Asianet Suvarna News Asianet Suvarna News

ಕೊರೋನಾ ಎಫೆಕ್ಟ್: ಡಿವಿಲಿಯರ್ಸ್‌ ಕ್ರಿಕೆಟ್‌ ಭವಿಷ್ಯ ಈಗ ಅತಂತ್ರ..!

ಕೊರೋನಾ ವೈರಸ್ ಜನಜೀವನ ಹಾಗೂ ಕ್ರೀಡೆಯ ಮೇಲೆ ಮಾತ್ರ ಪರಿಣಾಮ ಬೀರಿಲ್ಲ, ಬದಲಾಗಿ ಕೆಲ ಕ್ರಿಕೆಟಿಗರ ವೃತ್ತಿ ಬದುಕು ದಿಕ್ಕು ಬದಲಿಸುವಂತೆ ಮಾಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದ ಎಬಿಡಿ ಕನಸು ನುಚ್ಚುನೂರಾಗುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
Former South Africa skipper AB de Villiers makes stance clear on his international comeback
Author
Johannesburg, First Published Apr 14, 2020, 8:38 AM IST
ಜೊಹಾನ್ಸ್‌ಬರ್ಗ್(ಏ.14)‌: ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡುವ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಇದರ ನಡುವೆ ಕೊರೋನಾ ಎಫೆಕ್ಟ್ ಎಬಿಡಿ ಕಮ್‌ಬ್ಯಾಕ್ ಹಾದಿಯನ್ನು ಮತ್ತಷ್ಟು ಕಠಿಣವನ್ನಾಗಿಸಿದೆ.

ಹೌದು, ವರ್ಷಾಂತ್ಯದಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ವೇಳೆಗೆ ಡಿವಿಲಿಯರ್ಸ್‌ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಕೊರೋನಾದಿಂದಾಗಿ ಎಬಿಡಿ ಅವರ ಕ್ರಿಕೆಟ್‌ ಭವಿಷ್ಯಕ್ಕೆ ಹೊಡೆತ ಬಿದ್ದಂತಾಗಿದೆ. 

ಧೋನಿ ಕಮ್‌ಬ್ಯಾಕ್ ಬಗ್ಗೆ ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದ ಗೌತಮ್ ಗಂಭೀರ್

ಮುಂದಿನ ಆರು ತಿಂಗಳಿನಲ್ಲಿ ಏನೇನಾಗುತ್ತೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಟಿ20 ವಿಶ್ವಕಪ್ ಟೂರ್ನಿ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟರೆ ಎಲ್ಲವೂ ಬದಲಾಗಿ ಹೋಗುತ್ತೆ.  ಸದ್ಯದ ಪರಿಸ್ಥಿತಿಯಲ್ಲಿ ನಾನು ತಂಡ ಕೂಡಿಕೊಳ್ಳಲು ರೆಡಿಯಿದ್ದೇನೆ. ಆದರೆ ಮುಂದೆಯೂ ನನ್ನ ದೇಹ ಇದೇ ರೀತಿ ಸ್ಪಂದಿಸಿದರೆ, ತಂಡವು ಅವಕಾಶ ನೀಡಿದರೆ ದಕ್ಷಿಣ ಆಫ್ರಿಕಾ ತಂಡದ ಪರ ಕಾಣಿಸಿಕೊಳ್ಳಲಿದ್ದೇನೆ ಎಂದು ಎಬಿಡಿ ಹೇಳಿದ್ದಾರೆ.

ವಿಶ್ವದೆಲ್ಲೆಡೆ ಕೊರೋನಾ ವೈರಸ್‌ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್‌ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ಡಿವಿಲಿಯರ್ಸ್‌ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆಫ್ರಿಕಾ ತಂಡದ ಕೋಚ್‌ ಮಾರ್ಕ್ ಬೌಚರ್‌, ಡಿವಿಲಿಯರ್ಸ್‌ರನ್ನು ರಾಷ್ಟೀಯ ತಂಡಕ್ಕೆ ಕರೆತರುವ ಉತ್ಸಾಹ ಹೊಂದಿದ್ದಾರೆ.
Former South Africa skipper AB de Villiers makes stance clear on his international comeback
Follow Us:
Download App:
  • android
  • ios