ನವದೆಹಲಿ(ಅ.25): ಕ್ರಿಕೆಟ್ ಅಭಿಮಾನಿಗಳ ಪ್ರಾರ್ಥನೆ, ಕ್ರಿಕೆಟಿಗರ ಹಾರೈಕೆ ಫಲಿಸಿದೆ. ಟೀಂ ಇಂಡಿಯಾ ಮಾಜಿ ನಾಯಕ, ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದ ಕಪಿಲ್ ದೇವ್ ಇದೀಗ ಚೇತರಿಸಿಕೊಂಡಿದ್ದು, ಮನೆಗೆ ಮರಳಿದ್ದಾರೆ.

 

ದಿಗ್ಗಜ ಕ್ರಿಕೆಟಿಗ ಕಪಿಲ್‌ದೇವ್‌ಗೆ ತೀವ್ರ ಹೃದಯಾಘಾತ, ಆಸ್ಪತ್ರೆ ದಾಖಲು

62 ವರ್ಷದ ಕಪಿಲ್ ದೇವ್‌ಗೆ ಶುಕ್ರವಾರ(ಅ.23) ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಹೀಗಾಗಿ ಕುಟಂಬಸ್ಥರು ತಕ್ಷಣವೆ ದೆಹಲಿಯ ಒಕ್ಲಾ ರಸ್ತೆಯಲ್ಲಿರುವ ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆ್ಯಂಜಿಯೋಪ್ಲಾಸ್ಟಿ ಸರ್ಜರಿ ನಡೆಸಲಾಗಿದೆ. ಇದೀಗ ಕಪಿಲ್ ದೇವ್ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ.

ಪಂದ್ಯವಾಡಿಸಿ ಹಣ ಸಂಗ್ರಹಿಸುವ ಅವಶ್ಯಕತೆ ಭಾರತಕ್ಕಿಲ್ಲ; ಅಕ್ತರ್‌ಗೆ ಕಪಿಲ್ ದೇವ್ ತಿರುಗೇಟು!.

ಕಪಿಲ್ ದೇವ್ ಅವರಿಗೆ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಡಾ.ಅತುಲ್ ಮಾಥೂರ್ ನೇತೃತ್ವದ ವೈದ್ಯರ ತಂಡ ಕಪಿಲ್ ದೇವ್ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಸರ್ಜರಿ ಮಾಡಲಾಗಿತ್ತು. ಇದೀಗ ಆರೋಗ್ಯ ಚೇತರಿಸಿಕೊಂಡಿದೆ. ಕಪಿಲ್ ದೇವ್ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಶೀಘ್ರದಲ್ಲೇ ಹಿಂದಿನಂತೆ ಆರೋಗ್ಯವಾಗಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಕಪಿಲ್ ದೇವ್ ಆಸ್ಪತ್ರೆ ದಾಖಲಾಗುತ್ತಿದ್ದಂತೆ ಆತಂಕ ಮನೆ ಮಾಡಿತ್ತು. ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಶೀಘ್ರ ಚೇತರಿಸಿಕೊಳ್ಳಲು ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದರು. ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟಿಗರು ಶೀಘ್ರ ಚೇತರಿಸಿಕೊಳ್ಳಲು ಹಾರೈಸಿದ್ದರು.