Asianet Suvarna News Asianet Suvarna News

Team India ಬ್ಯಾಟಿಂಗ್ ಕೋಚ್‌ಗೆ ಮತ್ತೆ ಅರ್ಜಿ ಸಲ್ಲಿಸಿದ ವಿಕ್ರಂ ರಾಥೋಡ್

* ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಹುದ್ದೆಗೆ ವಿಕ್ರಂ ರಾಥೋಡ್‌ ಮರು ಅರ್ಜಿ

* ಟಿ20 ವಿಶ್ವಕಪ್ ಬಳಿಕ ಹೊಸ ಕೋಚ್ ಆಯ್ಕೆ

* ಹೆಡ್ ಕೋಚ್ ಹುದ್ದೆಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ರಾಹುಲ್ ದ್ರಾವಿಡ್

 

Former Cricketer Vikram Rathour reapplies for Team India batting coach role kvn
Author
Bengaluru, First Published Nov 2, 2021, 6:17 PM IST
  • Facebook
  • Twitter
  • Whatsapp

ನವದೆಹಲಿ(ನ.02): ಟೀಂ ಇಂಡಿಯಾ (Team India) ಹಾಲಿ ಬ್ಯಾಟಿಂಗ್‌ ಕೋಚ್‌ ವಿಕ್ರಂ ರಾಥೋಡ್‌ ಅವರ ಗುತ್ತಿಗೆ ಅವಧಿ ಟಿ20 ವಿಶ್ವಕಪ್ (T20 World Cup) ಟೂರ್ನಿ ಮುಕ್ತಾಯದೊಂದಿಗೆ ಅಂತ್ಯವಾಗಲಿದೆ. ಹೀಗಾಗಿ ಬಿಸಿಸಿಐ ಈಗಾಗಲೇ ಕೋಚ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ವಿಕ್ರಂ ರಾಥೋಡ್ ಮತ್ತೊಂದು ಅವಧಿಗೆ ಅರ್ಜಿ ಸಲ್ಲಿಸಿದ್ದಾರೆ.

2019ರಲ್ಲಿ ಸಂಜಯ್ ಬಂಗಾರ್ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಇದಾದ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೂ ಮುನ್ನ ವಿಕ್ರಂ ರಾಥೋಡ್ (Vikram Rathour) ಎರಡು ವರ್ಷದ ಅವಧಿಗೆ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದರು. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಗಿದೆ.

ಸೂಪರ್‌ 12 ಹಂತದ ಆಫ್ಘಾನಿಸ್ತಾನ ವಿರುದ್ದದ ಪಂದ್ಯಕ್ಕೂ ಮುನ್ನ ಮಾತನಾಡಿದ ವಿಕ್ರಂ ರಾಥೋಡ್‌, ಇದೊಂದು ರೀತಿಯ ಒಳ್ಳೆಯ ಅನುಭವ ಎಂದು ಹೇಳಿದ್ದಾರೆ. ಇದು ಕಲಿಯಲು ಒಳ್ಳೆಯ ಅನುಭವ ಸಿಕ್ಕಂತೆ ಆಗಿದೆ. ಪ್ರತಿಭಾನ್ವಿತ ಆಟಗಾರರ ಜತೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವುದು ಒಂದು ರೀತಿಯ ಒಳ್ಳೆಯ ಅನುಭವ ಎಂದು ಹೇಳಿದ್ದಾರೆ. 

T20 World Cup: ಟೀಂ ಇಂಡಿಯಾದಲ್ಲಿ ಸಂವಹನದ ಕೊರತೆ..?

ಇದೊಂದು ರೀತಿಯಲ್ಲಿ ಒಳ್ಳೆಯ ಅನುಭವ. ನಾನು ಈಗಾಗಲೇ ಬ್ಯಾಟಿಂಗ್ ಕೋಚ್‌ ಹುದ್ದೆಗೆ ಮರು ಅರ್ಜಿ ಸಲ್ಲಿಸಿದ್ದೇನೆ. ಒಂದೊಮ್ಮೆ ಮತ್ತೆ ಬ್ಯಾಟಿಂಗ್ ಕೋಚ್ ಆಗಲು ಅವಕಾಶ ಸಿಕ್ಕರೆ ಮತ್ತಷ್ಟು ಕೆಲಸ ಮಾಡುವುದು ಬಾಕಿಯಿದೆ ಎಂದು ವಿಕ್ರಂ ರಾಥೋಡ್ ಹೇಳಿದ್ದಾರೆ.

