Asianet Suvarna News Asianet Suvarna News

ಕಿಚ್ಚ ಸುದೀಪ್ Vikrant Rona ಸಿನಿಮಾಗೆ ಶುಭ ಹಾರೈಸಿದ ಮಿಥಾಲಿ ರಾಜ್

* ಕಳೆದ ಶುಕ್ರವಾರ ತೆರೆ ಕಂಡ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ ಶಬ್ಬಾಶ್ ಮಿಥೂ
* ಶಬ್ಬಾಶ್ ಮಿಥೂ ಸಿನಿಮಾ ಮೆಚ್ಚಿಕೊಂಡ ಕಿಚ್ಚ ಸುದೀಪ್
* ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣಗೆ ಶುಭ ಹಾರೈಸಿದ ಮಿಥಾಲಿ ರಾಜ್

Former Captain Mithali Raj wishes Kichcha Sudeepa upcoming film Vikrant Rona kvn
Author
Bengaluru, First Published Jul 18, 2022, 1:21 PM IST

ಬೆಂಗಳೂರು(ಜು.18): ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ ಶಬ್ಬಾಶ್ ಮಿಥೂ ಸಿನೆಮಾವು ಈಗಾಗಲೇ ತೆರೆ ಕಂಡಿದ್ದು, ಸಿನಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಬಹುಭಾಷಾ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡಾ ಶಬ್ಬಾಶ್‌ ಮಿಥೂ ಸಿನಿಮಾವನ್ನು ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಿಥಾಲಿ ರಾಜ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಹಾಗೂ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಸಿನಿಮಾಗೆ ಶುಭ ಹಾರೈಸಿದ್ದಾರೆ.

ಸ್ಯಾಂಡಲ್‌ವುಡ್ ತಾರೆ ಕಿಚ್ಚ ಸುದೀಪ್‌, ಶಬ್ಬಾಶ್ ಮಿಥೂ ಸಿನಿಮಾವು ಮಿಥಾಲಿ ರಾಜ್ ಅವರ ಜೀವನಾಧಾರಿತ ಸ್ಪೂರ್ತಿದಾಯಕ ಕಥೆಯಾಗಿದೆ. ನೀವು ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಸಮುದಾಯಕ್ಕೆ ಸ್ಪೂರ್ತಿಯ ಚಿಲುಮೆಯಾಗಿದ್ದೀರ. ನೀವು ಹಾಕಿದ ಪರಂಪರೆ ಎಂದೆಂದಿಗೂ ನೆನಪಿನಲ್ಲಿ ಉಳಿಯಲಿದೆ. ಒಳಿತಾಗಲಿ ಎಂದು ಟ್ವೀಟ್‌ ಮಾಡಿದ್ದರು.

ಇನ್ನು ಕಿಚ್ಚ ಸುದೀಪ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್, ಧನ್ಯವಾದಗಳು ಹಾಗೂ ನಿಮ್ಮ ಮುಂದಿನ ಸಿನೆಮಾ ವಿಕ್ರಾಂತ್ ರೋಣಗೆ ಒಳ್ಳೆಯ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದ್ದಾರೆ.

