ಮಧ್ಯ ಪ್ರದೇಶ(ಫೆ.01): ಎಂ.ಎಸ್.ಧೋನಿ ಮತ್ತೆ ಮೈದಾನಕ್ಕಿಳಿಯುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಯಾವುದೇ ಪಂದ್ಯ ಆಡಿಲ್ಲ. ಧೋನಿ ನಿವೃತ್ತಿ, ಧೋನಿಯನ್ನು ಕಡೆಗಣಿಸಲಾಗಿದೆ ಅನ್ನೋ ಹಲವು ವರದಿಗಳು ಬಂದರೂ ಧೋನಿ ಮೌನವಾಗಿದ್ದಾರೆ. ಇದೀಗ ಧೋನಿ ದಿಢೀರ್ ಪ್ರತ್ಯಕ್ಷವಾಗೋ ಮೂಲಕ ಅಚ್ಚರಿ ನೀಡಿದ್ದಾರೆ. 

ಇದನ್ನೂ ಓದಿ: IPL 2020: ತಯಾರಿ ಆರಂಭಿಸಿದ ಧೋನಿ-ರೈನಾ!.

ಮಧ್ಯಪ್ರದೇಶದಲ್ಲಿ ಧೋನಿ ಪ್ರತ್ಯಕ್ಷವಾಗಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಜೊತೆ ಧೋನಿ ಕಾಣಿಸಿಕೊಂಡ ತಕ್ಷಣವೇ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅಭಿಮಾನಿಗಳಿಂದ ಧೋನಿಯನ್ನು ರಕ್ಷಿಸಲು ಪೊಲೀಸರು ಹಾಗೂ ಬಾಡಿ ಗಾರ್ಡ್ ಹರಸಾಹಸ ಪಡಬೇಕಾಯಿತು.

 

ಇದನ್ನೂ ಓದಿ: ರಾಹುಲ್‌ಗೆ ಕೀಪಿಂಗ್; ಕೊಹ್ಲಿ- ಧೋನಿ ನಾಯಕತ್ವ ವ್ಯತ್ಯಾಸ ಹೇಳಿದ ಸೆಹ್ವಾಗ್!.

38 ವರ್ಷದ ಧೋನಿ ಸರಿಸುಮಾರು ಕ್ರಿಕೆಟ್ ಆಡದೇ ಒಂದು ವರ್ಷಗಳೇ ಉರುಳುತ್ತಿದೆ. 2020ರ ಐಪಿಎಲ್ ಟೂರ್ನಿ ಬಳಿಕ ಧೋನಿ ಟೀಂ ಇಂಡಿಯಾ ಭವಿಷ್ಯ ನಿರ್ಧರಿಸಲಾಗುತ್ತೆ ಅನ್ನೋ ಮಾತುಗಳು ಕೇಳಿ ಬಂದಿದೆ. ಆದರೆ 2020ರ ಟಿ20  ವಿಶ್ವಕಪ್ ತಂಡದಲ್ಲಿ ಧೋನಿ ಇರಬೇಕು ಅನ್ನೋ ಕೂಗು ಕೇಳಿ ಬರುತ್ತಿದೆ.