ಇಂಗ್ಲೆಂಡ್‌ಗೆ ಶಾಕ್ ನೀಡಿದ ಜಸ್ಪ್ರೀತ್ ಬುಮ್ರಾ; 6 ರನ್‌ಗೆ 2 ವಿಕೆಟ್ ಪತನ!

  • ಜಸ್ಪ್ರೀತ್ ಬುಮ್ರಾ ದಾಳಿಗೆ ಇಂಗ್ಲೆಂಡ್‌ಗೆ ಆರಂಭಿಕ ಶಾಕ್
  • 6 ರನ್ ಗಳಿಸುವಷ್ಟರಲ್ಲೇ ಮೊದಲೆರಡು ವಿಕೆಟ್ ಪತನ
  • ಅಬ್ಬರಿಸುವ ವಿಶ್ವಾಸದಲ್ಲಿದ್ದ ಇಂಗ್ಲೆಂಡ್‌ ಪ್ಲಾನ್ ಉಲ್ಟಾ
ENGvsING Team India strikes england early wickets in day 1 oval test ckm

ಲಂಡನ್(ಸೆ.02): ಟೀಂ ಇಂಡಿಯಾ ತಂಡವನ್ನು 191 ರನ್‌ಗೆ ಆಲೌಟ್ ಮಾಡಿ 3ನೇ ಟೆಸ್ಟ್ ಪಂದ್ಯದಂತ ಬೃಹತ್ ಮೊತ್ತ ಪೇರಿಸುವ ವಿಶ್ವಾಸದಲ್ಲಿದ್ದ ಇಂಗ್ಲೆಂಡ್ ದಿಢೀರ್ ವಿಕೆಟ್ ಕಳೆದುಕೊಂಡಿದೆ. ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ಮೊದಲೆರೆಡು ವಿಕೆಟ್ ಪತನಗೊಂಡಿದೆ.

ಜಸ್ಪ್ರೀತ್ ಬುಮ್ರಾ ದಾಳಿಗೆ ಇಂಗ್ಲೆಂಡ್ ತತ್ತರಿಸಿದೆ. ರೋರಿ ಬರ್ನ್ಸ್ ಕೇವಲ 5 ರನ್  ಸಿಡಿಸಿ ಔಟಾದರು. ಇನ್ನು ಹಸೀಬ್ ಹಮೀದ್ ಶೂನ್ಯಕ್ಕೆ ಔಟಾದರು.  6 ರನ್‌ಗಳಿಸುವಷ್ಟರಲ್ಲೇ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡಿತು. ಡೇವಿಡ್ ಮಲನ್ ಹಾಗೂ ನಾಯಕ ಜೋ ರೂಟ್ ಜೊತೆಯಾಟದಿಂದ ಇಂಗ್ಲೆಂಡ್ ಚೇತರಿಸಿಕೊಂಡಿದೆ. 

ಟಾಸ್ ಗೆದ್ದು ಟೀಂ ಇಂಡಿಯಾಗೆ ಬ್ಯಾಟಿಂಗ್ ಆಹ್ವಾನ ನೀಡಿದ ಇಂಗ್ಲೆಂಡ್ ನಿರೀಕ್ಷೆಯಂಂತೆ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿತು. ಕ್ರಿಸ್ ವೋಕ್ಸ್ ದಾಳಿಗೆ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ನಾಯಕ ವಿರಾಟ್ ಕೊಹ್ಲಿ ಹಾಗೂ ಶಾರ್ದೂಲ್ ಠಾಕೂರ್ ಸಿಡಿಸಿದ ಅರ್ಧಶತಕದಿಂದ ಟೀಂ ಇಂಡಿಯಾ 191 ರನ್ ಸಿಡಿಸಿ ಆಲೌಟ್ ಆಯಿತು.

ಮೊದಲ ಟೆಸ್ಟ್ ಪಂದ್ಯ ಮಳೆಯಿಂದ ರದ್ದಾದರೆ, 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಇನ್ನು 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿತು. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯ ಮಹತ್ವ ಪಡೆದುಕೊಂಡಿದೆ.

Latest Videos
Follow Us:
Download App:
  • android
  • ios