ಹೈದರಾಬಾದ್‌(ಮಾ.13): ಟೀಂ ಇಂಡಿಯಾ ಯುವ ವೇಗಿ ಮೊಹಮ್ಮದ್ ಸಿರಾಜ್‌ ಶನಿವಾರ(ಮಾ.13)ದಂದು ತಮ್ಮ 27ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಸಿರಾಜ್‌ಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.

ಕೆಲ ತಿಂಗಳ ಹಿಂದಷ್ಟೇ ಆಸ್ಟ್ರೇಲಿಯಾ ವಿರುದ್ದ ಮುಕ್ತಾಯವಾದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳೆ ರೆಡ್‌ ಬಾಲ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ, ಬಲಿಷ್ಠ ಕಾಂಗರೂ ಪಡೆಯನ್ನು ಅವರದ್ದೇ ನೆಲದಲ್ಲಿ ಸೋಲಿಸುವಂತೆ ಮಾಡುವಲ್ಲಿ ಮೊಹಮ್ಮದ್ ಸಿರಾಜ್‌ ಕೂಡಾ ಉಪಯುಕ್ತ ಕಾಣಿಕೆ ನೀಡಿದ್ದಾರೆ. 

ಭಾರತಕ್ಕಿಂತ ಮುಂಬೈ ಇಂಡಿಯನ್ಸ್‌ ಬಲಿಷ್ಠ ಎಂದ ಇಂಗ್ಲೆಂಡ್‌ ಮಾಜಿ ನಾಯಕನ ಬಾಯಿ ಮುಚ್ಚಿಸಿದ ಜಾಫರ್..!

ಮೊಹಮ್ಮದ್ ಸಿರಾಜ್ ಭಾರತ ಪರ ಇದುವರೆಗೂ 5 ಟೆಸ್ಟ್ ಪಂದ್ಯಗಳನ್ನಾಡಿ 16 ವಿಕೆಟ್ ಕಬಳಿಸಿದ್ದಾರೆ. ಇನ್ನು ಒಂದು ಏಕದಿನ ಹಾಗೂ 3 ಟಿ20 ಪಂದ್ಯಗಳಲ್ಲಿ ಸಿರಾಜ್‌ ಬ್ಲೂ ಜೆರ್ಸಿ ತೊಟ್ಟಿದ್ದಾರೆ. ಮೊಹಮ್ಮದ್ ಸಿರಾಜ್‌ ಹುಟ್ಟುಹಬ್ಬಕ್ಕೆ ಹಿರಿ-ಕಿರಿಯ ಆಟಗಾರರು ಸೇರಿದಂತೆ ಹಲವು ಅಭಿಮಾನಿಗಳು ಜನ್ಮದಿನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ.