Asianet Suvarna News Asianet Suvarna News

Rahul Dravid Birthday ಕ್ರಿಕೆಟ್‌ನ ಎಲ್ಲಾ ಜವಾಬ್ದಾರಿ ನಿರ್ವಹಿಸಿದ ಮಗಧೀರ, ದಿ ವಾಲ್‌ಗೆ ಹುಟ್ಟುಹಬ್ಬದ ಸಡಗರ!

  • 49ನೇ ವಸಂತಕ್ಕೆ ಕಾಲಿಟ್ಟ ಕೋಚ್ ರಾಹುಲ್ ದ್ರಾವಿಡ್
  • ಕ್ರಿಕೆಟಿಗನಾಗಿ, ನಾಯಕನಾಗಿ ಇದೀಗ ಕೋಚ್ ಆಗಿ ಮಹತ್ವದ ಮೈಲಿಗಲ್ಲು
  • ದಿ ವಾಲ್ ಖ್ಯಾತಿಯ ದ್ರಾವಿಡ್ ಪ್ರಭಾವ ಭಾರತದ ಕ್ರಿಕೆಟ್ ಮೇಲೆ ಹಚ್ಚಹಸಿರು
Happy Birthday Rahul Dravid Team India head coach legend batsman celebrates his 49th birthday ckm
Author
Bengaluru, First Published Jan 11, 2022, 10:59 AM IST

ಬೆಂಗಳೂರು(ಜ.11); ಕ್ರಿಕೆಟಿಗನಾಗಿ, ಬ್ಯಾಟ್ಸ್‌ಮನ್ ಆಗಿ, ವಿಕೆಟ್ ಕೀಪರ್ ಆಗಿ, ಆರಂಭಿಕ ಕ್ರಮಾಂಕದಿಂದ ಎಲ್ಲಾ ಕ್ರಮಾಂಕದಲ್ಲಿ ಯಶಸ್ವಿಯಾಗಿ ಬ್ಯಾಟಿಂಗ್ ಮಾಡಿದ, ಇದೀಗ ಕೋಚ್ ಆಗಿ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ ರಾಹುಲ್ ದ್ರಾವಿಡ್(Rahul Dravid). ತಂಡ ಹೇಳಿದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಮಗಧೀರ ನಮ್ಮ ರಾಹುಲ್ ದ್ರಾವಿಡ್. ಇದೀಗ ಭಾರತ ಕ್ರಿಕೆಟ್ ತಂಡವನ್ನು ಮತ್ತಷ್ಟು ಯಶಸ್ಸಿನತ್ತ ಕೊಂಡೊಯ್ಯುತ್ತಿರುವ ರಾಹುಲ್ ದ್ರಾವಿಡ್‌ಗೆ ಹುಟ್ಟು ಹಬ್ಬದ(Happy Birthday Rahul Dravid) ಸಂಭ್ರಮ.

ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಸೌತ್ ಆಫ್ರಿಕಾ(South Africa Tour) ಪ್ರವಾಸದಲ್ಲಿರುವ ರಾಹುಲ್ ದ್ರಾವಿಡ್ ಟೀಂ ಇಂಡಿಯಾ(Team India) ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.  ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3ನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದ ಮೊದಲ ದಿನ ದ್ರಾವಿಡ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Ind vs SA ಶೀಘ್ರದಲ್ಲಿ ವಿರಾಟ್ ಕೊಹ್ಲಿಯಿಂದ ದೊಡ್ಡ ಇನ್ನಿಂಗ್ಸ್‌ ಬರಲಿದೆ ಎಂದ ಕೋಚ್ ರಾಹುಲ್‌ ದ್ರಾವಿಡ್‌ 

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರಾಹುಲ್ ದ್ರಾವಿಡ್ ಕ್ರಿಕೆಟ್ ಸೇವೆ ನಿರಂತರವಾಗಿ ಸಾಗಿದೆ. 2012ರಲ್ಲಿ ದ್ರಾವಿಡ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕವೂ ದ್ರಾವಿಡ್ ಕ್ರಿಕೆಟ್ ಸೇವೆ ಮುಂದುವರಿದಿದೆ. ಐಪಿಎಲ್ ಹಾಗೂ ಟೀಂ ಇಂಡಿಯಾದಲ್ಲಿ ಹಲವು ಜವಾಬ್ದಾರಿ ನಿರ್ವಹಿಸಿದ ದ್ರಾವಿಡ್ ಇದೀಗ ಟೀಂ ಇಂಡಿಯಾ ಕ್ರಿಕೆಟ್‌ನ ಅತ್ಯುನ್ನತ ಜವಾಬ್ದಾರಿಯಾಗಿರುವ ಕೋಚ್(Team India Coach) ಸ್ಥಾನ ಅಲಂಕರಿಸಿದ್ದಾರೆ.

ದ್ರಾವಿಡ್ ಕೋಚ್ ಸ್ಥಾನ ಜವಾಬ್ದಾರಿ ವಹಿಸಿದ ಮೊದಲ ಸರಣಿ ಭಾರತ ಹಾಗೂ ಸೌತ್ ಆಫ್ರಿಕಾ. ಈ ಸರಣಿಯ ಮೊದಲ ಪಂದ್ಯದಲ್ಲೇ ರಾಹುಲ್ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ. ಸದ್ಯ 3 ಪಂದ್ಯಗಳ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಇಂದಿನಿಂದ(ಜ.11) ಆರಂಭಗೊಳ್ಳಲಿರುವ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸರಣಿ ಯಾರಿಗೆ ಅನ್ನೋದು ನಿರ್ಧರಿಸಲಿದೆ.