T20 world Cup: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕಾರಣವೇನು..?
 
2019ರಲ್ಲಿ ಕೋಚ್‌ ಆಗಿ ಕಾರ್ಯ ನಿರ್ವಹಿಸಿದವರ ಪೈಕಿ ಪುನಃ ಅರ್ಜಿ ಸಲ್ಲಿಸಿದವರಲ್ಲಿ ವಿಕ್ರಂ ರಾಥೋಡ್‌ ಮೊದಲಿಗರೆನಿಸಿದ್ದಾರೆ. ಸದ್ಯ ರವಿಶಾಸ್ತ್ರಿ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಭರತ್ ಅರುಣ್ ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್‌ ಆಗಿ ಆರ್‌. ಶ್ರೀಧರ್ ಕಾರ್ಯನಿರ್ವಹಿಸುತ್ತಿದ್ದಾರೆ. ರವಿಶಾಸ್ತ್ರಿ (Ravi Shastri), ಆರ್‌. ಶ್ರೀಧರ್ ಹಾಗೂ ಭರತ್ ಅರುಣ್‌ ತಮ್ಮ ಕೋಚ್ ಹುದ್ದೆಯಿಂದ ಕೆಳಗಿಳಿಯಲು ತೀರ್ಮಾನಿಸಿದ್ದಾರೆ.

Yuvraj Singh Comeback ನಿವೃತ್ತಿ ವಾಪಾಸ್ ಪಡೆದು ಮೈದಾನಕ್ಕಿಳಿಯುವುದಾಗಿ ಘೋಷಿಸಿದ ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್..!

ಟೀಂ ಇಂಡಿಯಾ ಹೆಡ್‌ ಕೋಚ್‌ ಹುದ್ದೆಗೆ ಈಗಾಗಲೇ ರಾಹುಲ್ ದ್ರಾವಿಡ್‌ (Rahul Dravid) ಅರ್ಜಿ ಸಲ್ಲಿಸಿದ್ದಾರೆ. ಬಹುತೇಕ ರಾಹುಲ್ ದ್ರಾವಿಡ್ ಅವರೇ ಟೀಂ ಇಂಡಿಯಾ ಮುಂದಿನ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ನೀರಸ ಪ್ರದರ್ಶನ ತೋರಿರುವ ಟೀಂ ಇಂಡಿಯಾ: 

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರಲು ವಿಫಲವಾಗಿದೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ದ ನಡೆದ ಎರಡೂ ಪಂದ್ಯದಲ್ಲೂ ಟೀಂ ಇಂಡಿಯಾ ಬ್ಯಾಟರ್‌ಗಳು ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಪಾಕಿಸ್ತಾನ ಎದುರು ಟೀಂ ಇಂಡಿಯಾ 10 ವಿಕೆಟ್‌ಗಳ ಅಂತರದ ಸೋಲು ಕಂಡರೆ, ನ್ಯೂಜಿಲೆಂಡ್ ವಿರುದ್ದ 8 ವಿಕೆಟ್‌ಗಳ ಸೋಲು ಕಂಡಿತ್ತು. ಇದರೊಂದಿಗೆ ಸೆಮೀಸ್ ಹಾದಿ ಮತ್ತಷ್ಟು ದುರ್ಗಮವಾಗಿದೆ. ಅದರಲ್ಲೂ ಕಿವೀಸ್ ಎದುರು 20 ಓವರ್‌ ಬ್ಯಾಟಿಂಗ್ ಮಾಡಿ ಭಾರತ ಕೇವಲ 110 ರನ್‌ ಬಾರಿಸಲಷ್ಟೇ ಶಕ್ತವಾಗಿತ್ತು. ಟೀಂ ಇಂಡಿಯಾ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

 

Follow Us:
Download App:
  • android
  • ios