Asianet Suvarna News Asianet Suvarna News

ಟೀಂ ಇಂಡಿಯಾ 278 ರನ್‌ಗೆ ಆಲೌಟ್, ಇಂಗ್ಲೆಂಡ್ ವಿರುದ್ಧ 95 ರನ್ ಮುನ್ನಡೆ!

  • ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ದಿಟ್ಟ ಹೋರಾಟ
  • ಇಬ್ಬರ ಹಾಫ್ ಸೆಂಚುರಿಯಿಂದ ಭಾರತಕ್ಕೆ 95 ರನ್ ಮುನ್ನಡೆ
  • ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 278 ರನ್‌ಗೆ ಆಲೌಟ್
England restrict team India by 278 runs Kohli team lead by 95 runs in 1st innings trent bridge ckm
Author
Bengaluru, First Published Aug 6, 2021, 8:32 PM IST
  • Facebook
  • Twitter
  • Whatsapp

ನಾಟಿಂಗ್‌ಹ್ಯಾಮ್(ಆ.06): ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಅರ್ಧಶತಕ, ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ದದ ಮೊದಲ ಇನ್ನಿಂಗ್ಸ್‌ನಲ್ಲಿ 95 ರನ್ ಮುನ್ನಡೆ ಪಡೆದುಕೊಂಡಿದೆ. ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಿರುವ ಟೀಂ ಇಂಡಿಯಾ 278 ರನ್‌ಗೆ ಆಲೌಟ್ ಆಗಿದೆ.

 

ಕೆಎಲ್ ರಾಹುಲ್ ಹೋರಾಟ; ಇಂಗ್ಲೆಂಡ್ ವಿರುದ್ದ ಮೊದಲ ಇನ್ನಿಂಗ್ಸ್ ಮುನ್ನಡೆ!

ತೃತೀಯ ದಿನದಾಟದಲ್ಲಿ ಕೆಎಲ್ ರಾಹುಲ್ 84 ರನ್ ಕಾಣಿಕೆ ನೀಡಿದರು. ರಿಷಬ್ ಪಂತ್ 25 ರನ್ ಸಿಡಿಸಿ ಔಟಾದರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ 56 ರನ್ ಸಿಡಿಸಿ ಔಟಾದರು. ಶಾರ್ದೂಲ್ ಶೂನ್ಯ ಸುತ್ತಿದರೆ, ಮೊಹಮ್ಮದ್ ಶಮಿ 13 ರನ್ ಸಿಡಿಸಿದರು. ಆದರೆ ಜಸ್ಪ್ರೀತ್ ಬುಮ್ರಾ ಅಂತಿಮ ಹಂತದ ಹೋರಾಟವೂ ಟೀಂ ಇಂಡಿಯಾಗೆ ನೆರವಾಯಿತು.

ಭಾರಿ ವಿರೋಧದ ಬಳಿಕ ತಪ್ಪು ಸರಿಪಡಿಸಿಕೊಂಡ ಟ್ವಿಟರ್; ಧೋನಿ ಬ್ಲೂಟಿಕ್ ವಾಪಸ್!

ಬುಮ್ರಾ 28 ರನ್ ಸಿಡಿಸಿದರು. ಬುಮ್ರಾ ವಿಕೆಟ್ ಪತನದೊಂದಿಗೆ ಟೀಂ ಇಂಡಿಯಾ 278 ರನ್‌ಗೆ ಆಲೌಟ್ ಆಯಿತು.  ಇಂಗ್ಲೆಂಡ್ ಪರ ಒಲ್ಲಿ ರಾಬಿನ್ಸ್ 5 ವಿಕೆಟ್ ಕಬಳಿಸಿದರೆ, ಜೇಮ್ಸ್ ಆ್ಯಂಡರ್ಸನ್ 4 ವಿಕೆಟ್ ಕಬಳಿಸಿದರು.

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್
ಟಾಸ್ ಗೆದ್ದ ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಟೀಂ ಇಂಡಿಯಾ ದಾಳಿಗೆ ತತ್ತರಿಸಿತು. ಜೋ ರೂಟ್ ಸಿಡಿಸಿದ 64 ರನ್ ಹೊರತು ಪಡಿಸಿದರೆ ಇತರ ಬ್ಯಾಟ್ಸ್‌‌ಮನ್ ಅಬ್ಬರಿಸಲಿಲ್ಲ. ಹೀಗಾಗಿ ಇಂಗ್ಲೆಂಡ್ 183 ರನ್‌ಗೆ ಆಲೌಟ್ ಆಗಿತ್ತು. ಜಸ್ಪ್ರೀತ್ ಬುಮ್ರಾ 4, ಮೊಹಮ್ಮದ್ ಶಮಿ 3, ಶಾರ್ದೂಲ್ ಠಾಕೂರ್ 2 ಹಾಗೂ ಮೊಹಮ್ಮದ್ ಸಿರಾಜ್ 1 ವಿಕೆಟ್ ಕಬಳಿಸಿ ಮಿಂಚಿದರು.
 

Follow Us:
Download App:
  • android
  • ios