ಆಸ್ಟ್ರೇಲಿಯಾದಲ್ಲಿ 50 ವಿಕೆಟ್: ಟೆಸ್ಟ್‌ನಲ್ಲಿ ಭಾರತೀಯ ವೇಗಿ ಬುಮ್ರಾ ಹೊಸ ದಾಖಲೆ!
ಜಸ್‌ಪ್ರೀತ್ ಬುಮ್ರಾ ಆಸ್ಟ್ರೇಲಿಯಾದಲ್ಲಿ 50ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಮಿಚೆಲ್ ಸ್ಟಾರ್ಕ್ ವಿಕೆಟ್ ಪಡೆಯುವ ಮೂಲಕ ಬೂಮ್ರಾ ಈ ಮೈಲುಗಲ್ಲು ಸಾಧಿಸಿದರು. ಕಪಿಲ್ ದೇವ್ ಅವರ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬೌಲರ್ ಇವರು.
ಬ್ರಿಸ್ಬೇನ್: ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ಮತ್ತೊಂದು ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್‌ನಲ್ಲಿ 50ಕ್ಕೂ ಹೆಚ್ಚು ವಿಕೆಟ್ ಕಿತ್ತ ಭಾರತದ 2ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೋಮವಾರ ಮಿಚೆಲ್ ಸ್ಟಾರ್ಕ್ ವಿಕೆಟ್ ಪಡೆಯುವ ಮೂಲಕ ಬೂಮ್ರಾ ಈ ಮೈಲುಗಲ್ಲು ಸಾಧಿಸಿದರು. ಅವರು 10 ಪಂದ್ಯಗಳ 19 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್ ಪೂರ್ಣಗೊಳಿಸಿದ್ದಾರೆ. ಬೂಮ್ರಾ ಹೊರತಾಗಿ ಭಾರತದ ಕಪಿಲ್ ದೇವ್ ಕೂಡಾ ಈ ಸಾಧನೆ ಮಾಡಿದ್ದಾರೆ. ಅವರು 11 ಪಂದ್ಯಗಳ 21 ಇನ್ನಿಂಗ್ಸ್‌ಗಳಲ್ಲಿ 51 ವಿಕೆಟ್ ಕಿತ್ತಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅನಿಲ್ ಕುಂಬ್ಳೆ 49, ಆರ್.ಅಶ್ವಿನ್ 40 ವಿಕೆಟ್ ಪಡೆದಿದ್ದಾರೆ.
3ನೇ ಬೌಲರ್: ಹೊರ ದೇಶವೊಂದರಲ್ಲಿ 50+ ವಿಕೆಟ್ ಕಿತ್ತ ಭಾರತದ 3ನೇ ಬೌಲರ್ ಬುಮ್ರಾ. ಇಶಾಂತ್ ಶರ್ಮಾ ಇಂಗ್ಲೆಂಡ್‌ನಲ್ಲಿ 15 ಪಂದ್ಯಗಳಲ್ಲಿ 51 ವಿಕೆಟ್ ಪಡೆದಿದ್ದಾರೆ. ಅನಿಲ್ ಕುಂಬ್ಳೆ ದ.ಆಫ್ರಿಕಾ, ವೆಸ್ಟ್‌ಇಂಡೀಸ್‌ನಲ್ಲಿ ತಲಾ 45, ಕಪಿಲ್ ದೇವ್ ಪಾಕಿಸ್ತಾನದಲ್ಲಿ 43, ಜಾವಗಲ್ ಶ್ರೀನಾಥ್ ದ.ಆಫ್ರಿಕಾದಲ್ಲಿ 43, ಮೊಹಮದ್ ಶಮಿ ಇಂಗ್ಲೆಂಡ್‌ನಲ್ಲಿ 42 ವಿಕೆಟ್ ಕಿತ್ತಿದ್ದಾರೆ.
ವಿನೋದ್ ಕಾಂಬ್ಳಿ ನಿರ್ಮಿಸಿದ ಈ 5 ರೆಕಾರ್ಡ್ಸ್ ಸಮೀಪವೂ ಕ್ರಿಕೆಟ್ ದಂತಕಥೆ ಸಚಿನ್‌ಗೆ ಬರಲು ಸಾಧ್ಯವಾಗಲಿಲ್ಲ!
03ನೇ ಅತಿ ವೇಗ: ಆಸ್ಟ್ರೇಲಿಯಾದಲ್ಲಿ ವೇಗದ 50 ವಿಕೆಟ್ ಪಡೆದವರ ಪಟ್ಟಿಯಲ್ಲಿ ಬುಮ್ರಾಗೆ 3ನೇ ಸ್ಥಾನ. ಅವರು 2141 ಎಸೆತದಲ್ಲಿ ಈ ಸಾಧನೆ ಮಾಡಿದ್ದಾರೆ. ಬ್ರೆಟ್ ಲೀ 2061, ರಿಚರ್ಡ್ ಹ್ಯಾಡ್ಲೀ 2117 ಎಸೆತದಲ್ಲಿ 50 ವಿಕೆಟ್.
