Asianet Suvarna News Asianet Suvarna News

Team India : ಹಾರ್ದಿಕ್ ಪಾಂಡ್ಯ ಅವರದ್ದು "ವೀಕ್ ಬಾಡಿ" ಪಾಕ್ ಮಾಜಿ ಕ್ರಿಕೆಟಿಗ!

ಕ್ರಿಕೆಟ್ ನ ಯಾವುದೇ ಮಾದರಿಯಲ್ಲೂ ಅವರು ಸಕ್ಸಸ್ ಆಗಲ್ಲ
ಹಾರ್ದಿಕ್ ಪಾಂಡ್ಯ ಸ್ವಲ್ಪ ವರ್ಕ್ ಔಟ್ ಮಾಡಬೇಕು
ಪಾಕಿಸ್ತಾನದ ಮಾಜಿ ಬ್ಯಾಟ್ಸ್ ಮನ್ ಸಲ್ಮಾನ್ ಬಟ್ ಹೇಳಿಕೆ 

Hardik Pandyas body is so weak that he cant even survive in a single format says Salman Butt san
Author
Bengaluru, First Published Dec 24, 2021, 9:01 PM IST

ನವದೆಹಲಿ (ಡಿ. 24): ಟೀಂ ಇಂಡಿಯಾದ (Team India) ಅಗ್ರ ಆಲ್ರೌಂಡರ್ (all-rounder) ಹಾರ್ದಿಕ್ ಪಾಂಡ್ಯ (Hardik Pandya) ಇತ್ತಿಚೆಗೆ ಕಳಪೆ ಫಾರ್ಮ್ ನಲ್ಲಿದ್ದಾರೆ. ಟಿ20 ವಿಶ್ವಕಪ್ ನಲ್ಲಿ(T20 World Cup 2021) ಅವರ ನೀರಸ ನಿರ್ವಹಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ (Pakistan) ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ (Salman Butt), ಹಾರ್ದಿಕ್ ಪಾಂಡ್ಯ ಅವರದ್ದು ಬಹಳ ದುರ್ಬಲ ದೇಹ. ಅವರು ಕ್ರಿಕೆಟ್ ನ ಅತ್ಯಂತ ಚಿಕ್ಕ ಮಾದರಿಯಾಗಿರುವ ಟಿ20ಯಲ್ಲಿಯೂ ಯಶಸ್ಸು ಕಾಣೋದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಹಾರ್ದಿಕ್ ಪಾಂಡ್ಯ ಕೇವಲ 4 ಓವರ್ ಬೌಲಿಂಗ್ ಮಾಡಿದ್ದರೆ, ಐಪಿಎಲ್ 2021 ಅಲ್ಲಿ (IPL 2021) ಮುಂಬೈ ಇಂಡಿಯನ್ಸ್ (Mumbai Indians) ಪರವಾಗಿ ಒಂದೇ ಒಂದು ಎಸೆತ ಹಾಕಿರಲಿಲ್ಲ. ಇದರ ನಡುವೆ ಮುಂಬೈ ಇಂಡಿಯನ್ಸ್ ಕೂಡ ಅವರನ್ನು ರಿಟೇನ್ ಮಾಡಿಕೊಳ್ಳಲು ಹಿಂಜರಿದಿದೆ. ಮುಂಬರುವ ಐಪಿಎಲ್ ಹರಾಜಿನಲ್ಲಿ ಹಾರ್ದಿಕ್ ಪಾಂಡ್ಯ ದೊಡ್ಡ ಮೊತ್ತಕ್ಕೆ ಮಾರಾಟವಾಗಬಹುದಾದರೂ, ಅವರನ್ನು ಆಯ್ದುಕೊಳ್ಳುವ ತಂಡ, ಹಾರ್ದಿಕ್ ಅವರಿಂದ ಆಲ್ರೌಂಡ್ ನಿರ್ವಹಣೆಯನ್ನು ಬಯಸಲಿದೆ.

