ನವದೆಹಲಿ(ಜ.02): ಜಾಹೀರಾತು ಲೋಕದ ಡಾರ್ಲಿಂಗ್‌ ಎಂದೇ ಕರೆಸಿಕೊಳ್ಳುವ ಭಾರತದ ಮಾಜಿ ಕ್ರಿಕೆಟಿಗ ಎಂ.ಎಸ್‌.ಧೋನಿ ಹಲವಾರು ಬ್ರ್ಯಾಂಡ್‌ಗಳಿಗೆ ಈಗಲೂ ರಾಯಭಾರಿಯಾಗಿದ್ದಾರೆ. 

ಇದೀಗ ಅವರ ಪುತ್ರಿ ಝಿವಾ ಸಹ ಜಾಹೀರಾತು ಲೋಕಕ್ಕೆ ಕಾಲಿಟ್ಟಿದ್ದು, ಓರಿಯೋ ಬಿಸ್ಕೆಟ್‌ನ ಜಾಹೀರಾತಿನಲ್ಲಿ ಧೋನಿ ಜೊತೆಯಲ್ಲೇ ಕಾಣಿಸಿಕೊಳ್ಳಲಿದ್ದಾಳೆ. ಈ ವಿಚಾರವನ್ನು ಬಿಸ್ಕೆಟ್‌ ಸಂಸ್ಥೆ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆ ಮೂಲಕ ಬಹಿರಂಗಪಡಿಸಿದೆ. 

ನೋಡಿ ಯಾರು ಆಟವಾಡಲು ಫೀಲ್ಡ್‌ಗೆ ಬಂದಿದ್ದಾರೆಂದು ಎಂಬ ಫೋಸ್ಟರ್ ಓರಿಯೋ ಬಿಸ್ಕೆಟ್‌ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇದೇ ಮೊದಲ ಬಾರಿಗೆ ಧೋನಿ ಮಗಳ ಜತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಝೀವಾಗೆ ನೀಡಿರುವ ಸಂಭಾವನೆ ಎಷ್ಟು ಎನ್ನುವುದನ್ನು ಸಂಸ್ಥೆ ಬಹಿರಂಗಪಡಿಸಿಲ್ಲ.

2020ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ ಟಾಪ್ 10 ಕ್ರಿಕೆಟಿಗರಿವರು

 
 
 
 
 
 
 
 
 
 
 
 
 
 
 

A post shared by Oreo (@oreo.india)

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ 35 ವರ್ಷದ ಮಹೇಂದ್ರ ಸಿಂಗ್ ಧೋನಿ, 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಇನ್ನು ಕೆಲವೇ ತಿಂಗಳುಗಳಲ್ಲಿ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಧೋನಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.