ಕೋಲ್ಕತಾ(ಜು.18): ಭಾರತ ತಂಡದ ಮಾಜಿ ನಾಯಕ, ಬಿಸಿ​ಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, 3 ತಿಂಗಳು ಸಮ​ಯಾ​ವ​ಕಾಶ ಕೊಟ್ಟರೆ ಟೆಸ್ಟ್‌ ಕ್ರಿಕೆಟ್‌ಗೆ ವಾಪ​ಸಾಗಿ ಟೀಂ ಇಂಡಿಯಾ ಪರ ಮತ್ತೆ ರನ್‌ ಗಳಿ​ಸು​ವು​ದಾಗಿ ಹೇಳಿ​ಕೊಂಡಿ​ದ್ದಾರೆ. 

ಬಂಗಾಳಿ ಪತ್ರಿಕೆಯೊಂದಕ್ಕೆ ನೀಡಿ​ರುವ ಸಂದ​ರ್ಶ​ನ​ದಲ್ಲಿ ತಾವು 2008ರಲ್ಲಿ ನಿವೃತ್ತಿ ಪಡೆ​ಯ​ದಿ​ದ್ದರೆ ಮತ್ತ​ಷ್ಟು ದಿನ​ಗಳ ಕಾಲ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿ ಉಳಿ​ಯು​ತ್ತಿದ್ದಾಗಿ ತಿಳಿ​ಸಿ​ದ್ದಾ​ರೆ. ‘ನ​ನಗೆ ಮತ್ತೊಂದೆ​ರಡು ಸರ​ಣಿ​ಗ​ಳಲ್ಲಿ ಅವ​ಕಾಶ ಕೊಟ್ಟಿ​ದ್ದರೆ ಹೆಚ್ಚು ರನ್‌ ಗಳಿ​ಸು​ತ್ತಿದ್ದೆ. ಆ ವರ್ಷ ಅತಿ​ಹೆಚ್ಚು ರನ್‌ ಗಳಿ​ಸಿ​ದರೂ ನನ್ನನ್ನೂ ಏಕ​ದಿನ ತಂಡದಿಂದ ಹೊರ​ಹಾ​ಕ​ಲಾ​ಯಿತು. ಈಗಲೂ ನನ್ನಲ್ಲಿ ಆಡುವ ಶಕ್ತಿ ಇದೆ. 3 ರಣಜಿ ಪಂದ್ಯ​ಗ​ಳಲ್ಲಿ ಆಡಿ​ದರೆ ಲಯ ಕಂಡು​ಕೊ​ಳ್ಳ​ಲಿ​ದ್ದೇನೆ. ನಂತರ ಟೆಸ್ಟ್‌ನಲ್ಲೂ ರನ್‌ ಗಳಿ​ಸ​ಲಿ​ದ್ದೇನೆ’ ಎಂದು ಗಂಗೂಲಿ ಹೇಳಿ​ದ್ದಾರೆ.

ಸ್ಟೋಕ್ಸ್‌, ಸಿಬ್ಲಿ ಶತಕ: ಬೃಹತ್ ಮೊತ್ತ ದಾಖಲಿಸಿದ ಇಂಗ್ಲೆಂಡ್‌

ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಸೌರವ್ ಗಂಗೂಲಿಯನ್ನು ಗ್ರೇಗ್ ಚಾಪೆಲ್ ಕೋಚ್ ಆಗುತ್ತಿದ್ದಂತೆ ದಾದಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ರಾಹುಲ್ ದ್ರಾವಿಡ್‌ಗೆ ಪಟ್ಟ ಕಟ್ಟಲಾಯಿತು. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೌರವ್ ಗಂಗೂಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದರಾದರೂ 2007-08ರ ಆಸ್ಟ್ರೇಲಿಯಾ ಸರಣಿಯಿಂದ ದಾದಾರನ್ನು ಕೈಬಿಡಲಾಯಿತು. ಇದರ ಬೆನ್ನಲ್ಲೇ ಸೌರವ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಇದರ ಹೊರತಾಗಿಯೂ ಸೌರವ್ 2012ರ ವರೆಗೆ ಐಪಿಎಲ್ ಹಾಗೂ ದೇಸಿ ಕ್ರಿಕೆಟ್‌ನಲ್ಲಿ ಕ್ರಿಕೆಟ್ ಆಡಿದ್ದರು.

ಸೌರವ್ 113 ಟೆಸ್ಟ್ ಪಂದ್ಯಗಳನ್ನಾಡಿ 42.17ರ ಸರಾಸರಿಯಲ್ಲಿ 16 ಶತಕ ಸಹಿತ 7212 ರನ್ ಬಾರಿಸಿದ್ದರು. ಇನ್ನು 311 ಏಕದಿನ ಪಂದ್ಯಗಳಿಂದ 41.02ರ ಸರಾಸರಿಯಲ್ಲಿ 22 ಶತಕ ಸಹಿತ 11363 ರನ್ ಗಳಿಸಿದ್ದರು.