Asianet Suvarna News Asianet Suvarna News

ಐಸಿಸಿ ಎಲೈಟ್ ಮಾಜಿ ಅಂಪೈರ್ ಅಸದ್ ರೌಫ್ ನಿಧನ..!

ಐಸಿಸಿ ಮಾಜಿ ಎಲೈಟ್ ಅಂಪೈರ್ ಅಸದ್ ರೌಫ್ ಹೃದಯಾಘಾತದಿಂದ ನಿಧನ
ಅಸದ್ ರೌಫ್‌ಗೆ 66 ವರ್ಷ ವಯಸ್ಸಾಗಿತ್ತು
2006ರಿಂದ 2013ರ ವರೆಗೆ ಐಸಿಸಿ ಎಲೈಟ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ರೌಫ್

Former Pakistani Umpire Asad Rauf Dies At 66 due to cardiac arrest kvn
Author
First Published Sep 15, 2022, 9:29 AM IST

ಇಸ್ಲಾಮಾಬಾದ್‌(ಸೆ.15): 2006ರಿಂದ 2013ರ ವರೆಗೆ ಐಸಿಸಿ ಎಲೈಟ್ ಪ್ಯಾನಲ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದ ಪಾಕಿಸ್ತಾನದ ಮಾಜಿ ಅಂಪೈರ್ ಅಸದ್ ರೌಫ್, ಹೃದಯಸ್ತಂಭನದಿಂದ ಲಾಹೋರ್‌ನಲ್ಲಿ ಕೊನೆಯುಸಿರೆಳೆದಿದ್ದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಈ ವಿಚಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.

ಅಸದ್ ರೌಫ್ ಅವರ ನಿಧನದ ಸುದ್ದಿ ಕೇಳಿ ನನಗೆ ದುಃಖವಾಯಿತು. ಅವರು ಕೇವಲ ಒಳ್ಳೆಯ ಅಂಪೈರ್ ಮಾತ್ರ ಆಗಿರಲಿಲ್ಲ, ಇದರ ಜತೆಗೆ ಒಳ್ಳೆಯ ಹಾಸ್ಯ ಪ್ರೌವೃತ್ತಿಯನ್ನು ಹೊಂದಿದ್ದರು. ಅವರು ನನ್ನ ಜತೆಗಿದ್ದಾಗಲೆಲ್ಲಾ, ನನ್ನ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತಿದ್ದರು. ನಾನು ಯಾವಾಗೆಲ್ಲಾ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದೆನೋ ಆಗೆಲ್ಲಾ ನಗು ಬರುತ್ತಿತ್ತು. ಅವರ ನಿಧನದ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ರಮೀಜ್ ರಾಜಾ ಟ್ವೀಟ್ ಮಾಡಿದ್ದಾರೆ.  

ಐಸಿಸಿ ಮಾಜಿ ಅಂಪೈರ್ ಅಸದ್ ರೌಫ್ ನಿಧನದ ಸುದ್ದಿ ಕೇಳಿ ದುಃಖವಾಯಿತು. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕಮ್ರಾನ್ ಅಕ್ಮಲ್‌ ನೀಡಲಿ ಎಂದು ಟ್ವೀಟ್ ಮಾಡಿದೆ.

ಭಾವುಕ ಪತ್ರದೊಂದಿಗೆ ನಿವೃತ್ತಿ ಘೋಷಿಸಿದ Robin Uthappa, ವಿದೇಶಿ ಲೀಗ್‌ನತ್ತ ಚಿತ್ತ!

ಅಸದ್ ರೌಫ್‌ 2000ದಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ಇನ್ನು 2005ರಲ್ಲಿ ಮೊದಲ ಬಾರಿಗೆ ಟೆಸ್ಟ್‌ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ 2006ರಿಂದ ಐಸಿಸಿ ಎಲೈಟ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಲು ಆರಂಭಿಸಿದ ರೌಫ್, 2013ರವರೆಗೂ ಐಸಿಸಿ ಎಲೈಟ್ ಅಂಪೈರ್ ಆಗಿ ಕಾಣಿಸಿಕೊಂಡಿದ್ದರು.

ಅಸದ್ ರೌಫ್‌ 64 ಟೆಸ್ಟ್‌, 139 ಏಕದಿನ 28 ಟಿ20 ಹಾಗೂ 11 ಮಹಿಳಾ ಅಂತಾರಾಷ್ಟ್ರೀಉ ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇದಷ್ಟೇ ಅಲ್ಲದೇ 40 ಪ್ರಥಮ ದರ್ಜೆ, 26 ಲಿಸ್ಟ್‌ 'ಎ' ಹಾಗೂ ಐಪಿಎಲ್ ಸೇರಿದಂತೆ 89 ಟಿ20 ಪಂದ್ಯಗಳಲ್ಲಿಯೂ ಅಸದ್ ರೌಫ್‌ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು.

ಅಸದ್ ರೌಪ್ ಅಂಪೈರ್ ಆಗುವ ಮುನ್ನ, ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿಯೂ ಸೈ ಎನಿಸಿಕೊಂಡಿದ್ದರು. ಅಸದ್ ರೌಫ್‌ 71 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 3,423 ರನ್ ಬಾರಿಸಿದ್ದರು. ಇನ್ನು 40 ಲಿಸ್ಟ್‌ 'ಎ' ಪಂದ್ಯಗಳನ್ನಾಡಿ ಅಸದ್ ರೌಫ್ 611 ರನ್ ಬಾರಿಸಿದ್ದರು.

Follow Us:
Download App:
  • android
  • ios