* ಅತ್ಯಂತ ಸಡಗರದಿಂದ ಓಣಂ ಹಬ್ಬ ಆಚರಣೆ* ಓಣಂ ಹಬ್ಬಕ್ಕೆ ಶುಭಕೋರಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು* ಹಲವು ಕ್ರಿಕೆಟಿಗರಿಂದ ಓಣಂ ಹಬ್ಬಕ್ಕೆ ಶುಭ ಹಾರೈಕೆ

ಬೆಂಗಳೂರು(ಆ.21): ಕೇರಳದ ಮಲೆಯಾಳಿಗಳ ಅತ್ಯಂತ ವಿಶೇಷವಾದ ಹಬ್ಬವೆಂದರೆ ಅದು ಓಣಂ. 10 ದಿನಗಳ ಕಾಲ ಮಲೆಯಾಳಿ ಸಮುದಾಯದವರು ಅತ್ಯಂತ ಸಂತೋಷ ಹಾಗೂ ಸಡಗರದಿಂದ ಓಣಂ ಹಬ್ಬವನ್ನು ಆಚರಿಸುತ್ತಾರೆ. ಒಳ್ಳೆಯ ಫಸಲು ಹಾಗೂ ಇಳುವರಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮಲ್ಲಿ ಸಂಕ್ರಾಂತಿ ಹಬ್ಬದಂತೆ ಕೇರಳದಲ್ಲಿ ಓಣಂ ಹಬ್ಬವನ್ನು ಆಚರಿಸುತ್ತಾರೆ.

ಓಣಂ ಹಬ್ಬಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೇರಿದಂತೆ ಹಲವು ಐಪಿಎಲ್‌ ಕ್ರಿಕೆಟ್‌ ಫ್ರಾಂಚೈಸಿಗಳು ಹಾಗೂ ಕ್ರಿಕೆಟಿಗರು ವಿನೂತನವಾಗಿ ಶುಭಕೋರಿದ್ದಾರೆ. ಬೆಂಗಳೂರು ಮೂಲದ ಫ್ರಾಂಚೈಸಿಯಾದ ಆರ್‌ಸಿಬಿಯ ಆಟಗಾರರಾದ ದೇವದತ್ ಪಡಿಕ್ಕಲ್‌, ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಕೆಲವು ಕ್ರಿಕೆಟಿಗರು ಮಲೆಯಾಳಿಯಲ್ಲಿಯೇ ಅಭಿಮಾನಿಗಳಿಗೆ ಓಣಂ ಹಬ್ಬದ ಶುಭ ಕೋರಿದ್ದಾರೆ.

Scroll to load tweet…
Scroll to load tweet…
Scroll to load tweet…

ಇನ್ನು ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌, ಮೂರು ಬಾರಿಯ ಐಪಿಎಲ್ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿ ಕೂಡಾ ಟ್ವೀಟ್‌ ಮೂಲಕ ಶುಭ ಕೋರಿದೆ.

ಕನ್ನಡಿಗ ಕೆ.ಎಲ್. ರಾಹುಲ್, ರವೀಂದ್ರ ಜಡೇಜಾ, ಸಂಜು ಸ್ಯಾಮ್ಸನ್‌ ಸೇರಿದಂತೆ ಹಲವು ಕ್ರಿಕೆಟಿಗರು ಓಣಂ ಹಬ್ಬಕ್ಕೆ ಶುಭ ಕೋರಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…