ಹಾರ್ದಿಕ್ ಪಾಂಡ್ಯ ಅವರ ನಿರ್ವಹಣೆಯ ಕುರಿತಾಗಿ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ( YouTube channel ಮಾತನಾಡಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ, "ಹಾರ್ದಿಕ್ ಅವರದ್ದು ಬಹಳ ವೀಕ್ ಬಾಡಿ. ಇದರಿಂದಾಗಿ ಕ್ರಿಕೆಟ್ ನ ಕನಿಷ್ಠ ಒಂದು ಮಾದರಿಯಲ್ಲಾದರೂ ಯಶಸ್ಸು ಕಾಣುವ ಅವರ ಆಸೆಗೆ ಹಿನ್ನಡೆಯಾಗುತ್ತಿದೆ. ಮೂರೂ ಮಾದರಿಯಲ್ಲಿ ಯಶಸ್ಸು ಕಾಣಬೇಕಾದಲ್ಲಿ ಸಾಕಷ್ಟು ಶಕ್ತಿ ಬೇಕು. ಆದರೆ, ಅವರ ದುರ್ಬಲ ದೇಹದಿಂದಾಗಿ ಇದು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ. 2018ರ ಏಷ್ಯಾಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಒದಲ ಬಾರಿಗೆ ಬೆನ್ನು ನೋವಿನ ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಅವರ ಆಟದ ಮೇಲೆ ಗಾಯ ಬಳಷ್ಟು ಪ್ರಭಾವ ಬೀರಿದೆ. ಅಂದು ಗಾಯಗೊಂಡಿದ್ದ ಹಾರ್ದಿಕ್ ಅವರನ್ನು ಸ್ಟ್ರೆಚರ್ ನಲ್ಲಿಹೊರತರಲಾಗಿತ್ತು. ಆ ಬಳಿಕ ಮೂರು ತಿಂಗಳು ಅವರು ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದರು.

"ಹಾರ್ದಿಕ್ ಪಾಂಡ್ಯ ಅವರನ್ನು ನೋಡಿದರೆ ತಿಳಿಯುತ್ತದೆ. ಅವರ ದೇಹ ಬಹಳ ವೀಕ್. ಕನಿಷ್ಠ ಒಂದು ಮಾದರಿಯಲ್ಲಿ ಅವರು ಸಕ್ಸಸ್ ಆಗುವುದು ಕಷ್ಟ. ಸ್ವಲ್ಪ ತೂಕ ಏರಿಸಿಕೊಂಡು ಬಲಾಢ್ಯರಾಗಿ ಕಾಣಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯ ತರಬೇತಿ ಹಾಗೂ ಡಯಟ್ ಅನ್ನು ಅವರ ಪಾಲಿಸಬೇಕು. ಇತ್ತೀಚೆಗೆ ರವಿಶಾಸ್ತ್ರಿ (Ravi Shastri)  ಕೂಡ ಇದನ್ನೇ ಹೇಳಿದ್ದರು. ಹಾರ್ದಿಕ್ ಇನ್ನಷ್ಟು ಪರಿಶ್ರಮ ವಹಿಸಿ ಟಿ20ಯಲ್ಲಿ 4 ಓವರ್ ಎಸೆಯಲು ಪ್ರಯತ್ನ ಪಡಬೇಕು. ಇದರ ಅರ್ಥ ಏನೆಂದರೆ, ಪ್ರಸ್ತುತ ಅವರು 4 ಓವರ್ ಗಳನ್ನು ಸೂಕ್ತವಾಗಿ ಹಾಕಲು ಸಾಧ್ಯವಾಗುತ್ತಿಲ್ಲ ಎನ್ನುವುದಾಗಿದೆ" ಎಂದು ಪಾಕ್ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಹೇಳಿದ್ದಾರೆ.

Hardik Pandya Watch Controversy: ದುಬಾರಿ ವಾಚ್‌ ಬಗ್ಗೆ ಸ್ಪಷ್ಟನೆ ಕೊಟ್ಟ ಟೀಂ ಇಂಡಿಯಾ ಆಲ್ರೌಂಡರ್..!
ಕಳಪೆ ಫಾರ್ಮ್ ನೊಂದಿಗೆ ಒಂದರ ಹಿಂದೆ ಒಂದರಂತೆ ಆಗುತ್ತಿರುವ ಗಾಯಗಳೂ ಕ್ರಿಕೆಟ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಸುಗಮ ಆಟಕ್ಕೆ ಅಡ್ಡಿಯಾಗಿದೆ. ಪ್ರಸ್ತುತ ಟೀಂ ಇಂಡಿಯಾದ ಯಾವ ಮಾದರಿಯ ತಂಡದಲ್ಲೂ ಹಾರ್ದಿಕ್ ಪಾಂಡ್ಯಗೆ ಖಾಯಂ ಆದ ಸ್ಥಾನವಿಲ್ಲ. ಕಳೆದ ಎರಡು ವರ್ಷಗಳಲ್ಲಿ ಬರೋಡದ (Baroda)ಆಲ್ರೌಂಡರ್ ಕಂಡಿರುವ ಇಂಜುರಿಗಳಿಂದಾಗಿ, ಟೀಂ ಇಂಡಿಯಾಕ್ಕೆ ಆಯ್ಕೆಯಾದರೂ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಬ್ಯಾಟ್ಸ್ ಮನ್ ಆಗಿ ಮಾತ್ರವೇ ಹಾರ್ದಿಕ್ ಪಾಂಡ್ಯರನ್ನು ಆಡಿಸಲು ಸಾಧ್ಯವಿಲ್ಲದಂತ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಇದೆ.

Follow Us:
Download App:
  • android
  • ios