ತವರಿನಾಚೆ ಟೆಸ್ಟ್‌ನಲ್ಲಿ ರಾಹುಲ್ 2000 ರನ್
ಕರ್ನಾಟಕದ ಬ್ಯಾಟರ್ ಕೆ.ಎಲ್.ರಾಹುಲ್ ತವರಿನಾಚೆ ಟೆಸ್ಟ್‌ನಲ್ಲಿ 2000 ರನ್ ಪೂರ್ಣಗೊಳಿಸಿದ್ದಾರೆ. ಅವರು 2014ರಿಂದ ಈ ವರೆಗೂ ವಿದೇಶದಲ್ಲಿ 64 ಇನ್ನಿಂಗ್ಸ್ ಆಡಿದ್ದು, 31.93ರ ಸರಾಸರಿಯಲ್ಲಿ 2012 ರನ್ ಗಳಿಸಿದ್ದಾರೆ. ಭಾರತದಲ್ಲಿ ಆಡಿರುವ 32 ಇನ್ನಿಂಗ್ಸ್‌ಗಳಲ್ಲಿ 39.62ರ ಸರಾಸರಿಯಲ್ಲಿ 1149 ರನ್ ಕಲೆಹಾಕಿದ್ದಾರೆ.
13 ವರ್ಷ ಬಳಿಕ ಭಾರತಕ್ಕೆ ಫಾಲೋ-ಆನ್ ಭೀತಿ!
ಟೆಸ್ಟ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಕೊನೆ ಬಾರಿ ಫಾಲೋ-ಆನ್‌ಗೆ ತುತ್ತಾಗಿದ್ದು 2001ರಲ್ಲಿ. ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾರತದ ಮೇಲೆ ಆಸೀಸ್ ಫಾಲೋ-ಆನ್ ಹೇರಿತ್ತು. 13 ವರ್ಷ ಬಳಿಕ ಭಾರತ ಮತ್ತೆ ಫಾಲೋ-ಆನ್ ಭೀತಿಯಲ್ಲಿದೆ. ಇದನ್ನು ತಪ್ಪಿಸಲು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕನಿಷ್ಠ 246 ರನ್ ಗಳಿಸಬೇಕಿದೆ.
ವಿನೋದ್ ಕಾಂಬ್ಳಿಗಿಂತ ಕರುಣಾಜನಕವಾಗಿದೆ ಈ ಕ್ರಿಕೆಟಿಗನ ಕಥೆ, ಚಪ್ಪಲಿ ಕೊಳ್ಳೋಕು ಕಾಸಿಲ್ಲ!
ಮಳೆ ನಡುವೆ ಜಾರಿ ಬಿದ್ದ ಟೀಂ ಇಂಡಿಯಾ!
ಬ್ರಿಸ್ಬೇನ್: ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಬ್ಯಾಟರ್ಸ್‌ಗಳ ಪ್ರದರ್ಶನ ಅದೇ ರಾಗ, ಅದೇ ಹಾಡು ಎಂಬಂತಾಗಿದೆ. ಆಸೀಸ್ ವೇಗಿಗಳ ಸವಾಲು ಮೆಟ್ಟಿನಿಲ್ಲಲು ಭಾರತ 3ನೇ ಟೆಸ್ಟ್‌ನಲ್ಲೂ ವಿಫಲವಾಗಿದ್ದು, ಆತಿಥೇಯರ ಮುಂದೆ ಅಕ್ಷರಶಃ ತತ್ತರಿಸಿ ಹೋಗಿದೆ. ಪಂದ್ಯದ 3ನೇ ದಿನ ಮತ್ತೆ ಮಳೆಯದ್ದೇ ಆಟ ನಡೆದರೂ, ಭಾರತವನ್ನು ಈ ಟೆಸ್ಟ್‌ನಲ್ಲಿ ಸೋಲಿನಿಂದ ಕಾಪಾಡಬೇಕಿದ್ದರೆ ಬಹುಶಃ ಮಳೆರಾಯನೇ ಕೃಪೆ ತೋರಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಜಸ್‌ಪ್ರೀತ್ ಬೂಮ್ರಾರನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಭಾರತೀಯ ಬೌಲಿಂಗ್ ಪಡೆಯನ್ನು ಸರಿಯಾಗಿ ಬೆಂಡೆತ್ತಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕಲೆಹಾಕಿದ್ದು ಬರೋಬ್ಬರಿ 445 ರನ್. ಇದಕ್ಕುತ್ತರವಾಗಿ ದೊಡ್ಡ ಮೊತ್ತ ಗಳಿಸಬೇಕಿದ್ದ ಭಾರತ ಮತ್ತೆ ಜಾರಿ ಬಿದ್ದಿದೆ. 3ನೇ ದಿನದಂತ್ಯಕ್ಕೆ ಭಾರತ 4 ವಿಕೆಟ್‌ಗೆ 51 ರನ್ ಗಳಿಸಿದ್ದು, ಇನ್ನೂ 394 ರನ್ ಹಿನ್ನಡೆಯಲ್ಲಿದೆ. ಫಾಲೋ-ಆಣ್ ತಪ್ಪಿಸಬೇಕಿದ್ದರೂ ತಂಡ ಇನ್ನೂ 195 ರನ್ ಗಳಿಸಬೇಕಿದೆ.