ಕರಾಚಿ(ಮೇ.24): ಪಾಕಿಸ್ತಾನದಲ್ಲಿ ಕೊರೋನಾ ವೈರಸ್ ಸ್ಫೋಟಗೊಂಡಿದೆ. ನಗರಗಳಲ್ಲಿ ಹೆಚ್ಚಾಗಿದ್ದ ಕೊರೋನಾ ಇದೀಗ ಪಾಕಿಸ್ತಾನ ಹಳ್ಳಿ ಹಳ್ಳಿಯಲ್ಲೂ ಕೊರೋನಾ ವೈರಸ್ ಪ್ರಕರಣ ವರದಿಯಾಗುತ್ತಿದೆ. ಇದೀಗ ಪಾಕಿಸ್ತಾನ ಕ್ರಿಕೆಟಿಗನಿಗೂ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. 2014ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಆಡಿ ಬಳಿಕ ವಿದಾಯ ಹೇಳಿದ ತೌಫಿಕ್ ಉಮರ್‌ಗೆ ಕೊರೋನಾ ತಗುಲಿದೆ.

ಆಗಸ್ಟ್‌ನಲ್ಲಿ ಭಾರತ-ಸೌತ್ ಆಫ್ರಿಕಾ ಟಿ20 ಸರಣಿ; ಪ್ರಕಟಣೆ ಹೊರಡಿಸಿದ CSA!

ಪಾಕಿಸ್ತಾನದ ಪರ ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನಾಡಿದ ತೌಫಿಕ್ ಉಮರ್‌ಗೆ ಕೊರೋನಾ ಪಾಸಿಟೀವ್ ಬಂದಿದೆ. ಸದ್ಯ ತೌಫಿಕ್ ಉಮರ್‌ನನ್ನು ಮನೆಯಲ್ಲಿ ಐಸೋಲೇಶನ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪಾಕಿಸ್ತಾನ ಮಾಜಿ ಕ್ರಿಕೆಟಿಗನಿಗೆ ಕೊರೋನಾ ತಗಲಿರುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಲೆನೋವು ಹೆಚ್ಚಿಸಿದೆ. ಈಗಾಗಾಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕ್ರಿಕೆಟಿಗರು, ಕೋಚ್ , ಸಪೋರ್ಟ್ ಸ್ಟಾಫ್, ಮಾಜಿ ಕ್ರಿಕೆಟಿಗರಿಗೆ ಎಚ್ಚರ ವಹಿಸುವಂತೆ ಕೋರಿತ್ತು. ಹೀಗಾಗಿ ಕೊರೋನಾ ವೈರಸ್‌ನಿಂದ ಇತರ ಕ್ರಿಕೆಟಿಗರನ್ನು ಕಾಪಾಡುವುದೇ ಮಂಡಳಿಗೆ ದೊಡ್ಡ ತಲೆನೋವಾಗಿದೆ.

ಮತ್ತೆ ಭಾರತೀಯರ ಕೆಣಕಿದ ಅಫ್ರಿದಿ; ಕಾಶ್ಮೀರ ತಂಡಕ್ಕಾಗಿ ಪಾಕ್ ಕ್ರಿಕೆಟ್ ಮಂಡಳಿಗೆ ಮನವಿ!

2001ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತೌಫಿಕ್ ಉಮರ್ ಪಾಕಿಸ್ತಾನ ತಂಡಕ್ಕೆ ಡೆಬ್ಯು ಮಾಡಿದರು. ಫಿಟ್ನೆಸ್ ಹಾಗೂ ಇಂಜುರಿ ಸಮಸ್ಯೆಗಳಿಂದ ತೌಫಿಕ್ ಉಮರ್ ಕರಿಯರ್ ದಿಢೀರ್ ಯು ಟರ್ನ್ ಹೊಡೆದಿತ್ತು. ಪಾಕಿಸ್ತಾನ ಪರ 44 ಟೆಸ್ಟ್ ಪಂದ್ಯ ಹಾಗೂ 22 ಏಕದಿನ ಪಂದ್ಯ ಆಡಿರುವ ತೌಫಿಕ್ ಉಮರ್ , ವಿದಾಯ ಹೇಳಿದರು.