3 ಕೋಟಿ ರುಪಾಯಿಗೆ ನಟರಾಜನ್‌ರನ್ನು KXIP ತಂಡಕ್ಕೆ ಖರೀದಿಸಿದಾಗ ಎಲ್ಲರೂ ಪ್ರಶ್ನಿಸಿದ್ದರು: ಸೆಹ್ವಾಗ್
ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಟಿ. ನಟರಾಜನ್ ಖರೀದಿಸಿದ್ದರ ಬಗ್ಗೆ ನಾನು ಟೀಕೆಗಳನ್ನು ಎದುರಿಸಿದ್ದ ಎಂದು ವಿರೇಂದ್ರ ಸೆಹ್ವಾಗ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಕ್ಯಾನ್‌ಬೆರ್ರಾ(ಡಿ.03): 2017ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಟಿ. ನಟರಾಜನ್ ಅವರಿಗೆ 3 ಕೋಚಿ ರುಪಾಯಿಗೆ ನೀಡಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಸೇರಿಸಿಕೊಂಡಿದ್ದರ ಬಗ್ಗೆ ಹಲವು ಪ್ರಶ್ನೆ ಮಾಡಿದ್ದರು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
2017ರಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮೆಂಟರ್ ಆಗಿದ್ದ ವಿರೇಂದ್ರ ಸೆಜ್ವಾಗ್, 3 ಕೋಟಿ ನೀಡಿ ನಟರಾಜನ್ ಅವರನ್ನು ಖರೀದಿಸಿದ್ದಕ್ಕೆ ನನ್ನ ಮೇಲೆ ಹಲವು ಪ್ರಶ್ನೆಗಳು ಹಾಗೂ ಟೀಕೆಗಳು ಎದುರಾಗಿದ್ದವು ಎಂದು ಸೆಹ್ವಾಗ್ ಹೇಳಿದ್ದಾರೆ. ತಮಿಳುನಾಡು ಪ್ರೀಮಿಯರ್ ಲೀಗ್(TNPL)ನಲ್ಲಿ ನಟರಾಜನ್ ಅದ್ಭುತ ಬೌಲಿಂಗ್ ಪ್ರದರ್ಶನ ಕಂಡು ಸೆಹ್ವಾಗ್, ಎಡಗೈ ಯಾರ್ಕರ್ ಸ್ಪೆಷಲಿಸ್ಟ್ ಅವರನ್ನು ತಮ್ಮ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ 2017ರ ಐಪಿಎಲ್ ಟೂರ್ನಿಯಲ್ಲಿ ಟಿ. ನಟರಾಜನ್ 6 ಪಂದ್ಯಗಳನ್ನಾಡಿ ಕೇವಲ 2 ವಿಕೆಟ್ ಪಡೆಯಲಷ್ಟೇ ಶಕ್ತವಾಗಿದ್ದರು. ಹೀಗಾಗಿ ನಟರಾಜನ್ ಖರೀದಿಯ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು.
ಆಸ್ಟ್ರೇಲಿಯಾ ವಿರುದ್ದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ನಟರಾಜನ್ ಬಗ್ಗೆ ಪ್ರತಿಕ್ರಿಯಿಸಿರುವ ಸೆಹ್ವಾಗ್, ನಾನು ನಟರಾಜನ್ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಖರೀದಿಸಿದಾಗ, ಎಲ್ಲರೂ ದೇಸಿ ಕ್ರಿಕೆಟ್ ಟೂರ್ನಿಯನ್ನೂ ಆಡದ ಕೇವಲ ಟಿಎನ್‌ಪಿಎಲ್ ಪ್ರದರ್ಶನದ ಆದಾರದಲ್ಲಿ ದುಬಾರಿ ಮೊತ್ತಕ್ಕೆ ಆತನನ್ನು ಖರೀದಿಸಿದ್ದಾರೆ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದರು. ಆದರೆ ಇಂದು ನಟರಾಜನ್ ಪ್ರದರ್ಶನ ಖುಷಿಕೊಟ್ಟಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.
ಆಸೀಸ್ ವಿರುದ್ದ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ..!
ನಾನು ಆತನ ಬೌಲಿಂಗ್ ಶೈಲಿಯನ್ನು ಗಮನಿಸಿ, ಮುಂಬರುವ ಹರಾಜಿನಲ್ಲಿ ಆತನನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಖರೀದಿಸಬೇಕು ಎಂದು ತೀರ್ಮಾನಿಸಿದ್ದೆ. ಆದರೆ ಆ ವರ್ಷ ನಟರಾಜನ್ ಗಾಯಕ್ಕೆ ತುತ್ತಾಗಿದ್ದರಿಂದ ಹೆಚ್ಚು ಪಂದ್ಯಗಳನ್ನಾಡಲು ಆತನಿಗೆ ಸಾಧ್ಯವಾಗಿಲಿಲ್ಲ. ಆದರೆ ನಟರಾಜನ್ ಆಡಿದ ಎಲ್ಲಾ ಪಂದ್ಯಗಳನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಗೆದ್ದುಕೊಂಡಿತ್ತು ಎಂದು ಸೆಹ್ವಾಗ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ನಟರಾಜನ್, ಇದೀಗ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಟಿ20 ಸರಣಿ ಡಿಸೆಂಬರ್ 04ರಿಂದ ಆರಂಭವಾಗಲಿದ್ದು, ಕ್ಯಾನ್‌ಬೆರ್ರಾದ ಮನುಕಾ ಓವಲ್ ಮೈದಾನ ಮೊದಲ ಚುಟುಕು ಕ್ರಿಕೆಟ್ ಪಂದ್ಯಕ್ಕೆ ಆತಿಥ್ಯ ವಹಿಸಿದೆ.