ಟೀಂ ಇಂಡಿಯಾ ಟೆಸ್ಟ್‌ ತಜ್ಞ ಚೇತೇಶ್ವರ್ ಪೂಜಾರ 33ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಜ.25): ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಸೋಮವಾರ(ಜ.25)ದಂದು 33ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು ಸೌರಾಷ್ಟ್ರ ಮೂಲದ ಬ್ಯಾಟ್ಸ್‌ಮನ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಹುಟ್ಟುಹಬ್ಬದ ಶುಭಾಶಯಗಳು ಚೇತೇಶ್ವರ್ ಪೂಜಾರ. ದೇವರು ನಿಮಗೆ ಒಳ್ಳೆಯ ಆರೋಗ್ಯ, ಖುಷಿ ಹಾಗೂ ಹೆಚ್ಚುಕಾಲ ಕ್ರೀಸ್‌ನಲ್ಲಿರಲು ಶಕ್ತಿ ನೀಡಲಿ ಎಂದು ಎಂದು ವಿರಾಟ್ ಕೊಹ್ಲಿ ಟ್ವೀಟ್‌ ಮೂಲಕ ಟೆಸ್ಟ್ ಸ್ಪೆಷಲಿಸ್ಟ್ ಜನ್ಮದಿನಕ್ಕೆ ಶುಭಕೋರಿದ್ದಾರೆ.

Scroll to load tweet…

ಭಾರತ-ಇಂಗ್ಲೆಂಡ್ ಟೆಸ್ಟ್: ಅಭಿಮಾನಿಗಳ ಪ್ರವೇಶ ಕುರಿತು ಬಿಸಿಸಿಐ ನಿರ್ಧಾರ ಪ್ರಕಟ!

ಶ್ರೀಲಂಕಾ ವಿರುದ್ದ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ(143) ಬಾರಿಸಿದ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಶುಭಕೋರಿದೆ. ಭಾರತ ಪರ 81 ಟೆಸ್ಟ್‌ ಪಂದ್ಯಗಳನ್ನಾಡಿ 13572 ಎಸೆತಗಳನ್ನು ಎದುರಿಸಿ 18 ಶತಕ ಸಹಿತ 6111 ರನ್‌ ಬಾರಿಸಿದ್ದಾರೆ. 

Scroll to load tweet…

ಇತ್ತೀಚೆಗಷ್ಟೇ ಮುಕ್ತಾಯವಾದ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾ ಬೌಲರ್‌ಗಳ ಎದುರು ನೆಲಕಚ್ಚಿ ಆಡುವ ಮೂಲಕ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ಗೆಲ್ಲಲು ನೆರವಾಗಿದ್ದರು. ಚೇತೇಶ್ವರ್ ಪೂಜಾರ ಜನ್ಮದಿನಕ್ಕೆ ಹಲವು ಹಿರಿಕಿರಿಯ ಕ್ರಿಕೆಟಿಗರು ಟ್ವೀಟ್‌ ಮೂಲಕ ಶುಭ ಕೋರಿದ್ದಾರೆ.

ಟೆಸ್ಟ್‌ನಲ್ಲಿ ಆರಂಭಿಕನ ಸ್ಥಾನ ಸಿಕ್ಕರೆ ಅದು ನನ್ನ ಸೌಭಾಗ್ಯ: ಸುಂದರ್‌

Scroll to load tweet…
Scroll to load tweet…
Scroll to load tweet…