ಚೆನ್ನೈ(ಫೆ.09): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್‌ ಪಂದ್ಯ ವೀಕ್ಷಿಸಲು ಚೆಪಾಕ್‌ ಕ್ರೀಡಾಂಗಣಕ್ಕೆ ಆಗಮಿಸುವ ಅಭಿಮಾನಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್‌ಸಿಎ) ಸೋಮವಾರ ತಿಳಿಸಿದೆ.

ಚೆಪಾಕ್‌ ಕ್ರೀಡಾಂಗಣದಲ್ಲಿ ಪ್ರತಿದಿನ ಅಂದಾಜು 15000 ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಪ್ರವೇಶ ನೀಡಲಿದ್ದು, ಮಾರ್ಗಸೂಚಿಯಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಲಾಗಿದೆ. ಫೆಬ್ರವರಿ 13ರಿಂದ ಎರಡನೇ ಟೆಸ್ಟ್ ಆರಂಭಗೊಳ್ಳಲಿದ್ದು, ಕೋವಿಡ್‌ ನಂತರ ಭಾರತದಲ್ಲಿ ಮೊದಲ ಬಾರಿಗೆ ಕ್ರೀಡಾಂಗಣ ಪ್ರವೇಶಿಸಲು ಪ್ರೇಕ್ಷಕರಿಗೆ ಅವಕಾಶ ಸಿಗಲಿದೆ. ಸದ್ಯ ಭಾರತ-ಇಂಗ್ಲೆಂಡ್‌ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯವು ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಮದುವೆ ಮನೆಯಲ್ಲಿ ಭಾರತ-ಇಂಗ್ಲೆಂಡ್‌ ಕ್ರಿಕೆಟ್ ನೇರ ಪ್ರಸಾರ: ಫೋಟೋ ವೈರಲ್

ಎರಡನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಟಿಎನ್‌ಸಿಎ 8 ಮಾರ್ಗಸೂಚಿಗಳನ್ನು ಪ್ರಕಟಿಸಿದೆ, ಈ ಪೈಕಿ ಕೆಲವೊಂದು ಕಟ್ಟುನಿಟ್ಟಾದ ನಿಯಮಗಳು ಇಲ್ಲಿವೆ ನೋಡಿ.

* ಕೋವಿಡ್ 19 ಸೋಂಕಿನ ಲಕ್ಷಣ ಇರುವವರು, ಜ್ವರ, ಕೆಮ್ಮು, ಶೀತದ ಲಕ್ಷಣ ಹೊಂದಿರುವ ವ್ಯಕ್ತಿಗಳಿಗೆ ಮೈದಾನ ಪ್ರವೇಶಿಸಲು ಅವಕಾಶವಿಲ್ಲ
* ಜನಾಂಗೀಯ ನಿಂದನೆ, ಧಾರ್ಮಿಕ, ಭಾವನಾತ್ಮಕ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ಬ್ಯಾನರ್ ಪ್ರದರ್ಶಿಸಲು ಅವಕಾಶವಿಲ್ಲ.
* ಮೈದಾನದೊಳಗೆ ಮಧ್ಯಪಾನ, ಧೂಮಪಾನ ಹಾಗೂ ಇನ್ನಿತರ ಮಾಧಕ ವಸ್ತುಗಳ ಬಳಕೆಗೆ ಅವಕಾಶವಿಲ್ಲ