ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ಕನ್ನಡದಲ್ಲೇ ಈ ಸಲ ಕಪ್‌ ನಮ್ದೇ ಎಂದು ಟ್ವೀಟ್‌ ಮಾಡುವ ಮೂಲಕ ಕನ್ನಡಿಗರ ಹಾಗೂ ಆರ್‌ಸಿಬಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಬೆಂಗಳೂರು(ಏ.14): ವಿರಾಟ್ ಕೊಹ್ಲಿ ನೇತೃತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. 13 ಆವೃತ್ತಿಗಳನ್ನಾಡಿ ಕಪ್‌ ಗೆಲ್ಲದಿದ್ದರೂ ಆರ್‌ಸಿಬಿ ಮೇಲಿನ ಅಭಿಮಾನ ಫ್ಯಾನ್ಸ್‌ಗಳಲ್ಲಿ ಎಳ್ಳಷ್ಟೂ ಕಡಿಮೆಯಾಗಿಲ್ಲ. 

Add Asianetnews Kannada as a Preferred SourcegooglePreferred

ಹೌದು, ಕಪ್‌ ಗೆಲ್ಲದಿದ್ದರೂ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವ ತಂಡವೆಂದರೆ ಅದು ಬೆಂಗಳೂರು ಮೂಲದ ಫ್ರಾಂಚೈಸಿಯಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು. ಆರ್‌ಸಿಬಿ ಕಪ್‌ ಗೆಲ್ಲಲಿ ಎಂದು ಅಭಿಮಾನಿಗಳು ಈ ಸಲ ಕಪ್‌ ನಮ್ದೇ ಎಂದು ಹುರಿದುಂಬಿಸುತ್ತಲೇ ಬಂದಿದ್ದಾರೆ. ಹೀಗಿದ್ದೂ ಆರ್‌ಸಿಬಿಗೆ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ಆರ್‌ಸಿಬಿಗೆ ಬೆಂಬಲ ಸೂಚಿಸಿದ್ದು, ಈ ಸಲ ಕಪ್‌ ನಮ್ದೇ ಎಂದು ಕನ್ನಡದಲ್ಲೇ ಟ್ವೀಟ್‌ ಮಾಡಿ ಕನ್ನಡಿಗರ ಹೃದಯ ಗೆದ್ದಿದ್ದಾರೆ.

Scroll to load tweet…

ಅಲೆಕ್ಸಾಂಡ್ರಾ ಹಾರ್ಟ್ಲಿ ಆರ್‌ಸಿಬಿ ಬೆಂಬಲಿಸಿ ಕನ್ನಡದಲ್ಲಿ ಮಾಡಿದ ಈ ಟ್ವೀಟ್‌ಗೆ ಕೆಲವೇ ಗಂಟೆಗಳಲ್ಲಿ 11 ಸಾವಿರಕ್ಕೂ ಅಧಿಕ ಲೈಕ್ಸ್‌ ಹಾಗೂ ಮೂರು ಸಾವಿರಕ್ಕೂ ಅಧಿಕ ರೀಟ್ವೀಟ್‌ ಆಗಿದೆ. ಇಂಗ್ಲೆಂಡ್ ಆಟಗಾರ್ತಿಯ ಬೆಂಗಳೂರು ಹಾಗೂ ಕನ್ನಡದ ಮೇಲಿನ ಅಭಿಮಾನಕ್ಕೆ ಆರ್‌ಸಿಬಿ ಫ್ಯಾನ್ಸ್‌ ಫಿದಾ ಆಗಿದ್ದಾರೆ.

IPL 2021 ಸನ್‌ರೈಸರ್ಸ್‌ ಮೇಲೆ ಸವಾರಿ ಮಾಡುತ್ತಾ ಆರ್‌ಸಿಬಿ..?

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಬಗ್ಗುಬಡಿದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇದೀಗ ಏಪ್ರಿಲ್ 14ರಂದು ಮಾಜಿ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಕಾದಾಟ ನಡೆಸಲಿದೆ.