ಮುಂಬೈ ಮಣಿಸಿ RCB ಪಡೆಯನ್ನು ಫೈನಲ್‌ಗೇರಿಸಿದ ಪೆರ್ರಿ..! ಈಕೆ ನಮ್ ಬಂಗಾರ ಎಂದ್ರು ಫ್ಯಾನ್ಸ್..!
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧನಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಆರ್‌ಸಿಬಿ ತಂಡವು ಕೇವಲ 23 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು.
ನವದೆಹಲಿ(ಮಾ.16): ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡವು 5 ರನ್ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಫೈನಲ್‌ಗೇರುವಲ್ಲಿ ಆರ್‌ಸಿಬಿ ಮಹಿಳಾ ತಂಡವು ಯಶಸ್ವಿಯಾಗಿದೆ. ಇನ್ನು ಆರ್‌ಸಿಬಿ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಲೈಸಿ ಪೆರ್ರಿಯನ್ನು ಬೆಂಗಳೂರು ಅಭಿಮಾನಿಗಳು ಮನಸಾರೆ ಕೊಂಡಾಡಿದ್ದಾರೆ.
ಹೌದು, ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧನಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಆರ್‌ಸಿಬಿ ತಂಡವು ಕೇವಲ 23 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು.
ಹಾರ್ದಿಕ್ ಪಾಂಡ್ಯ ಚಂದ್ರಲೋಕದಿಂದ ಬಂದಿದ್ದಾ? ಟೀಂ ಇಂಡಿಯಾ ಆಲ್ರೌಂಡರ್ ಮೇಲೆ ಮಾಜಿ ವೇಗಿ ಸಿಡಿಮಿಡಿ
ಹೀಗಿದ್ದೂ ಧೃತಿಗೆಡದ ಆರ್‌ಸಿಬಿ ನಂಬಿಗಸ್ಥ ಬ್ಯಾಟರ್ ಎಲೈಸಿ ಪೆರ್ರಿ ಮತ್ತೊಮ್ಮೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಲೀಗ್ ಹಂತದ ಕೊನೆಯ ಪಂದ್ಯದಲ್ಲೂ ಮುಂಬೈ ಎದುರು ಅಮೋಘ ಆಲ್ರೌಂಡ್ ಪ್ರದರ್ಶನ ತೋರಿದ್ದ ಎಲೈಸಿ ಪೆರ್ರಿ, ಇದೀಗ ಮತ್ತೊಮ್ಮೆ ಎಲಿಮಿನೇಟರ್ ಪಂದ್ಯದಲ್ಲೂ ತಂಡಕ್ಕೆ ಆಸರೆಯಾದರು. ಮೊದಲಿಗೆ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಪೆರ್ರಿ, ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಪ್ರದರ್ಶನ ತೋರಿದರು. ಒತ್ತಡದ ಪರಿಸ್ಥಿತಿಯಲ್ಲೂ ದಿಟ್ಟ ಬ್ಯಾಟಿಂಗ್ ನಡೆಸಿದ ಪೆರ್ರಿ ಕೇವಲ 50 ಎಸೆತಗಳಲ್ಲಿ 66 ರನ್ ಸಿಡಿಸುವ ಮೂಲಕ ತಂಡದ ಒಟ್ಟು ಗಳಿಕೆಯ ಅರ್ಧದಷ್ಟು ರನ್‌ಗಳನ್ನು ಏಕಾಂಗಿಯಾಗಿ ಗಳಿಸಿದರು. ಇದರಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಕೂಡಾ ಸೇರಿತ್ತು. ಇನ್ನು ಇದಾದ ಬಳಿಕ ಬೌಲಿಂಗ್‌ನಲ್ಲಿ ಪೆರ್ರಿ 4 ಓವರ್ ಬೌಲಿಂಗ್ ಮಾಡಿ 29 ರನ್ ನೀಡಿ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
WPL 2024 ಕಪ್ ಕನಸಿನಲ್ಲಿರುವ ಆರ್‌ಸಿಬಿ ಫೈನಲ್‌ಗೆ ಲಗ್ಗೆ!
ಎಲೈಸಿ ಪೆರ್ರಿ ಆಲ್ರೌಂಡ್ ಪ್ರದರ್ಶನ ಹಾಗೂ ಸ್ಪಿನ್ನರ್‌ಗಳ ಮಿಂಚಿನ ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಎದುರು ಆರ್‌ಸಿಬಿ ಅತಿರೋಚಕ ಗೆಲುವು ಸಾಧಿಸಿದೆ. ಇನ್ನು ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್ ಪ್ರವೇಶಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ನೆಟ್ಟಿಗರು, ನಮ್ ಬಂಗಾರ ಕಂಡ್ರೋ ಇವ್ಳು ಎಲೈಸಿ ಪೆರ್ರಿ, ಹಿಂಗೆ ಕಪ್ ಗೆಲ್ಲಿಸ್ಬಿಡು ಬಂಗಾರ ಎಂದು ಕೊಂಡಾಡಿದ್ದಾರೆ.