ಮೆಲ್ಬೊರ್ನ್(ಜ.02): ಕೊರೋನಾ ವೈರಸ್ ಪ್ರೊಟೋಕಾಲ್ ಉಲ್ಲಂಘಿಸಿದ ಟೀಂ ಇಂಡಿಯಾ ಕ್ರಿಕೆಟಿಗರಾದ ರೋಹಿತ್ ಶರ್ಮಾ ಸೇರಿದಂತೆ ಐವರ ಮೇಲೆ ತನಿಖೆ ನಡೆಸಲು ಬಿಸಿಸಿಐ ಸೂಚಿಸಿದೆ. ನಿಯಮದ ಪ್ರಕಾರ ಕ್ರಿಕೆಟಿಗರು ತಂಗುವ ಹೊಟೆಲ್ ಹಾಗೂ ಕ್ರೀಡಾಂಗಣ ಹೊರತು ಪಡಿಸಿ ಇತರೆಡೆ ತೆರಳುವಂತಿಲ್ಲ. ಆದರೆ ಕ್ವಾರಂಟೈನ್ ಮುಗಿಸಿ ಟೀಂ ಇಂಡಿಯಾ ಸೇರಿಕೊಂಡ ರೋಹಿತ್ ಶರ್ಮಾ ಸಹ ಆಟಗಾರರ ಜೊತೆ ನಿಯಮ ಉಲ್ಲಂಘಿಸಿದ್ದಾರೆ. ಇದು ಬಿಸಿಸಿಐ ಆಕ್ರೋಶಕ್ಕೆ ಕಾರಣವಾಗಿದ್ದರೆ, ಇತ್ತ ಅಭಿಮಾನಿಗಳಿಗೆ ಹೊಟೆಲ್ ಬಿಲ್ ಆಕ್ರೋಶ ತರಿಸಿದೆ.

ರೋಹಿತ್ ಶರ್ಮಾ ಸೇರಿ ಐವರ ವಿರುದ್ಧ ತನಿಖೆಗೆ ಆದೇಶಿಸಿದ BCCI; ಸಂಕಷ್ಟದಲ್ಲಿ ಟೀಂ ಇಂಡಿಯಾ!.

ಹೊಟೆಲ್ ತೆರಳಿದ ರೋಹಿತ್ ಶರ್ಮಾ, ರಿಷಬ್ ಪಂತ್, ನವದೀಪ್ ಸೈನಿ, ಶುಬಮನ್ ಗಿಲ್ ಹಾಗೂ ಪೃಥ್ವಿ ಶಾ ಹಲವು ತನಿಸು ಆರ್ಡರ್ ಮಾಡಿದ್ದಾರೆ. ಬಳಿಕ ಬಿಲ್ ಅಭಿಮಾನಿ ನವಲ್‌ದೀಪ್ ಸಿಂಗ್ ಪಾವತಿ ಮಾಡಿದ್ದರು. ಇಷ್ಟೇ ಅಲ್ಲ, ಈ ಬಿಲ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಬಿಲ್‌ನಲ್ಲಿ ಟೀಂ  ಇಂಡಿಯಾ ಆಟಗಾರರು ಖರೀದಿಸಿದ ತಿನಿಸುಗಳ ವಿವರ ಇದೆ. ಇದರಲ್ಲಿ ಬೀಫ್(ದನದ ಮಾಂಸ) ಖಾದ್ಯ ಪಡೆದಿರುವ ಮಾಹಿತಿ ಇದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. 

ಶರ್ಮಾಜಿಕಾ ಬೇಟೆ ಬೀಫ್ ಖಾತಾ ಹೈ ಎಂದು ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರ ಈ ಹಿಂದೆ ಬೀಫ್ ಬೇಡ ಎಂದು ವಿಶ್ವದಲ್ಲಿ ಸುದ್ದಿಯಾಗಿದ್ದರು. ಆದರೆ ಇದು ತೋರ್ಪಡಿ ಮಾತ್ರವೇ ಎಂದು ಪ್ರಶ್ನಿಸಿದ್ದಾರೆ. ಹಂದಿ ಮಾಂಸ ಒಕೆ, ಆದರೆ ದನದ ಮಾಂಸ ಯಾಕೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.