Asianet Suvarna News Asianet Suvarna News

ಈ ಬಾರಿ ವಿಶ್ವಕಪ್‌ ಗೆಲ್ಲುವ ತಂಡಕ್ಕೆ ಸಿಗುವ ನಗದು ಬಹುಮಾನ ಎಷ್ಟು ಗೊತ್ತಾ?

ಕಳೆದ ಬಾರಿ ವಿಶ್ವಕಪ್‌ ಗೆದ್ದಿದ್ದ ಇಂಗ್ಲೆಂಡ್ ತಂಡಕ್ಕೆ 1.6 ಮಿಲಿಯನ್‌ ಯುಎಸ್ ಡಾಲರ್‌(ಈಗಿನ ಅಂದಾಜು 13.2 ಕೋಟಿ ರು.) ನಗದು ಬಹುಮಾನ ಲಭಿಸಿತ್ತು. ಈ ಬಾರಿ ಟೂರ್ನಿಯ ಒಟ್ಟಾರೆ ಪ್ರಶಸ್ತಿ ಮೊತ್ತವನ್ನು ಐಸಿಸಿ 11.25 ಮಿಲಿಯನ್‌ ಯುಎಸ್‌ ಡಾಲರ್‌(ಅಂದಾಜು 93 ಕೋಟಿ ರು.)ಗೆ ಹೆಚ್ಚಿಸಿದೆ.

Highest prize money announced for historic ICC T20 World Cup 2024 kvn
Author
First Published Jun 4, 2024, 10:58 AM IST

ನ್ಯೂಯಾರ್ಕ್‌: ಈ ಬಾರಿ ಟಿ20 ವಿಶ್ವಕಪ್‌ನ ಪ್ರಶಸ್ತಿ ಮೊತ್ತವನ್ನು ಐಸಿಸಿ ದಾಖಲೆ ಪ್ರಮಾಣದಲ್ಲಿ ಹೆಚ್ಚಿಸಿದೆ. ಟ್ರೋಫಿ ವಿಜೇತ ತಂಡಕ್ಕೆ ಈ ಸಲ 2.45 ಮಿಲಿಯನ್‌ ಅಮೆರಿಕನ್‌ ಡಾಲರ್‌(ಅಂದಾಜು 20.35 ಕೋಟಿ ರು.) ನಗದು ಬಹುಮಾನ ಸಿಗಲಿದೆ ಎಂದು ಐಸಿಸಿ ಸೋಮವಾರ ಪ್ರಕಟಿಸಿದೆ.

ಕಳೆದ ಬಾರಿ ವಿಶ್ವಕಪ್‌ ಗೆದ್ದಿದ್ದ ಇಂಗ್ಲೆಂಡ್ ತಂಡಕ್ಕೆ 1.6 ಮಿಲಿಯನ್‌ ಯುಎಸ್ ಡಾಲರ್‌(ಈಗಿನ ಅಂದಾಜು 13.2 ಕೋಟಿ ರು.) ನಗದು ಬಹುಮಾನ ಲಭಿಸಿತ್ತು. ಈ ಬಾರಿ ಟೂರ್ನಿಯ ಒಟ್ಟಾರೆ ಪ್ರಶಸ್ತಿ ಮೊತ್ತವನ್ನು ಐಸಿಸಿ 11.25 ಮಿಲಿಯನ್‌ ಯುಎಸ್‌ ಡಾಲರ್‌(ಅಂದಾಜು 93 ಕೋಟಿ ರು.)ಗೆ ಹೆಚ್ಚಿಸಿದೆ.

T20 World Cup 2024: ಲೋ ಸ್ಕೋರ್‌ ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ!

ಇದು ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ. ಈ ಪೈಕಿ ರನ್ನರ್‌-ಅಪ್‌ ತಂಡಕ್ಕೆ 10.6 ಕೋಟಿ ರು. ಸಿಗಲಿದೆ. ಸೆಮಿಫೈನಲ್‌ ಪ್ರವೇಶಿಸುವ ತಂಡಗಳು ತಲಾ ಅಂದಾಜು ₹6.5 ಕೋಟಿ, ಸೂಪರ್‌-8 ಹಂತದಲ್ಲಿ ಹೊರಬಿದ್ದ ತಂಡಗಳು ತಲಾ ಅಂದಾಜು ₹3.17 ಕೋಟಿ ಪಡೆಯಲಿವೆ.

ಟೂರ್ನಿಯಲ್ಲಿ 9ರಿಂದ 12ರ ವರೆಗೆ ಸ್ಥಾನ ಪಡೆದ ತಂಡಗಳು ತಲಾ 2.05 ಕೋಟಿ ರು, 13ರಿಂದ 20 ಸ್ಥಾನಿಯಾದ ತಂಡಗಳು ತಲಾ 1.87 ಕೋಟಿ ರು. ಪಡೆಯಲಿದೆ. ಅಲ್ಲದೆ ಗುಂಪು ಹಂತ ಮತ್ತು ಸೂಪರ್‌-8 ಹಂತದಲ್ಲಿ ಗೆಲ್ಲುವ ಪ್ರತಿ ಪಂದ್ಯಕ್ಕೆ ತಂಡಗಳಿಗೆ 25 ಲಕ್ಷ ರು. ಹೆಚ್ಚುವರಿ ನಗದು ಸಿಗಲಿವೆ ಎಂದು ಐಸಿಸಿ ತಿಳಿಸಿದೆ.

ವಿಶ್ವಕಪ್‌ನ ಬಳಿಕ ಮತ್ತೆ ಕೋಚ್‌ ಆಗಲ್ಲ: ದ್ರಾವಿಡ್‌

ನವದೆಹಲಿ: ಭಾರತ ತಂಡ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌, ಟಿ20 ವಿಶ್ವಕಪ್‌ ಬಳಿಕ ಹುದ್ದೆ ತೊರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಟಿ20 ವಿಶ್ವಕಪ್‌ಗೆ ದ್ರಾವಿಡ್‌ ಅವಧಿ ಕೊನೆಗೊಳ್ಳಲಿದೆ. ಬಿಸಿಸಿಐ ಈಗಾಗಲೇ ನೂತನ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ನಡುವೆ ದ್ರಾವಿಡ್‌ ಮತ್ತೊಂದು ಅವಧಿಗೆ ಕೋಚ್‌ ಆಗಲ್ಲ ಎಂದೇ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಸ್ವತಃ ದ್ರಾವಿಡ್‌ ಖಚಿತಪಡಿಸಿದ್ದು, ಟಿ20 ವಿಶ್ವಕಪ್‌ನಲ್ಲಿ ಕೊನೆ ಬಾರಿ ಭಾರತದ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದೇನೆ ಎಂದಿದ್ದಾರೆ.

Latest Videos
Follow Us:
Download App:
  • android
  • ios