ಲಂಡನ್(ಮಾ.28)‌: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಬ್ರಿಟನ್‌ ಪ್ರಧಾನಿಯೇ ಸೋಂಕಿತರಾಗಿದ್ದರೂ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಕ್ರಿಕೆಟ್‌ ಚಟುವಟಿಕೆಯನ್ನು ಪುನಾರಂಭಿಸಲು ಸಿದ್ಧತೆ ನಡೆಸುತ್ತಿದೆ. 

ಪೊಲೀಸ್‌ ಸೇವೆಗೆ ಹಾಜರಾದ ಭಾರತದ ಕ್ರೀಡಾ ತಾರೆಯರು!

ಖಾಲಿ ಕ್ರೀಡಾಂಗಣಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಚಿಂತನೆ ನಡೆಸುತ್ತಿರುವುದಾಗಿ ಇಸಿಬಿ ನಿರ್ದೇಶಕ ಸ್ಟೀವ್‌ ಎಲ್ವರ್ಥಿ ತಿಳಿಸಿದ್ದಾರೆ. ಬ್ರಿಟನ್‌ ಸರ್ಕಾರದ ಆದೇಶದಂತೆ 500ಕ್ಕಿಂತ ಹೆಚ್ಚು ಜನ ಕಾರ್ಯಕ್ರಮ ಇಲ್ಲವೇ ಸಮಾರಂಭಗಳಲ್ಲಿ ಸೇರುವಂತಿಲ್ಲ. ಈ ನಿಯಮವನ್ನು ಮುಂದಿಟ್ಟುಕೊಂಡು ಪಂದ್ಯ ನಡೆಸಲು ಮನವಿ ಕೋರಲು ಇಸಿಬಿ ಮುಂದಾಗಲಿದೆ ಎಂದು ಎಲ್ವರ್ಥಿ ಹೇಳಿದ್ದಾರೆ. ಇದರ ಜತೆಗೆ ಕೊರೋನಾ ವೈರಸ್ ಚೆಕ್ ಪಾಯಿಂಟ್  ಹಾಗೂ ಸೋಂಕಿತರಿಗೆ ಪ್ರತ್ಯೇಕಿಸಲು ಘಟಕಗಳನ್ನು ನಿರ್ಮಿಸಲು ಮುಂದಾಗಿದೆ. 

ಬೀದಿಯಲ್ಲಿ ಓಡಾಡೋ ಪುಂಡರ ಮೇಲೆ ಕಿಡಿಕಾರಿದ ವಿರಾಟ್ ಕೊಹ್ಲಿ..!

ಈಗಾಗಲೇ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವೆ ಖಾಲಿ ಮೈದಾನದಲ್ಲಿ ಒಂದು ಪಂದ್ಯವನ್ನು ನಡೆಸಲಾಯಿತಾದರೂ, ಆ ಬಳಿಕ ಕೊರೋನಾ ವೈರಸ್ ಉಲ್ಬಣವಾಗುವುದನ್ನು ಮನಗಂಡು ಏಕದಿನ ಸರಣಿಯನ್ನು ರದ್ದುಗೊಳಿಸಲಾಯಿತು. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಕೂಡಾ ಖಾಲಿ ಮೈದಾನದಲ್ಲಿ ನಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿತ್ತಾದರೂ ಇದೀಗ ಕೊರೋನಾ ಭೀತಿಯಿಂದಾಗಿ ಟೂರ್ನಿ ನಡೆಯುವುದೇ ಅನುಮಾನ ಎನಿಸಿದೆ.