ಬೆಂಗಳೂರು(ಫೆ.04): ಸರ್ಚ್‌ ಇಂಜಿನ್‌ ಗೂಗಲ್‌ನಲ್ಲಿ ಕೆಲವೊಮ್ಮೆ ಏನೇನೆಲ್ಲಾ ಅವಾಂತರಗಳು ಆಗುತ್ತವೆ ಎನ್ನುವುದನ್ನು ನಾವು ಹಿಂದೆಯೇ ನೋಡಿದ್ದೇವೆ. ಇದಕ್ಕೆ ಹೊಸ ಸೇರ್ಪಡೆ ಟೀಂ ಇಂಡಿಯಾ ಕ್ರಿಕೆಟ್‌ ಕೋಚ್‌ ರವಿಶಾಸ್ತ್ರಿ ವಯಸ್ಸು.

ಹೌದು, ಗೂಗಲ್‌ನಲ್ಲಿ ನೀವೊಮ್ಮೆ ರವಿಶಾಸ್ತ್ರಿ Age ಎಂದು ಹುಡುಕಿದರೆ ನಿಮ್ಮ ಕಣ್ಣಿಗೆ ಕಾಣಸಿಗುವ ಉತ್ತರ 120 ವರ್ಷಗಳು ಎಂದು. ವಿಕಿಪಿಡಿಯಾದಲ್ಲೂ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ವಯಸ್ಸು 120  ವರ್ಷಗಳೆಂದು ತೋರಿಸುತ್ತಿದೆ. ವಿಕಿಪಿಡಿಯಾ ಪೇಜ್‌ ಪ್ರಕಾರ ರವಿಶಾಸ್ತ್ರಿ ಜನ್ಮ ದಿನಾಂಕ27 ಮೇ 1900 ಎಂದು ತೋರಿಸುತ್ತಿದೆ. ಇನ್ನು ಇಂಟ್ರೆಸ್ಟಿಂಗ್‌ ವಿಚಾರ ಏನಪ್ಪಾ ಅಂದ್ರೆ ರವಿಶಾಸ್ತ್ರಿ ಉಳಿದೆಲ್ಲಾ ಮಾಹಿತಿಗಳು ಸರಿಯಾಗಿಯೇ ತೋರಿಸುತ್ತಿದೆ. ಆದರೆ ವಾಸ್ತವ ವಿಚಾರ ಏನಪ್ಪಾ ಅಂದ್ರೆ ರವಿಶಾಸ್ತ್ರಿ 27 ಮೇ 1962ರಲ್ಲಿ ಜನಿಸಿದ್ದು, ಸದ್ಯ ಶಾಸ್ತ್ರಿಗೆ ಕೇವಲ 58 ವರ್ಷಗಳಾಗಿವೆಯಷ್ಟೇ.

ಇಂಗ್ಲೆಂಡ್‌ ಎದುರಿನ ಮೊದಲ ಟೆಸ್ಟ್‌ಗೆ ಬಲಿಷ್ಠ ಟೀಂ ಇಂಡಿಯಾವನ್ನು ಆಯ್ಕೆ ಮಾಡಿದ ಗಂಭೀರ್

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಈ ಹಿಂದೆ ಸುಖಾಸುಮ್ಮನೆ ಟ್ರೋಲ್‌ಗೆ ಒಳಗಾಗುತ್ತಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ದ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1ರಲ್ಲಿ ಗೆಲ್ಲುತ್ತಿದ್ದಂತೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ. ನೆಟ್ಟಿಗರು ಮಾತ್ರವಲ್ಲದೇ ಹಲವು ಮಾಜಿ ಕ್ರಿಕೆಟಿಗರು, ಕ್ರಿಕೆಟ್‌ ಪಂಡಿತರು ಸಹಾ ರವಿಶಾಸ್ತ್ರಿಯ ತಂತ್ರಗಾರಿಯ ಗುಣಗಾನ ಮಾಡಿದ್ದರು.