Asianet Suvarna News Asianet Suvarna News

ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ನ್ಯೂಜಿಲೆಂಡ್ ಕ್ರಿಕೆಟ್ ಸವ್ಯಸಾಚಿ ಕ್ರಿಸ್‌ ಕ್ರೇನ್ಸ್‌

* ಕಿವೀಸ್‌ ಮಾಜಿ ಕ್ರಿಕೆಟಿಗ ಕ್ರಿಸ್ ಕ್ರೇನ್ಸ್‌ ಆರೋಗ್ಯ ಸ್ಥಿರ

* ಹೃದಯ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಕ್ರಿಸ್ ಕ್ರೇನ್ಸ್

* ನ್ಯೂಜಿಲೆಂಡ್ ಕ್ರಿಕೆಟ್‌ ತಂಡದ ದಿಗ್ಗಜ ಆಲ್ರೌಂಡರ್‌ಗಳಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿರುವ ಕ್ರೇನ್ಸ್

Former New Zealand Cricketer Chris Cairns off life support kvn
Author
Wellington, First Published Aug 20, 2021, 12:26 PM IST

ವೆಲ್ಲಿಂಗ್ಟನ್(ಆ.20): ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಸಿಡ್ನಿಯ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನ್ಯೂಜಿಲೆಂಡ್ ಕ್ರಿಕೆಟ್ ಸವ್ಯಸಾಚಿ, ಮಾಜಿ ಕ್ರಿಕೆಟಿಗ ಕ್ರಿಸ್ ಕ್ರೇನ್ಸ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಅಳವಡಿಸಲಾಗಿದ್ದ ಜೀವ ರಕ್ಷಕ ಸಾಧನಗಳನ್ನು ತೆಗೆಯಲಾಗಿದೆ ಎಂದು ಅವರ ಲಾಯರ್ ಮಾಧ್ಯಮಗಳಿಗಿಂದು ಶುಕ್ರವಾರ(ಆ.20) ತಿಳಿಸಿದ್ದಾರೆ.

ಕ್ರಿಸ್‌ ಕ್ರೇನ್ಸ್‌ ಅವರಿಗೆ ಅಳವಡಿಸಲಾಗಿದ್ದ ಜೀವ ರಕ್ಷಕ ಸಾಧನ(ಲೈಫ್ ಸಪೋರ್ಟ್‌)ಗಳನ್ನು ತೆಗೆಯಲಾಗಿದ್ದು, ಸಿಡ್ನಿಯ ಆಸ್ಪತ್ರೆಯಿಂದಲೇ ಅವರ ಕುಟುಂಬದವರೊಂದಿಗೆ ಕ್ರಿಸ್‌ ಕ್ರೇನ್ಸ್‌ ಮಾತನಾಡುತ್ತಿದ್ದಾರೆ ಎಂದು ತಿಳಿಸಲು ಖುಷಿಯಾಗುತ್ತಿದೆ ಎಂದು ಅವರ ಲಾಯರ್ ಆ್ಯರೋನ್ ಲಾಯ್ಲಾಡ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಚೇತರಿಸಿಕೊಳ್ಳಲು ಹಾರೈಸಿದ ಹಾಗೂ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಕ್ರೇನ್ಸ್ ಹಾಗೂ ಮತ್ತವರ ಕುಟುಂಬದವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದೇ ವೇಳೆ ಕ್ರೇನ್ಸ್‌ ಇನ್ನಷ್ಟು ಖಾಸಗಿತನವನ್ನು ಬಯಸಿದ್ದು, ಸಂಪೂರ್ಣ ಗುಣಮುಖರಾಗುವವರೆಗೂ ನಿಮ್ಮೆಲ್ಲರ ಸಹಕಾರವಿರಲಿ ಎಂದು ಅಭಿಮಾನಿಗಳಲ್ಲಿ ಕ್ರೇನ್ಸ್‌ ಮನವಿ ಮಾಡಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

IPL 2021 ಬಟ್ಲರ್‌, ಸ್ಟೋಕ್ಸ್‌ ಅನುಮಾನ, ರಾಜಸ್ಥಾನ ರಾಯಲ್ಸ್‌ಗೆ ಸಂಕಷ್ಟ..!

51 ವರ್ಷದ ಕ್ರಿಸ್ ಕ್ರೇನ್ಸ್ ಅವರಿಗೆ ಹೃದಯ ಮಹಾಅಪಧಮನಿಯಲ್ಲಿ ಕೊಂಚು ಬಿರುಕು ಬಿಟ್ಟಿತ್ತೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ತಿಂಗಳ ಆರಂಭದಲ್ಲೇ ಕ್ರೇನ್ಸ್‌ ಕ್ಯಾನ್‌ಬೆರ್ರಾದ ಆಸ್ಪತ್ರೆಯೊಂದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಪರಿಸ್ಥಿತಿ ಕೊಂಚ ಬಿಗಡಾಯಿಸಿದ್ದರಿಂದ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಲು ಸೇಂಟ್ ವಿನ್ಸೆಂಟ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.

ಕ್ರಿಸ್ ಕ್ರೇನ್ಸ್‌ ನ್ಯೂಜಿಲೆಂಡ್ ಪರ 62 ಟೆಸ್ಟ್ 215 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 3,320 ಹಾಗೂ 4,950 ರನ್‌ ಬಾರಿಸಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಸೇರಿ ಒಟ್ಟು 9 ಶತಕ ಹಾಗೂ 48 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 218 ಟೆಸ್ಟ್‌ ವಿಕೆಟ್‌ ಹಾಗೂ 201 ಏಕದಿನ ವಿಕೆಟ್ ಕಬಳಿಸಿ ಮಿಂಚಿದ್ದಾರೆ.  
 

Follow Us:
Download App:
  • android
  • ios