Ind vs SA: ಬಾಕ್ಸಿಂಗ್ ಡೇ ಟೆಸ್ಟ್ ಗೆಲುವಿನ ಬಳಿಕ ಕುಣಿದು ಸಂಭ್ರಮಿಸಿದ ಕೊಹ್ಲಿ, ದ್ರಾವಿಡ್‌

ದ್ರಾವಿಡ್ ದಿಗ್ಗಜನ ಹೆಸರು ಕೇಳದ ತಕ್ಷಣ ಹಲವು ಸ್ಮರಣೀಯ ಕ್ರಿಕೆಟ್ ನೆನಪುಗಳು ಕಣ್ಣಮುಂದೆ ಹಾಸುಹೋಗುತ್ತದೆ. ಇಂತಹ ಹಲವು ನೆನಪುಗಳಲ್ಲಿ ಆಯ್ದ ಇನ್ನಿಂಗ್ಸ್ ಝಲಕ್ ಇಲ್ಲಿದೆ:

ಈಡನ್ ಗಾರ್ಡನ್ಸ್, ದ್ರಾವಿಡ್ 180 vs ಆಸ್ಟ್ರೇಲಿಯಾ
 ಈ ಇನ್ನಿಂಗ್ಸ್‌ಗಳ ಪೈಕಿ 2000ನೇ ಇಸವಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ 180 ರನ್ ಇನ್ನಿಂಗ್ಸ್ ವಿಶ್ವದ ಯಾವ ಕ್ರಿಕೆಟ್ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ. ಪ್ರವಾಸಿ ಆಸ್ಟ್ರೇಲಿಯಾ ತಂಡ ಭಾರತದ ಮೇಲೆ ಫಾಲೋಆನ್ ಹೇರಿ ಪ್ರಾಬಲ್ಯ ಸಾಧಿಸಿತ್ತು. ಸೋಲಿನ ಸುಳಿಗೆ ಸಿಲುಕಿದ್ದ ತಂಡಕ್ಕೆ ರಾಹುಲ್ ದ್ರಾವಿಡ್ ಹಾಗೂ ವಿವಿ ಎಸ್ ಲಕ್ಷ್ಮಣ್ ಆಸರೆಯಾಗಿದ್ದರು. ಇವರಿಬ್ಬರು 386 ರನ್ ಜೊತೆಯಾಟ ನೀಡಿದ್ದರು. ಗೊಡೆಯಂತೆ ನಿಂತು ತಂಡಕ್ಕೆ 171 ರನ್‌ಗಳ ಗೆಲುವು ತಂದುಕೊಟ್ಟಿದ್ದರು. ಸೋಲಿನ ದವೆಡೆಯಿಂದ ಪಾರು ಮಾಡಿ ತಂಡಕ್ಕೆ ಅಭೂತಪೂರ್ವ ಗೆಲುವು ತಂದುಕೊಟ್ಟ ಕೀರ್ತಿ ದ್ರಾವಿಡ್‌ಗಿದೆ.

ಆಡಿಲೇಡ್ ಓವಲ್, ದ್ರಾವಿಡ್ 233 vs ಆಸ್ಟ್ರೇಲಿಯಾ
ಭಾರತ ಹಾಗೂ ವಿದೇಶಿ ಪಿಚ್‌ಗಳಲ್ಲಿ ರಾಹುಲ್ ದ್ರಾವಿಡ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ದ್ರಾವಿಡ್ ಟೆಸ್ಟ್ ಕ್ರಿಕೆಟ್‌ನ ಗ್ರೇಟೆಸ್ಟ್ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2003ರಲ್ಲಿ ಆಡಿಲೇಡ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸಿಡಿಸಿದ 566 ರನ್  ಟೀಂ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿತು. ಆದರೆ ರಾಹುಲ್ ದ್ರಾವಿಡ್ 233 ರನ್ ಸಿಡಿಸಿದರೆ, ವಿವಿಎಸ್ ಲಕ್ಷ್ಮಣ್ 148 ರನ್ ಮೂಲಕ 303 ರನ್ ಜೊತೆಯಾಟ ನೀಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 72 ರನ್ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ರಾಜಸ್ಥಾನ ರಾಯಲ್ಸ್ ಮೆಂಟರ್ ಆಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. 2016ರಲ್ಲಿ ಭಾರತ ಅಂಡರ್ 19 ತಂಡ ಕೋಚ್ ಆಗಿ ಕಾರ್ಯನಿರ್ವಹಿಸಿದ ದ್ರಾವಿಡ್, ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ ಮೆಂಟರ್ ಆಘಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಇನ್ನು 2019ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.  ರವಿ ಶಾಸ್ತ್ರಿ ಅವಧಿ ಮುಗಿದ ಬಳಿಕ ಇದೀಗ ಟೀಂ ಇಂಡಿಯಾ ಕೋಚ್ ಸ್ಥಾನ ಅಲಂಕರಿಸಿದ ದ್ರಾವಿಡ್ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ಡಾಟ್ ಕಾಂ ಹಾಗೂ ಸಮಸ್ತ ಓದುಗರ ಪರವಾಗಿ ದ್ರಾವಿಡ್‌ಗೆ ಹುಟ್ಟುಹಬ್ಬದ ಶುಭಾಶಯಕೋರುತ್ತಿದೆ.
 

Follow Us:
Download App:
  • android
  • ios