ಸೂರತ್(ಡಿ.02): ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ತಮಿಳು ನಾಡು ಹೋರಾಟ ಅತ್ಯಂತ ರೋಚಕವಾಗಿತ್ತು. ಜಿದ್ದಾ ಜಿದ್ದಿನ ಹೋರಾಟದಲ್ಲಿ ಕರ್ನಾಟಕ 1 ರನ್‌ಗಳ ರೋಚಕ ಗೆಲುವು ಸಾಧಿಸಿತು. ಅಂತಿಮ ಎಸೆತದವರೆಗೂ ಗೆಲುವು ಯಾರಿಗೆ ಅನ್ನೋ ನಿರ್ಧಾರವಾಗಿರಲಿಲ್ಲ. ಈ ಪಂದ್ಯದಲ್ಲಿ ಆರ್ ಅಶ್ವಿನ್ ಸಂಭ್ರಮಕ್ಕೆ ಟೀಕೆಗಳು ವ್ಯಕ್ತವಾಗಿದೆ.'

ಇದನ್ನೂ ಓದಿ: ತಮಿಳುನಾಡಿಗೆ ಸತತ 2ನೇ ಶಾಕ್; ಮುಷ್ತಾಕ್ ಆಲಿ ಟ್ರೋಫಿ ಗೆದ್ದ ಕರ್ನಾಟಕ!.

ವಿಜಯ್ ಶಂಕರ್ ಜೊತೆ ಬ್ಯಾಟಿಂಗ್ ಆರ್ ಅಶ್ವಿನ್ ಬ್ಯಾಟಿಂಗ್ ಮುಂದವರಿಸಿದ್ದರು. ಅಂತಿಮ ಓವರ್‌ನಲ್ಲಿ ತಮಿಳುನಾಡು ಗೆಲುವಿಗೆ 13 ರನ್ ಬೇಕಿತ್ತು. ಕ್ರೀಸ್‌ನಲ್ಲಿ ಅಶ್ವಿನ್ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು. ಮರು ಎಸೆತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾದರು. ಹೀಗಾಗಿ ಅಂತಿಮ 4 ಎಸೆತದಲ್ಲಿ 5 ರನ್ ಬೇಕಿತ್ತು. ಈ ವೇಳೆ ಆರ್ ಅಶ್ವಿನ್ ಗೆಲುವು ನಮ್ಮದೆ ಎಂದು ಸಂಭ್ರಮ ಆಚರಿಸಿದರು. ಆದರೆ ಪಂದ್ಯದಲ್ಲಿ ತಮಿಳುನಾಡು ಮುಗ್ಗರಿಸಿತು. 

ಇದನ್ನೂ ಓದಿ: ಸತತ 2 ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮೊದಲ ತಂಡ ಕರ್ನಾಟಕ!

ಆರ್ ಅಶ್ವಿನ್ ಸಂಭ್ರಮ, 2016ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಸಂಭ್ರಮವನ್ನು ನೆನಪಿಸಿತ್ತು. ಭಾರತ ವಿರುದ್ದದ ಮಹತ್ವದ ಪಂದ್ಯದಲ್ಲಿ ಬಾಂಗ್ಲಾದೇಶ ಅಂತಿಮ ಓವರ್‌ನಲ್ಲಿ ಇದೇ ರೀತಿ ಸಂಭ್ರಮ ಆಚರಿಸಿತ್ತು. ಮುಶ್ಫೀಕರ್ ರಹೀಮ್ ಬೌಂಡರಿ ಸಿಡಿಸಿ ಇನ್ನೇನು ಗೆಲುವು ಖಚಿತ ಎಂದು ಸಂಭ್ರಮಿಸಿದ್ದರು. ಆದರೆ ಎಂ.ಎಸ್.ಧೋನಿ ಅದ್ಭುತ ಸ್ಟಂಪ್ ಮೂಲಕ ಬಾಂಗ್ಲಾದೇಶ ಸೋಲಿಗೆ ಶರಣಾಗಿತ್ತು.

ಇದೀಗ ಮುಶ್ಫೀಕರ್ ರಹೀಮ್ ಹಾಗೂ ಆರ್ ಅಶ್ವಿನ್ ಸಂಭ್ರಮ ಒಂದೇ ರೀತಿ ಇದೆ. ಗೆಲುವಿಗೆ ಮೊದಲು ಸಂಭ್ರಮಿಸಬಾರದು ಅನ್ನೋದಕ್ಕೆ ಇವರಿಬ್ಬರು ಎಲ್ಲರಿಗೂ ಪಾಠವಾಗಿದ್ದಾರೆ ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.