IPL: ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯಗೆ ಕೋಕ್?
*ಹಾರ್ದಿಕ್‌ರನ್ನು ಉಳಿಸಿಕೊಳ್ಳದಿರಲು ನಿರ್ಧರಿಸಿದ ಮುಂಬೈ ಇಂಡಿಯನ್ಸ್
*ಡೆಲ್ಲಿ ಕ್ಯಾಪಿಟಲ್ಸ್ ತೊರೆಯಲಿರುವ ಶ್ರೆಯಸ್ ಐಯ್ಯರ್
*ಮುಂದಿನ ಐಪಿಎಲ್ ಟೂರ್ನಿಗೆ 10 ತಂಡಗಳು!
ನವದೆಹಲಿ(ಅ. 29 ): 2022ರ ಐಪಿಎಲ್‌ಗೆ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ತಾರಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾರ್ದಿಕ್‌ರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳದಿರಲು ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇತ್ತೀಚೆಗೆ ಬಿಸಿಸಿಐ (BCCI) ಹಾಗೂ ತಂಡಗಳ ಮಾಲಿಕರ ನಡುವೆ ನಡೆದ ಮಾತುಕತೆ ವೇಳೆ, ಬಿಸಿಸಿಐ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವುದಾಗಿ ತಿಳಿಸಿದೆ ಎನ್ನಲಾಗಿದೆ.
IPL: ಬೆಟ್ಟಿಂಗ್ ಸಂಸ್ಥೆಗಳಲ್ಲಿ ಪಾಲುದಾರ ಸಿವಿಸಿ ಐಪಿಎಲ್ ತಂಡ ಮಾಲಿಕರು!
ನಾಲ್ವರಲ್ಲಿ ಗರಿಷ್ಠ 3 ಭಾರತೀಯರು, ಇಬ್ಬರು ವಿದೇಶಿಗರನ್ನು ಉಳಿಸಿಕೊಳ್ಳಲು ಅವಕಾಶವಿರಲಿದೆ. ಎಂದರೆ ತಂಡಗಳು ಮೂರು ಭಾರತೀಯರು, ಒಬ್ಬ ವಿದೇಶಿ ಆಟಗಾರ ಇಲ್ಲವೇ ತಲಾ ಇಬ್ಬರು ಭಾರತೀಯರು ಹಾಗೂ ವಿದೇಶಿಗರನ್ನು ಉಳಿಸಿಕೊಳ್ಳಲು ಅವಕಾಶವಿರಲಿದೆ. ಮೂಲಗಳ ಪ್ರಕಾರ, ಮುಂಬೈ ತಂಡವು ರೋಹಿತ್ ಶರ್ಮಾ (Rohit Sharma), ಜಸ್‌ಪ್ರೀತ್ ಬೂಮ್ರಾ (Jasprit Bumrah) ಹಾಗೂ ಕೀರನ್ ಪೊಲ್ಲಾರ್ಡ್‌ರನ್ನು (Kieron Pollard)ಉಳಿಸಿಕೊಳ್ಳಲು ನಿರ್ಧರಿಸಿದ್ದು, 4ನೇ ಆಟಗಾರನ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ. ಈ ಬಾರಿ ಹರಾಜಿನಲ್ಲಿ ರೈಟ್ ಟು ಮ್ಯಾಚ್ ಕಾರ್ಡ್ ಬಳಕೆಗೆ ಅವಕಾಶ ನೀಡದಿರಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ.
T20 World Cup 2021: ಮೊಹಮ್ಮದ್ ಶಮಿ ನಿಂದನೆ ಹಿಂದೆ ಪಾಕಿಸ್ತಾನ ಪಿತೂರಿ ಬಯಲು!
ಹರಾಜಿಗೂ ಮುನ್ನ 2 ಹೊಸ ತಂಡಗಳಿಗೆ ತಲಾ 3 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಡೇವಿಡ್ ವಾರ್ನರ್ ಸೇರಿ ಅನೇಕ ತಾರಾ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಡಿಸೆಂಬರ್‌ನಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ.
ದೆಲ್ಲಿ ಕ್ಯಾಪಿಟಲ್ಸ್‌ನಿಂದ ಶ್ರೇಯಸ್ ಐಯ್ಯರ್ ಹೊರಗೆ?
