ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕಿದ ಅಭಿಮಾನಿ, ಬಿಸಿಸಿಐಗೆ ಶುರುವಾಯ್ತ ಹೊಸ ತಲೆನೋವು!
ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಹಾಲಿ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಅರ್ಹರು ಅರ್ಜಿ ಸಲ್ಲಿಸಲು ಬಿಸಿಸಿಐ ಸೂಚಿಸಿತ್ತು. ಇದೀಗ ಟೀಂ ಇಂಡಿಯಾ ಅಭಿಮಾನಿಯೊಬ್ಬ ಕೋಚ್ ಹುದ್ದೆಗೆ ಅರ್ಜಿ ಹಾಕಿ ಬಿಸಿಸಿಐಗೆ ಠಕ್ಕರ್ ನೀಡಿದ್ದಾನೆ. ಇಷ್ಟೇ ಅಲ್ಲ ನನ್ನ ಮಾರ್ಗದರ್ಶನದಲ್ಲಿ 2027ರ ವಿಶ್ವಕಪ್ ಭಾರತ ಗೆಲ್ಲಲಿದೆ ಎಂದಿದ್ದಾನೆ.
ಮುಂಬೈ(ಮೇ.15) ಟೀಂ ಇಂಡಿಯಾ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಜೂನ್‌ನಲ್ಲಿ ಅಂತ್ಯಗೊಳ್ಳುತ್ತಿದೆ. ಹೀಗಾಗಿ ಬಿಸಿಸಿಐ ನೂತನ ಕೋಚ್ ಆಯ್ಕೆಗೆ ಅರ್ಜಿ ಆಹ್ವಾನಿಸಿದೆ. ಇದೇ ವೇಳೆ ಹಾಲಿ ಕೋಚ್ ಸೇರಿದಂತೆ ಅರ್ಹರು ಅರ್ಜಿ ಹಾಕಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೂಚಿಸಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿತ್ತು. ಹಲವು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ವಿದೇಶಿ ಮಾಜಿ ಕ್ರಿಕೆಟಿಗರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ಜೊತೆ ಟೀಂ ಇಂಡಿಯಾ ಅಭಿಮಾನಿಯೊಬ್ಬ ಕೋಚ್ ಹುದ್ದೆ ಅರ್ಜಿ ಸಲ್ಲಿಸಿ ಬಿಸಿಸಿಐಗೆ ಠಕ್ಕರ್ ನೀಡಿದ್ದಾನೆ.
ಮೇ.27ರ ವರೆಗೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಿಸಿಸಿಐ ಅವಕಾಶ ನೀಡಿದೆ. ಕೆಲ ಕ್ರಿಕೆಟಿಗರು ಇದೀಗ ಅಗತ್ಯ ದಾಖಲೆ ಕಲೆ ಹಾಕಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಘೋಷಣೆ ಹೊರಬೀಳುತ್ತಿದ್ದಂತೆ ಟೀಂ ಇಂಡಿಯಾ ಅಭಿಮಾನಿಯೊಬ್ಬ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಹಾಕಿದ್ದಾನೆ . ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾನೆ.
IPL ಪ್ಲೇ ಆಫ್ ರೇಸ್‌ನಿಂದ ಗುಜರಾತ್ ಔಟ್: 3 ಸ್ಥಾನಕ್ಕೆ ಈ 6 ತಂಡಗಳ ಫೈಟ್..! ಹೀಗಿದೆ ನೋಡಿ ಹೊಸ ಲೆಕ್ಕಾಚಾರ
ಜಾನಿ ಬ್ರಾವೋ ಅನ್ನೋ ಟ್ವಿಟರ್ ಖಾತೆಯ ಅಭಿಮಾನಿ, ತಾನು ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಸಲ್ಲಿಸಿದ ಅರ್ಜಿ ಕುರಿತು ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾನೆ. ಇಷ್ಟೇ ಅಲ್ಲ ನನ್ನ ಅನುಭವಿ ಕೋಚಿಂಗ್ ಹಾಗೂ ಮಾರ್ಗದರ್ಶನದಿಂದ ಟೀಂ ಇಂಡಿಯಾ 2027ರಲ್ಲಿ ಸೌತ್ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲಲಿದೆ ಎಂದು ಟ್ವೀಟ್ ಮಾಡಿದ್ದಾನೆ.
