ವಿದಾಯದ ಪಂದ್ಯದಲ್ಲಿ ಕಣ್ಣೀರಿಟ್ಟ ಫೆಡರರ್‌-ರಾಫಾ ಜೋಡಿ; ಇದೇ ಕ್ರೀಡೆಯ ಸೊಗಸು ಎಂದ ಕಿಂಗ್ ಕೊಹ್ಲಿ

* ಟೆನಿಸ್‌ ಬದುಕಿನ ಕೊನೆಯ ಪಂದ್ಯವನ್ನಾಡಿದ ರೋಜರ್ ಫೆಡರರ್
* ವಿದಾಯ ಪಂದ್ಯದ ಬಳಿಕ ಬಿಕ್ಕಿಬಿಕ್ಕಿ ಅತ್ತ ರೋಜರ್ ಫೆಡರರ್
* ಇದೇ ಕ್ರೀಡೆಯ ಸೊಗಸು ಎಂದು ಬಣ್ಣಿಸಿದ ವಿರಾಟ್ ಕೊಹ್ಲಿ

Former Captain Virat Kohli opens up on viral crying Roger Federer Rafael Nadal Pic kvn

ಲಂಡನ್‌(ಸೆ.24): ಬರೋಬ್ಬರಿ 24 ವರ್ಷಗಳ ಸುದೀರ್ಘ ಟೆನಿಸ್ ವೃತ್ತಿಬದುಕಿಗೆ ರೋಜರ್ ಫೆಡರರ್ ವಿದಾಯ ಘೋಷಿಸಿದ್ದಾರೆ. ಲೆವರ್ ಕಪ್ ಟೆನಿಸ್‌ ಟೂರ್ನಿಯ ಡಬಲ್ಸ್‌ ಪಂದ್ಯದ ಮೊದಲ ಸುತ್ತಿನಲ್ಲೇ ರಾಫೆಲ್ ನಡಾಲ್ ಜತೆ ಕಣಕ್ಕಿಳಿದಿದ್ದ ರೋಜರ್ ಫೆಡರರ್‌ ಆಘಾತಕಾರಿ ಸೋಲು ಅನುಭವಿಸುವ ಮೂಲಕ ಅಭಿಯಾನ ಅಂತ್ಯಗೊಳಿಸಿದ್ದಾರೆ. 

ರೋಜರ್ ಫೆಡರರ್-ರಾಫೆಲ್ ನಡಾಲ್  ಎದುರು ರೆಸ್ಟ್‌ ಆಫ್‌ ದಿ ವರ್ಲ್ಡ್‌ ತಂಡದ ಫ್ರಾನ್ಸೆಸ್‌ ಟಿಯಾಫೋ ಮತ್ತು ಜ್ಯಾಕ್‌ ಸಾಕ್‌ ಜೋಡಿಯು 4-6, 7-6(7/2), 11-9 ಅಂತರದಲ್ಲಿ ಗೆಲುವು ದಾಖಲಿಸಿತು. ಪಂದ್ಯ ಮುಕ್ತಾಯದ ಬಳಿಕ ರೋಜರ್ ಫೆಡರರ್ ಕೊಂಚ ಭಾವೋದ್ವೇಗಕ್ಕೆ ಒಳಗಾಗುವ ಮೂಲಕ ತಮ್ಮ ಟೆನಿಸ್ ವೃತ್ತಿಬದುಕಿನ ಕೆಲವು ಮಹತ್ವದ ಘಟ್ಟಗಳನ್ನು ಸ್ಮರಿಸಿಕೊಂಡರು. ರೋಜರ್ ಫೆಡರರ್ ಭಾವೋದ್ವೇಗಕ್ಕೊಳಗಾಗಿ ಕಣ್ಣೀರಿಡುತ್ತಿದ್ದಂತೆಯೇ ಪಕ್ಕದಲ್ಲೇ ಕುಳಿತಿದ್ದ 22 ಟೆನಿಸ್ ಗ್ರ್ಯಾನ್ ಸ್ಲಾಂ ದುಃಖ ತಡೆಯಲಾಗದೇ ಕಣ್ಣೀರಿಟ್ಟರು. ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಎರಡು ದಶಕಗಳ ಟೆನಿಸ್‌ ಕೋರ್ಟ್‌ನಲ್ಲಿ ಬದ್ದ ಎದುರಾಳಿಗಳಂತೆ ಕಾದಾಡಿದ್ದ ರಾಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ ಟೆನಿಸ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದರು. ಲೆವರ್ ಕಪ್‌ನಲ್ಲಿ ಈ ಜೋಡಿ ಒಟ್ಟಾಗಿ ಕಣಕ್ಕಿಳಿಯುವ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಿತು. ಪಂದ್ಯ ಮುಕ್ತಾಯದ ಬಳಿಕ ವಿದಾಯದ ಮಾತನಾಡಿದ ರೋಜರ್ ಫೆಡರರ್, ತಮ್ಮ ಈ ಪಯಣದಲ್ಲಿ ಜತೆಯಾದ ಸಹ ಆಟಗಾರರು, ಅಭಿಮಾನಿಗಳು, ತಮ್ಮ ಕುಟುಂಬ  ಹಾಗೂ ಪತ್ನಿ ಮಿರ್ಕಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಅದರಲ್ಲೂ ಪತ್ನಿ ಮಿರ್ಕಾಗೆ, ನೀವು ನನ್ನ ಜತೆಗಿರದಿದ್ದರೆ, ನಾನು ಇಲ್ಲಿರಲು ಸಾಧ್ಯವಾಗುತ್ತಿರಲಿಲ್ಲ ಎಂದು ಫೆಡರರ್ ಪತ್ನಿಯೊಂದಿಗಿನ ಟೆನಿಸ್ ಪಯಣವನ್ನು ಮತ್ತೊಮ್ಮೆ ಸ್ಮರಿಸಿಕೊಂಡರು 

