ನವದೆಹಲಿ(ಡಿ.28): ಗೋವಾ ಕ್ರಿಕೆಟ್‌ ತಂಡದ ಮಾಜಿ ಸ್ಪಿನ್ನರ್‌ ಶದಾಬ್‌ ಜಕಾತಿ, ಶುಕ್ರವಾರ ಟ್ವೀಟರ್‌ ಮೂಲಕ ತಮ್ಮ ನಿವೃತ್ತಿ ಪ್ರಕಟಿಸಿದ್ದಾರೆ. 

2020ರಲ್ಲಿ ಟೆನಿಸ್‌ಗೆ ಪೇಸ್‌ ಗುಡ್‌ಬೈ!

23 ವರ್ಷ ದೇಶಿಯ 3 ಮಾದರಿಯ ಕ್ರಿಕೆಟ್‌ನಲ್ಲಿ ಸ್ಪಿನ್‌ ಕೈ ಚಳಕ ತೋರಿಸಿದ್ದ ಶದಾಬ್‌, ಕಳೆದ ಒಂದು ವರ್ಷದಿಂದ ಕ್ರಿಕೆಟ್‌ ಆಡಿರಲಿಲ್ಲ. ಶದಾಬ್‌, 1998-99ರಲ್ಲಿ ಪ್ರಥಮ ದರ್ಜೆ ಹಾಗೂ ಲಿಸ್ಟ್‌ ಎ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 

ಟೀಂ ಇಂಡಿಯಾ ಸ್ಟಾರ್ ವೇಗಿ IPL 2020 ಆಡೋದು ಅನುಮಾನ.!

92 ಪ್ರಥಮ ದರ್ಜೆ, 82 ಲಿಸ್ಟ್‌-ಎ ಹಾಗೂ 91 ಟಿ20 ಪಂದ್ಯಗಳಲ್ಲಿ ಜಕಾತಿ ಆಡಿದ್ದು, ಕ್ರಮವಾಗಿ 275, 93 ಮತ್ತು 73 ವಿಕೆಟ್‌ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದಾರೆ.  39 ವರ್ಷದ ಜಕಾತಿ ಒಟ್ಟು 59 ಐಪಿಎಲ್ ಪಂದ್ಯಗಳನ್ನಾಡಿ 47 ವಿಕೆಟ್ ಪಡೆದಿದ್ದಾರೆ.

ಇನ್ನು ಚೆನ್ನೈ ಸೂಪರ್‌ಕಿಂಗ್ಸ್ ತಂಡವು 20 ವರ್ಷ ಪ್ರಥಮ ದರ್ಜೆ ಕ್ರಿಕೆಟ್. ನಾಲ್ಕು ವರ್ಷ ಅದ್ಭುತ ಒಡನಾಟ[CSK ಜತೆ], ಮೂರು ಟ್ರೋಫಿಗಳು[2 ಐಪಿಎಲ್ ಹಾಗೂ ಒಂದು ಚಾಂಪಿಯನ್ಸ್ ಲೀಗ್ ಟಿ20] ಎಂದು ಗೋವಾ ಕ್ರಿಕೆಟಿಗನೊಂದಿನ ಕ್ಷಣಗಳನ್ನು ಹಂಚಿಕೊಂಡಿದೆ.