ಇತ್ತ ಸೊಹಮ್ ಅನ್ನೋ ಟ್ವಿಟರ್ ಖಾತೆಯಿಂದ ಅಭಿಮಾನಿಯೊಬ್ಬ ಇದೇ ರೀತಿ ಟೀಂ ಇಂಡಿಯಾ ಹುದ್ದೆಗೆ ಅರ್ಜಿ ಸಲ್ಲಿಸಿದ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾನೆ. ಇದೀಗ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಟೀಂ ಇಂಡಿಯಾ ಕೋಚ್ ಹುದ್ದೆಗೆ ಕೆಲ ಮಾನದಂಡಗಳಿವೆ. ಈ ಮಾನದಂಡಗಳಿದ್ದ ಅರ್ಹರ ಅರ್ಜಿಯನ್ನು ಮಾತ್ರ ಬಿಸಿಸಿಐ ಪರಿಗಣಿಸಲಿದೆ.
ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹರು 30 ಟೆಸ್ಟ್ ಅಥಾವ 50 ಏಕದಿನ ಪಂದ್ಯ ಆಡಿರಬೇಕು. ಐಸಿಸಿ ಸದಸ್ಯ ರಾಷ್ಟ್ರಕ್ಕೆ ಕನಿಷ್ಠ 2 ವರ್ಷ ಕೋಚಿಂಗ್ ಮಾಡಿದ ಅನುಭವ ಹೊಂದಿರಬೇಕು. ಅಥವಾ ಐಪಿಎಲ್, ರಾಷ್ಟ್ರೀಯ ಎ ತಂಡ, ಅಂತಾರಾಷ್ಟ್ರೀಯ ಲೀಗ್ ತಂಡಕ್ಕೆ ಕೋಚ್ ಮಾಡಿದ ಅನುಭವ ಹೊಂದಿರಬೇಕು.
ಮಕ್ಕಳ ಗೌಪ್ಯತೆ ಕಾಪಾಡಿದ್ದಕ್ಕೆ ಪಾಪ್ಸ್‌ಗೆ ದುಬಾರಿ ಗಿಫ್ಟ್ ಹ್ಯಾಂಪರ್ ಕೊಟ್ಟ ವಿರುಷ್ಕಾ; ಉಡುಗೊರೆಯಲ್ಲೇನಿದೆ?
ಳೆದ ವರ್ಷ ಏಕದಿನ ವಿಶ್ವಕಪ್ ಮುಕ್ತಾಯಗೊಂಡ ಬಳಿಕವೇ ದ್ರಾವಿಡ್‌ರ ಗುತ್ತಿಗೆ ಅವಧಿ ಮುಗಿದಿತ್ತು. ಆದರೆ 2024ರ ಟಿ20 ವಿಶ್ವಕಪ್ ವರೆಗೂ ಹುದ್ದೆಯಲ್ಲಿ ಮುಂದುವರಿಯುವಂತೆ ಬಿಸಿಸಿಐ ಕೇಳಿಕೊಂಡಿತ್ತು. ಆಗಲೇ ದ್ರಾವಿಡ್ ತಾವು 2024ರ ಜೂನ್ ಬಳಿಕ ಕೋಚ್ ಆಗಿ ಮುಂದುವರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು ಎನ್ನಲಾಗಿದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ದ್ರಾವಿಡ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇನ್ನೊಂದು ವರ್ಷ ಕೇವಲ ಟೆಸ್ಟ್ ತಂಡದ ಕೋಚ್ ಆಗಿಯಾದರೂ ಇರುವಂತೆ ಹಲವು ಹಿರಿಯ ಆಟಗಾರರು ದ್ರಾವಿಡ್‌ರನ್ನು ಕೇಳಿದ್ದರು ಎನ್ನಲಾಗಿದ್ದು, ಅದಕ್ಕೂ ಅವರು ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.