ಬೆಂಗಳೂರು[ಅ.17]: ವಿಶ್ವ ಕ್ರಿಕೆಟ್ ಕಂಡ ಖ್ಯಾತ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 49ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಭಾರತದ ಯಶಸ್ವಿ ಸ್ಪಿನ್ನರ್ ಎನಿಸಿರುವ ಕುಂಬ್ಳೆಗೆ ಸಹಪಾಠಿಗಳು ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಅಭಿನಂಧನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಪುಲ್ವಾಮ ಹುತಾತ್ಮರ ಮಕ್ಕ​ಳಿಗೆ ಸೆಹ್ವಾಗ್‌ ಶಾಲೆಯಲ್ಲಿ ಉಚಿತ ಶಿಕ್ಷಣ

ಅದರಲ್ಲೂ ಸಹಪಾಠಿಗಳ ಹುಟ್ಟಹಬ್ಬಕ್ಕೆ ತನ್ನದೇ ಆದ ಸ್ಟೈಲ್’ನಲ್ಲಿ ಶುಭ ಕೋರುವ ವಿರೇಂದ್ರ ಸೆಹ್ವಾಗ್, ಇದೀಗ ಕುಂಬ್ಳೆ ಬರ್ತ್ ಡೇ ಕ್ಷಮೆ ಕೇಳುತ್ತಲೇ ವಿನೂತನ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. 
ಭಾರತ ಕಂಡ ಅತ್ಯದ್ಭುತ ಮ್ಯಾಚ್ ವಿನ್ನರ್, ಅಮೋಘ ರೋಲ್ ಮಾಡೆಲ್. ನಿಮ್ಮ ಎರಡನೇ ಶತಕವನ್ನು ಹಾಳು ಮಾಡಿದ್ದಕ್ಕೆ ಕ್ಷಮೆ ಇರಲಿ ಕುಂಬ್ಳೆ. ಆದರೆ ನೀವು ನಿಮ್ಮ ನಿಜ ಜೀವನದಲ್ಲಿ ಶತಕ ಪೂರೈಸಲಿ ಎಂದು ಪ್ರಾರ್ಥಿಸುತ್ತೇನೆ. ಇನ್ನು ಕೇವಲ 51 ಆದರೆ ಸಾಕು. ಕಮ್ ಆನ್ ಅನಿಲ್ ಕುಂಬ್ಳೆ ಎಂದು ಟ್ವೀಟ್ ಮಾಡಿದ್ದಾರೆ.

ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆಗಿಂದು 49ನೇ ಹುಟ್ಟುಹಬ್ಬದ ಸಂಭ್ರಮ

ಅನಿಲ್ ಕುಂಬ್ಳೆ 2007ರಲ್ಲಿ ಇಂಗ್ಲೆಂಡ್ ವಿರುದ್ಧ ಓವಲ್ ಟೆಸ್ಟ್ ಪಂದ್ಯದಲ್ಲಿ ಅಜೇಯ 110 ರನ್ ಬಾರಿಸಿದ್ದರು. ಈ ಮೂಲಕ ಚೊಚ್ಚಲ ಟೆಸ್ಟ್ ಶತಕ ಪೂರೈಸಿದ್ದರು. ಆದರೆ 2008ರಲ್ಲಿ ಕುಂಬ್ಳೆ ಮತ್ತೊಂದು ಶತಕ ಬಾರಿಸುವ ಹೊಸ್ತಿಲಲ್ಲಿದ್ದರು. ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ವಿರೇಂದ್ರ ಸೆಹ್ವಾಗ್ ಮಾತು ಕೇಳಿ ದೊಡ್ಡ ಹೊಡೆತಕ್ಕೆ ಕೈಹಾಕಿ ಕೇವಲ 14 ರನ್ ಅಂತರದಲ್ಲಿ ಎರಡನೇ ಶತಕ ವಂಚಿತರಾಗಿದ್ದರು. ಆ ಕ್ಷಣವನ್ನು ನೆನಪಿಸಿಕೊಂಡು ಸೆಹ್ವಾಗ್ ಕ್ಷಮೆ ಕೇಳಿದ್ದಾರೆ.

ಸೆಹ್ವಾಗ್ ಮಾತ್ರವಲ್ಲದೇ ಗೌತಮ್ ಗಂಭೀರ್, ವಿವಿಎಸ್ ಲಕ್ಷ್ಮಣ್, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಹಿರಿಕಿರಿಯ ಕ್ರಿಕೆಟಿಗರು ಶುಭ ಕೋರಿದ್ದಾರೆ.