ಮುಂಬೈ(ಜ.01): ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ವರ್ಷದ ಮುಂಜಾನೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಬಾಲಿವುಡ್ ನಟಿ ನತಾಶ ಸ್ಟಾಂಕೋವಿಚ್ ಜೊತೆಗಿನ ಗಪ್ ಚುಪ್ ಪ್ರೀತಿ ರಹಸ್ಯವನ್ನು ಬಹಿರಂಗ ಪಡಿಸಿದ್ದರು. ಈ ಸುದ್ದಿಯನ್ನು ಪಾಂಡ್ಯ ಮಹಿಳಾ ಅಭಿಮಾನಿಗಳು ಅರಗಿಸಿಕೊಳ್ಳೋ ಮೊದಲೇ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಸದ್ದಿಲ್ಲದೆ ಎಂಗೇಜ್‌ಮೆಂಟ್ ಮುಗಿಸಿದ್ದಾರೆ.

ಇದನ್ನೂ ಓದಿ: ಗಪ್ ಚುಪ್ ಪ್ರೀತಿ ಬಹಿರಂಗ ಪಡಿಸಿದ ಹಾರ್ದಿಕ್ ಪಾಂಡ್ಯ!

ಮನ್ಸೂರ್ ಅಲಿ ಖಾನ್- ಶರ್ಮಿಳಾ ಠಾಗೋರ್, ಮೊಹಮ್ಮದ್ ಅಜರುದ್ದೀನ್- ಸಂಗೀತ್ ಬಿಜ್ಲಾನಿ, ಹರ್ಭಜನ್ ಸಿಂಗ್-ಗೀತಾ ಬಸ್ರಾ, ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಜೋಡಿ ಬಳಿಕ ಕ್ರಿಕೆಟ್ ಹಾಗೂ ಬಾಲಿವುಡ್ ಸಂಬಂಧ ಮುಂದುವರಿದಿದೆ. ಈ ಲಿಸ್ಟ್‌ಗೆ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಚ್ ಸೇರಿಕೊಂಡಿದ್ದಾರೆ.

 

 
 
 
 
 
 
 
 
 
 
 
 
 

Mai tera, Tu meri jaane, saara Hindustan. 👫💍 01.01.2020 ❤️ #engaged

A post shared by Hardik Pandya (@hardikpandya93) on Jan 1, 2020 at 4:02am PST

ಇದನ್ನೂ ಓದಿ: ಗೆಳತಿ ಜೊತೆ ಥಾಯ್ಲೆಂಡ್‌ನಲ್ಲಿ ಹೊಸ ವರ್ಷ ಆಚರಿಸಿದ ಕೆಎಲ್ ರಾಹುಲ್!

ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಂ ಖಾತೆ ಮೂಲಕ ಎಂಗೇಜ್‌ಮೆಂಟ್ ಬಹಿರಂಗ ಪಡಿಸಿದ್ದಾರೆ.  ಈ ಜೋಡಿ ಈಗಾಗಲೇ ಹಲವು ಬಾರಿ ಜೊತಯಾಗಿ ಕಾಣಿಸಿಕೊಂಡಿತ್ತು. ಆದರೆ ಎಲ್ಲೂ ಕೂಡ ಪ್ರೀತಿ ಕುರಿತು ಹೇಳಿಕೊಂಡಿರಲಿಲ್ಲ. ಇದೀಗ ಎಂಗೇಜ್ಮೆಂಟ್ ಮೂಲಕ ಅಚ್ಚರಿ ನೀಡಿದ್ದಾರೆ. ಇದೀಗ ಅಭಿಮಾನಿಗಳು ಪಾಂಡ್ಯ ಹಾಗೂ ನತಾಶ ಮದುವೆ ಯಾವಾಗ ಅನ್ನೋ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.