Asianet Suvarna News Asianet Suvarna News

T20 World Cup ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸುವ ಬ್ಯಾಟರ್‌ ಬಗ್ಗೆ ಭವಿಷ್ಯ ನುಡಿದ ಸೆಹ್ವಾಗ್..!

ಕಾಂಗರೂ ನಾಡಿನಲ್ಲಿ ಭರ್ಜರಿಯಾಗಿ ಸಾಗುತ್ತಿದೆ ಟಿ20 ವಿಶ್ವಕಪ್ ಟೂರ್ನಿ
ಅಕ್ಟೋಬರ್ 22ರಿಂದ ಸೂಪರ್ 12 ಹಂತದ ಪಂದ್ಯಾವಳಿಗಳು ಆರಂಭ
ಈ ಬಾರಿ ಗರಿಷ್ಟ ರನ್ ಬಾರಿಸುವ ಬ್ಯಾಟರ್ ಹೆಸರಿಸಿದ ವಿರೇಂದ್ರ ಸೆಹ್ವಾಗ್

Former Cricketer Virender Sehwag Predicts T20 World Cup 2022 Top Run Getter kvn
Author
First Published Oct 21, 2022, 2:40 PM IST

ನವದೆಹಲಿ(ಅ.21): ಈಗಾಗಲೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಸೂಪರ್ 12 ಹಂತಕ್ಕೆ ಈಗಾಗಲೇ ಮೂರು ತಂಡಗಳು ಅರ್ಹತೆ ಪಡೆದುಕೊಂಡಿವೆ. ಇನ್ನು ಅಕ್ಟೋಬರ್ 22ರಿಂದ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 23ರಂದು ಮೆಲ್ಬರ್ನ್‌ ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ, ಭಾರತದ ಎದುರು ಪಾಕಿಸ್ತಾನ ತಂಡವು 10 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಸೋಲು, ಗ್ರೂಪ್‌ ಹಂತದಲ್ಲೇ ಟೀಂ ಇಂಡಿಯಾವನ್ನು ಹೊರಬೀಳುವಂತೆ ಮಾಡಿತ್ತು. ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇದೀಗ ಬಾಬರ್ ಅಜಂ ಪಡೆಗೆ ತಿರುಗೇಟು ನೀಡಲು ಸಜ್ಜಾಗಿದೆ.

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅದ್ಭುತ ಫಾರ್ಮ್‌ನಲ್ಲಿದ್ದು, ತಂಡದ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನ ತಂಡದ ಟಿ20 ವಿಶ್ವಕಪ್ ಭವಿಷ್ಯ ಒಂದು ರೀತಿ ಬಾಬರ್ ಅಜಂ ಮೇಲೆ ಅವಲಂಬಿತವಾಗಿದೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಂ ಗರಿಷ್ಟ ರನ್ ಬಾರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. 

ಪಾಕಿಸ್ತಾನದ ಬಾಬರ್ ಅಜಂ, ಅದ್ಭುತವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆತ ಬ್ಯಾಟಿಂಗ್ ಮಾಡುವುದನ್ನು ನೋಡಿದರೆ ವಿರಾಟ್ ಕೊಹ್ಲಿ ಅವರು ಬ್ಯಾಟಿಂಗ್ ಮಾಡಿದಂತೆ ಭಾಸವಾಗಿತ್ತದೆ. ಬಾಬರ್ ಅಜಂ ಬ್ಯಾಟಿಂಗ್ ಮಾಡುವುದನ್ನು ನೋಡಲು ಖುಷಿ ಎನಿಸುತ್ತದೆ ಎಂದು ವಿರೇಂದ್ರ ಸೆಹ್ವಾಗ್ Cricbuzz ಜತೆಗಿನ ಮಾತಕತೆಯಲ್ಲಿ ತಿಳಿಸಿದ್ದಾರೆ.

T20 World Cup: ಈ ಬಾರಿ ಸೆಮೀಸ್‌ಗೇರುವ 4 ತಂಡಗಳಾವುವು ಎನ್ನುವುದನ್ನು ಭವಿಷ್ಯ ನುಡಿದ ಸಚಿನ್ ತೆಂಡುಲ್ಕರ್..!

ಈ ಹಿಂದೆ ವಿರೇಂದ್ರ ಸೆಹ್ವಾಗ್ ನುಡಿದ ಭವಿಷ್ಯ ನಿಜವಾಗಿದೆ. ಈ ವಿಚಾರವನ್ನು ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಡೇವಿಡ್ ವಾರ್ನರ್ ತುಟಿಬಿಚ್ಚಿದ್ದರು. ತಾವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ವಿಯಾಗುವುದನ್ನು ಸೆಹ್ವಾಗ್ ಆರಂಭದಲ್ಲಿಯೇ ಗುರುತಿಸಿದ್ದರು ಎಂದು ವಾರ್ನರ್‌, ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ನಾಯಕರಾಗಿದ್ದ ವಿರೇಂದ್ರ ಸೆಹ್ವಾಗ್ ತಂಡದಲ್ಲಿ ಡೇವಿಡ್ ವಾರ್ನರ್ ಆಡಿದ್ದರು. ಆಗ ಸೆಹ್ವಾಗ್ ತಮಗೆ ನೀನೊಬ್ಬ ಒಳ್ಳೆಯ ಟೆಸ್ಟ್ ಆಟಗಾರ ಆಗುತ್ತೀಯ ಎಂದಿದ್ದರು ಎಂದು ವಾರ್ನರ್ ಹೇಳಿದ್ದಾರೆ.

ನಾನು ಡೆಲ್ಲಿ ತಂಡದ ಪರ ಆಡುತ್ತಿದ್ದಾಗ, ನನ್ನ ಆಟವನ್ನು ಗಮನಿಸಿದ ಸೆಹ್ವಾಗ್, ನೀನು ಒಳ್ಳೆಯ ಟಿ20 ಆಟಗಾರನಾಗುವುದಕ್ಕಿಂತ ಹೆಚ್ಚಾಗಿ ಒಂದೊಳ್ಳೆಯ ಟೆಸ್ಟ್ ಆಟಗಾರ ಆಗುತ್ತೀಯ ಎಂದು ಸೆಹ್ವಾಗ್ ಹೇಳಿದ್ದರು ಎಂದು FoxSports.com.au ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಡೇವಿಡ್ ವಾರ್ನರ್ ತಿಳಿಸಿದ್ದರು. 

ಡೇವಿಡ್ ವಾರ್ನರ್, ಆಸ್ಟ್ರೇಲಿಯಾ ತಂಡದ ಪರ 96 ಟೆಸ್ಟ್‌, 131 ಏಕದಿನ ಹಾಗೂ 93 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 7817, 5644 ಮತ್ತು 2815 ರನ್ ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 24,  ಏಕದಿನ ಕ್ರಿಕೆಟ್‌ನಲ್ಲಿ 18 ಹಾಗೂ ಟಿ20 ಕ್ರಿಕೆಟ್‌ನಲ್ಲಿ ವಾರ್ನರ್ ಒಂದು ಶತಕ ಸಿಡಿಸಿದ್ದಾರೆ.

Follow Us:
Download App:
  • android
  • ios