್ರಕಟಗೊಂಡಿದ್ದು, ತಂಡವು 2021ರ ನವೆಂಬರ್‌ನಿಂದ 2022ರ ಜೂನ್‌ವರೆಗೂ 14 ಟಿ20, 4 ಟೆಸ್ಟ್‌, 3 ಏಕದಿನ ಪಂದ್ಯಗಳನ್ನು ಆಡಲಿದೆ. ಈ ಅವಧಿಯಲ್ಲಿ ನ್ಯೂಜಿಲೆಂಡ್‌, ವೆಸ್ಟ್‌ಇಂಡೀಸ್‌, ಶ್ರೀಲಂಕಾ ಹಾಗೂ ದ.ಆಫ್ರಿಕಾ ತಂಡಗಳು ಭಾರತಕ್ಕೆ ಆಗಮಿಸಲಿವೆ. ಬೆಂಗಳೂರಲ್ಲಿ 1 ಟೆಸ್ಟ್‌, 1 ಟಿ20 ಪಂದ್ಯ ನಡೆಯಲಿದೆ.

ಈ ಮಧ್ಯೆ ಡಿಸೆಂಬರ್‌-ಜನವರಿಯಲ್ಲಿ ಭಾರತ ತಂಡವು ದ.ಆಫ್ರಿಕಾಕ್ಕೆ ತೆರಳಲಿದ್ದು, ಏಪ್ರಿಲ್‌-ಮೇ ತಿಂಗಳಲ್ಲಿ ಐಪಿಎಲ್‌ 15ನೇ ಆವೃತ್ತಿ ನಡೆಯಲಿದೆ. ನ್ಯೂಜಿಲೆಂಡ್‌ ವಿರುದ್ಧ ನವೆಂಬರ್‌-ಡಿಸೆಂಬರ್‌ನಲ್ಲಿ 3 ಟಿ20, 2 ಟೆಸ್ಟ್‌, ಫೆಬ್ರವರಿಯಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ 3 ಟಿ20, 3 ಏಕದಿನ, ಫೆಬ್ರವರಿ-ಮಾಚ್‌ರ್‍ನಲ್ಲಿ ಶ್ರೀಲಂಕಾ ವಿರುದ್ಧ 2 ಟೆಸ್ಟ್‌, 3 ಏಕದಿನ, ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳ ಸರಣಿಯನ್ನು ಭಾರತ ತಂಡ ಆಡಲಿದೆ.

ಶ್ರೀಲಂಕಾ ವಿರುದ್ಧ ಫೆ.25ರಿಂದ ಮಾ.1ರ ವರೆಗೂ ನಡೆಯಲಿರುವ ಟೆಸ್ಟ್‌, ದ.ಆಫ್ರಿಕಾ ವಿರುದ್ಧ ಜೂ.12ರಂದು ನಡೆಯಲಿರುವ ಟಿ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ನೀಡಲಿದೆ.

Follow Us:
Download App:
  • android
  • ios