ಒಂದು ಕೋಟಿ ಗಡಿ ದಾಟಿದ ಶಬ್ಬಾಶ್ ಮಿಥೂ ಸಿನಿಮಾ ಗಳಿಕೆ: ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ ಶಬ್ಬಾಶ್ ಮಿಥೂ ಚಿತ್ರವು ಜುಲೈ 15ರಂದು ತೆರೆಗೆ ಅಪ್ಪಳಿಸಿದೆ. ಮಿಥಾಲಿ ರಾಜ್ ಪಾತ್ರದಲ್ಲಿ ಖ್ಯಾತ ನಟಿ ತಾಪ್ಸಿ ಪನ್ನು ಕಾಣಿಸಿಕೊಂಡಿದ್ದಾರೆ. ಕಳೆದ ಶುಕ್ರವಾರ ದೇಶಾದ್ಯಂತ ತೆರೆ ಕಂಡ ಶಬ್ಬಾಶ್ ಮಿಥೂ ಸಿನೆಮಾವೂ ಮೊದಲ ದಿನವೇ 40 ಲಕ್ಷ ರುಪಾಯಿ ಗಳಿಸಿತ್ತು. ಇನ್ನು ಎರಡನೇ ದಿನವಾದ ಶನಿವಾರ ಸಿನೆಮಾವೂ 50 ಲಕ್ಷ ರುಪಾಯಿ ಗಳಿಸಿತ್ತು. ಹೀಗಾಗಿ ಮೊದಲೆರಡು ದಿನಗಳಿಂದ ಮಿಥಾಲಿ ಸಿನೆಮಾವೂ ಒಂದು ಕೋಟಿ ರುಪಾಯಿ ಕಲೆಹಾಕಲು ವಿಫಲವಾಗಿತ್ತು. ಬಾಕ್ಸ್‌ ಆಫೀಸ್ ಇಂಡಿಯಾ ವರದಿಯ ಪ್ರಕಾರ ಶಬ್ಬಾಶ್ ಮಿಥೂ ಸಿನೆಮಾವೂ ಶನಿವಾರದಂದು 50 ಲಕ್ಷ ರುಪಾಯಿ ಗಳಿಸಿದೆ. ಭಾನುವಾರದ ಗಳಿಕೆಯೂ ಸೇರಿದಂತೆ ಶಬ್ಬಾಶ್ ಮಿಥೂ ಸಿನೆಮಾವೂ ತನ್ನ ಗಳಿಕೆಯು 1 ಕೋಟಿ ರುಪಾಯಿ ಗಡಿ ದಾಟಿದೆ. 

ಮಿಥಾಲಿ ರಾಜ್ ಜೀವನಾಧಾರಿತ 'ಶಬ್ಬಾಶ್ ಮಿಥೂ' ಸಿನೆಮಾದ ಟ್ರೇಲರ್ ರಿಲೀಸ್‌..!

39 ವರ್ಷದ ಮಿಥಾಲಿ ರಾಜ್‌ ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ದೇಶ ಕಂಡಂತಹ ಅತ್ಯಂತ ದಿಗ್ಗಜ ಕ್ರೀಡಾಪಟುಗಳಲ್ಲಿ ಮಿಥಾಲಿ ರಾಜ್ ಕೂಡಾ ಒಬ್ಬರೆನಿಸಿದ್ದಾರೆ. ಬಲಗೈ ಬ್ಯಾಟರ್ ಮಿಥಾಲಿ ರಾಜ್, ಭಾರತ ತಂಡದ ಪರ 232 ಏಕದಿನ ಪಂದ್ಯಗಳನ್ನಾಡಿ 50.68ರ ಬ್ಯಾಟಿಂಗ್ ಸರಾಸರಿಯಲ್ಲಿ 7,805 ರನ್ ಬಾರಿಸಿದ್ದಾರೆ. ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ 64 ಅರ್ಧಶತಕ ಹಾಗೂ 7 ಶತಕಗಳನ್ನು ಸಿಡಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 8 ವಿಕೆಟ್ ಕಬಳಿಸುವಲ್ಲಿಯೂ ಮಿಥಾಲಿ ರಾಜ್ ಯಶಸ್ವಿಯಾಗಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಟಿ20 ಪಂದ್ಯಗಳ ವಿಚಾರಕ್ಕೆ ಬರುವುದಾದರೇ, ಮಿಥಾಲಿ ರಾಜ್ ಭಾರತ ಪರ 89 ಟಿ20 ಹಾಗೂ 12 ಟೆಸ್ಟ್ ಪಂದ್ಯಗಳನ್ನಾಡಿ ಒಟ್ಟಾರೆ 2,364 ರನ್ ಬಾರಿಸಿದ್ದಾರೆ.

Follow Us:
Download App:
  • android
  • ios