2022ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಐಯ್ಯರ್ (Shreyas Iyer) ದೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವುದಿಲ್ಲ ಎಂದು ವರದಿಗಳು ತಿಳಿಸಿವೆ. 2021ರ ಐಪಿಎಲ್ ಪ್ಲೇ ಆಫ್ಸ್‌ವರೆಗೂ ನಾಯಕ ರಿಷಬ್ ಪಂತ್ (Rishab Pant) ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಹಾಗಾಗಿ ತಂಡದ ನಾಯಕತ್ವದ ನಿರಿಕ್ಷೆಯಲ್ಲಿರುವ ಶ್ರೇಯಸ್ ಐಯ್ಯರ್‌ಗೆ ದೆಲ್ಲಿ ಕ್ಯಾಪಿಟಲ್ಸ್ ನಿರಾಸೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ಶ್ರೇಯಸ್ ಅಯ್ಯರ್ ತಂಡವನ್ನು ತೊರೆಯುವ ಸಾಧ್ಯತೆ ಇದೆ. ಅಯ್ಯರ್ ನಾಯಕತ್ವದಲ್ಲಿ ದೆಲ್ಲಿ ಎರಡು ಬಾರಿ ಪ್ಲೇ ಆಫ್ಸ್ ಪ್ರವೇಶಿಸಿತ್ತು.
ಹಿತಾಸಕ್ತಿಯ ಸಂಘರ್ಷ; ಮೋಹನ್ ಬಗಾನ್‌ಗೆ BCCI ಅಧ್ಯಕ್ಷ ಗಂಗೂಲಿ ವಿದಾಯ.?
ಐಪಿಲ್‌ನಲ್ಲಿ ಎರಡು ಹೊಸ ತಂಡಗಳಿಗೆ ನಾಯಕರ ಅವಶ್ಯಕತೆ ಇದೆ, ಅಲ್ಲದೇ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಹೊಸ ನಾಯಕರ ನಿರಿಕ್ಷೆಯಲ್ಲಿವೆ ಎಂದು ಹೇಳಲಾಗಿದೆ. ಇತ್ತ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ತೊರೆದಿದ್ದಾರೆ. ಹಾಗಾಗಿ ಬೆಂಗಳೂರು ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ. ಈ ಹಿನ್ನೆಲೆ ಈ ಅವಕಾಶಗಳನ್ನು ಶ್ರೇಯಸ್ ಅಯ್ಯರ್‌ಗೆ ವರದಾನವಾಗಲಿದೆ ಎಂದು ಹೇಳಲಾಗಿದೆ.
ಮುಂದಿನ ಐಪಿಎಲ್ ಟೂರ್ನಿಗೆ 10 ತಂಡಗಳು!
ಮುಂದಿನ ಐಪಿಎಲ್ ಟೂರ್ನಿಗೆ 10 ತಂಡಗಳು ಹೋರಾಟ ನಡೆಸಲಿದೆ. ಸೋಮವಾರ (ಅ. 25) ದುಬೈನಲ್ಲಿ ನಡೆದ ಹೊಸ ತಂಡಗಳ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಬಿಸಿಸಿಐ ಅಹಮ್ಮದಾಬಾದ್ (Ahmdabad) ಹಾಗೂ ಲಕ್ನೌ (Lucknow) ತಂಡಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. ಮುಂದಿನ ಐಪಿಎಲ್ ಟೂರ್ನಿಯಲ್ಲಿ ಅಹಮ್ಮದಾಬಾದ್ ಹಾಗೂ ಲಕ್ನೌ ತಂಡ ಸೇರ್ಪಡೆಗೊಳ್ಳುತ್ತಿದೆ. ಸಂಜೀವ್ ಗೊಯಂಕಾ ಮಾಲೀಕತ್ವದ RPSG ಹಾಗೂ ಲಂಡನ್ ಮೂಲದ ಸಿವಿಸಿ ಕ್ಯಾಪಿಟಲ್ ಬಿಡ್ ಗೆದ್ದುಕೊಂಡಿದೆ. ಸಂಜೀವ್ ಗೊಯೆಂಕಾ 7,090 ಕೋಟಿ ರೂಪಾಯಿಗೆ ತಂಡ ಖರೀದಿಸಿದರೆ, ಸಿವಿಸಿ ಕ್ಯಾಪಿಟಲ್ 5,600 ಕೋಟಿ ರೂಪಾಯಿಗೆ ತಂಡ ಖರೀದಿಸಿತ್ತು.