Asianet Suvarna News Asianet Suvarna News

ಜಸ್ಪ್ರೀತ್ ಬುಮ್ರಾಗೆ ಕನಿಷ್ಠ 400 ಟೆಸ್ಟ್ ವಿಕೆಟ್ ಗುರಿ ನೀಡಿದ ಯುವಿ..!

ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಮಾಜಿ ಕ್ರಿಕೆಟಿಗರ ಯುವರಾಜ್ ಸಿಂಗ್ ಕನಿಷ್ಠ 400 ಟೆಸ್ಟ್ ವಿಕೆಟ್‌ಗಳ ಗುರಿ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 

Former Cricketer Yuvraj Singh wants Pacer Jasprit Bumrah to take at least 400 wickets in Test cricket
Author
New Delhi, First Published Aug 26, 2020, 1:03 PM IST

ನವದೆಹಲಿ(ಆ.26): ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್‌ಸನ್‌ ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ 600 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ 600 ವಿಕೆಟ್ ಕಬಳಿಸಿದ ಜಗತ್ತಿನ ಮೊದಲ ವೇಗದ ಬೌಲರ್ ಎನ್ನುವ ಕೀರ್ತಿಗೆ ಆ್ಯಂಡರ್‌ಸನ್‌ ಭಾಜನರಾಗಿದ್ದಾರೆ. ಸೌಥಾಂಪ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಪಾಕಿಸ್ತಾನದ ನಾಯಕ ಅಜರ್ ಅಲಿ ವಿಕೆಟ್ ಕಬಳಿಸಿ ಆ್ಯಂಡರ್‌ಸನ್‌ ಈ ಅಪರೂಪದ ಮೈಲಿಗಲ್ಲನ್ನು ನೆಟ್ಟಿದ್ದಾರೆ.

ಆ್ಯಂಡರ್‌ಸನ್‌ 3ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ತಂಡ ತಬ್ಬಿಬ್ಬಾಗುವಂತೆ ಮಾಡಿದ್ದರು. ಇದಾದ ಬಳಿಕ ಎರಡನೇ ಇನಿಂಗ್ಸ್‌ನಲ್ಲೂ ಆ್ಯಂಡರ್‌ಸನ್‌ ಮತ್ತೆರಡು ವಿಕೆಟ್ ಕಬಳಿಸಿ ದಾಖಲೆಯ 600 ವಿಕೆಟ್‌ಗಳ ಮೈಲಿಗಲ್ಲನ್ನು ನೆಟ್ಟರು. ಆ್ಯಂಡರ್‌ಸನ್‌ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ. 

38 ವರ್ಷದ ಆ್ಯಂಡರ್‌ಸನ್‌, ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳೀಧರನ್ ಬಳಿಕ ಅತಿ ಕಡಿಮೆ ಎಸೆತಗಳಲ್ಲಿ 600 ವಿಕೆಟ್ ಕಬಳಿಸಿದ ಬೌಲರ್ ಎನ್ನುವ ದಾಖಲೆಯನ್ನು ಬರೆದಿದ್ದಾರೆ. ಸ್ವಿಂಗ್ ಸ್ಪೆಷಲಿಸ್ಟ್ ಜಿಮ್ಮಿಗೆ ಕ್ರಿಕೆಟ್‌ನ ನಾನಾ ಮೂಲೆಗಳಿಂದ ವಾಸೀಂ ಅಕ್ರಂ, ವಿರಾಟ್ ಕೊಹ್ಲಿ, ಹರ್ಷಲ್ ಗಿಬ್ಸ್, ಇರ್ಫಾನ್ ಪಠಾಣ್, ಸುರೇಶ್ ರೈನಾ, ಅನಿಲ್ ಕುಂಬ್ಳೆ ಸೇರಿದಂತೆ ಹಲವರು ಶುಭ ಕೋರಿದ್ದಾರೆ.

ಆ್ಯಂಡರ್‌ಸನ್‌ಗಿರುವಷ್ಟು ಕೌಶಲ್ಯ ನನಗಿಲ್ಲವೆಂದ ಆಸೀಸ್ ಕ್ರಿಕೆಟ್ ದಿಗ್ಗಜ..!

ಇದೇ ಟೀಂ ಇಂಡಿಯಾ ಯುವ ವೇಗಿ ಜಸ್ಪ್ರೀತ್ ಬುಮ್ರಾ ಕೂಡಾ ಟ್ವೀಟ್ ಮೂಲಕ ಇಂಗ್ಲೆಂಡ್ ಅನುಭವಿ ವೇಗಿಗೆ ಶುಭ ಕೋರಿದ್ದಾರೆ. ನಿಮ್ಮದು ಅಮೋಘ ಸಾಧನೆ, ನಿಮ್ಮ ಕ್ರಿಕೆಟ್ ಬಗೆಗಿನ ಫ್ಯಾಷನ್, ಬದ್ಧತೆ ಅತ್ಯದ್ಭುತ. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭ ಹಾರೈಕೆಗಳು ಎಂದು ಬುಮ್ರಾ ಟ್ವೀಟ್ ಮಾಡಿದ್ದಾರೆ.

ಬುಮ್ರಾ ಟ್ವೀಟ್ ಮಾಡಿ ಮೂರು ವರ್ಷ ಕಳೆಯುವುದರೊಳಗಾಗಿ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರೆಡ್‌ ಬಾಲ್ ಕ್ರಿಕೆಟ್‌ನಲ್ಲಿ ನಿನ್ನ ಟಾರ್ಗೆಟ್ ಕನಿಷ್ಠವೆಂದರೂ 400 ವಿಕೆಟ್ ಪಡೆಯುವುದರಾಗಿರಲಿ ಎಂದು ಹೇಳಿದ್ದಾರೆ.

26 ವರ್ಷದ ಜಸ್ಪ್ರೀತ್ ಬುಮ್ರಾ ಇದುವರೆಗೂ ಭಾರತ ಪರ 14 ಟೆಸ್ಟ್ ಪಂದ್ಯಗಳನ್ನಾಡಿದ್ದು 68 ವಿಕೆಟ್ ಕಬಳಿಸಿದ್ದಾರೆ. ತಮ್ಮ ಕರಾರುವಕ್ಕಾದ ಯಾರ್ಕರ್ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಬುಮ್ರಾ ಟೀಂ ಇಂಡಿಯಾದ ಪ್ರಮುಖ ವೇಗಿ ಕೂಡಾ ಹೌದು.

Follow Us:
Download App:
  • android
  • ios