Asianet Suvarna News Asianet Suvarna News

ಕೆಎಲ್ ರಾಹುಲ್ ಹೋರಾಟ; ಇಂಗ್ಲೆಂಡ್ ವಿರುದ್ದ ಮೊದಲ ಇನ್ನಿಂಗ್ಸ್ ಮುನ್ನಡೆ!

  • ಕೆಎಲ್ ರಾಹುಲ್ ಹೋರಾಟದಿಂದ ಭಾರತ ದಿಟ್ಟ ಹೋರಾಟ
  • ಲಂಚ್ ಬ್ರೇಕ್ ವೇಳೆ ಭಾರತಕ್ಕೆ ಇನ್ನಿಂಗ್ಸ್ ಮುನ್ನಡೆ
  • ರಾಹುಲ್‌ಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ
India vs England test match Kohli boys lead by 8 runs in 1st innings trent bridge ckm
Author
Bengaluru, First Published Aug 6, 2021, 6:26 PM IST
  • Facebook
  • Twitter
  • Whatsapp

ನಾಟಿಂಗ್‌ಹ್ಯಾಮ್(ಆ.06): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಟೀಂ ಇಂಡಿಯಾಗೆ ಹಲವು ಸವಾಲು ಒಡ್ಡಿತ್ತು. ಆದರೆ ಕೆಎಲ್ ರಾಹುಲ್ ದಿಟ್ಟ ಹೋರಾಟ ನೀಡೋ ಮೂಲಕ ಭಾರತಕ್ಕೆ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟಿದ್ದಾರೆ. ಭೋಜನ ವಿರಾಮದ ವೇಳೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 191 ರನ್ ಸಿಡಿಸಿದೆ. ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 8 ರನ್ ಮುನ್ನಡೆ ಪಡೆದುಕೊಂಡಿದೆ.

 

ದಿಗ್ಗಜ ಎಂಎಸ್‌ ಧೋನಿ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ಮಾಯ, ಕಾರಣ  ಗೊತ್ತಿಲ್ಲ!

ದ್ವಿತೀಯ ದಿನದಾಟದಲ್ಲಿ ದಿಢೀರ್ ವಿಕೆಟ್ ಪತನ, ಮಳೆ ಕಾಟ ಟೀಂ ಇಂಡಿಯಾಗೆ ಇನ್ನಿಲ್ಲದಂತೆ ಕಾಡಿತ್ತು. ಅರ್ಧಶತಕ ಸಿಡಿಸಿ ನೆರವಾಗಿದ್ದ ಕೆಎಲ್ ರಾಹುಲ್ ತೃತೀಯ ದಿನದಲ್ಲಿ ಬ್ಯಾಟಿಂಗ್ ಮುಂದುವರಿಸಿದರು. ರಾಹುಲ್ ಲಂಚ್ ಬ್ರೇಕ್ ವೇಳೆ ರಾಹುಲ್ ಅಜೇಯ 77 ರನ್ ಸಿಡಿಸಿದರೆ, ದಿಟ್ಟ ಹೋರಾಟ ನೀಡಿದ ರವೀಂದ್ರ ಜಡೇಜಾ ಅಜೇಯ 27 ರನ್ ಸಿಡಿಸಿದರು.

 

ಆರಂಭಗೊಂಡ INDvsENG ಟೆಸ್ಟ್ ಪಂದ್ಯ ಮತ್ತೆ ಸ್ಥಗಿತ; ಬಿಟ್ಟು ಬಿಡದೆ ಕಾಡುತ್ತಿದೆ ಮಳೆರಾಯ

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 183 ರನ್‌ಗೆ ಆಲೌಟ್ ಆಗಿತ್ತು. ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ದಾಳಿಗೆ ಇಂಗ್ಲೆಂಡ್ ತತ್ತರಿಸಿತ್ತು. ಬುಮ್ರಾ 4 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿದರೆ, ಶಾರ್ದೂಲ್ ಠಾಕೂರ್ 2 ಹಾಗೂ ಮೊಹಮ್ಮದ್ ಸಿರಾಜ್ 1 ವಿಕೆಟ್ ಕಬಳಿಸಿದರು.

Follow Us:
Download App:
  • android
  • ios