ಇದೇ ಸಂದರ್ಭದಲ್ಲಿ ಫೆಡರರ್ ಕೊಂಚ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟರು. ಆಗ ಪಕ್ಕದಲ್ಲೇ ಕುಳಿತಿದ್ದ ನಡಾಲ್ ಕೂಡಾ ಬಿಕ್ಕಿ ಬಿಕ್ಕಿ ಅತ್ತರು. ಇನ್ನೂ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಮೂಡಿಸಿದ್ದು, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡಾ ಈ ಕ್ಷಣವನ್ನು ಸಾಮಾಜಿಕ ಜಾಲತಾಣವಾದ ಕೂ ಮೂಲಕ ಭಾವನಾತ್ಮಕ ಮಾತುಗಳನ್ನು ಹಂಚಿಕೊಂಡಿದ್ದಾರೆ. 

ರೋಜರ್ ಫೆಡರರ್ ವಿದಾಯದ ಪಂದ್ಯ: ಪಂದ್ಯ ಮುಗಿದ ಬಳಿಕ ಬಿಕ್ಕಿ ಬಿಕ್ಕಿ ಅತ್ತ ರಾಫಾ-ಫೆಡರರ್..! ವಿಡಿಯೋ ವೈರಲ್

ಎದುರಾಳಿಗಳು ಸಹ ಕೊನೆಯಲ್ಲಿ ಈ ರೀತಿಯ ಭಾವನಾತ್ಮಕ ಕ್ಷಣವನ್ನು ಅನುಭವಿಸುತ್ತಾರೆಂದು ಯಾರಾದರೂ ಯೋಚಿಸಿದ್ದೀರ. ಇದೇ ಕ್ರೀಡೆಯ ಸೊಗಸು. ಈ ಕ್ಷಣ ನನ್ನ ಪಾಲಿಗೆ ಕ್ರೀಡೆಯಲ್ಲಿನ ಅತ್ಯಂತ ಸುದರ ಕ್ಷಣ. ಸಹ ಆಟಗಾರರ ನಮಗಾಗಿ ಕಣ್ಣೀರಿಡುವುದು ಇದೆಯಲ್ಲ ಅದು ಅದ್ಭುತ. ನಿಮಗೆ ದೇವರು ನೀಡಿದ ಪ್ರತಿಭೆಯಲ್ಲಿ ನೀವು ಏನೆಲ್ಲಾ ಮಾಡಿದ್ದೀರ ಎನ್ನುವುದು ಗೊತ್ತಿದೆ. ಈ ಇಬ್ಬರು ದಿಗ್ಗರ ಕುರಿತು ಗೌರವ ವಿರಲಿ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.  

Former Captain Virat Kohli opens up on viral crying Roger Federer Rafael Nadal Pic kvn

ರೋಜರ್ ಫೆಡರರ್‌ ಟೆನಿಸ್‌ ಕೋರ್ಟ್‌ ಒಳಗೆ ಹಾಗೂ ಮೈದಾನದಾಚೆಗೆ ತಮ್ಮ ಸಭ್ಯ ಸ್ವಭಾವದ ಮೂಲಕವೇ ಅಸಂಖ್ಯಾತ ಮಂದಿಯ ಪಾಲಿಗೆ ಸ್ಪೂರ್ತಿಯ ಚಿಲುಮೆ ಎನಿಸಿಕೊಂಡಿದ್ದಾರೆ. ಎರಡೂವರೆ ದಶಕಗಳ ಕಾಲ ಟೆನಿಸ್ ವೃತ್ತಿಜೀವನದಲ್ಲಿ ಎಂದಿಗೂ ಅವರು ತಾಳ್ಮೆ ಕಳೆದುಕೊಂಡವರಲ್ಲ. ಸುದೀರ್ಘ ಟೆನಿಸ್ ಜೀವನದಲ್ಲಿ 1527 ಪಂದ್ಯಗಳನ್ನಾಡಿದ್ದರೂ ಸಹಾ ಅವರು ಎದುರಾಳಿ ಆಟಗಾರರ ಜತೆ ಹಾಗೂ ಅಭಿಮಾನಿಗಳ ಜತೆ ನಡೆದುಕೊಂಡ ರೀತಿ ಮುಂಬರುವ ಕ್ರಿಕೆಟ್ ಪೀಳಿಗೆಗೆ ಆದರ್ಶಪ್ರಾಯ ಎನಿಸಿದೆ.

Latest Videos
Follow Us:
Download App:
  • android
  • ios