Asianet Suvarna News Asianet Suvarna News

ಗಾಲೆ ಟೆಸ್ಟ್‌ನಲ್ಲಿ ಹೊಸ ದಾಖಲೆ ಬರೆದ ಜೇಮ್ಸ್‌ ಆ್ಯಂಡರ್‌ಸನ್‌..!

ಇಂಗ್ಲೆಂಡ್ ಮಾರಕ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ಲಂಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸುವ ಮೂಲಕ ವಿನೂತನ ದಾಖಲೆ ಬರೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

England Pacer James Anderson goes past Glenn McGrath with 30th 5 plus wicket haul kvn
Author
Galle, First Published Jan 23, 2021, 4:20 PM IST

ಗಾಲೆ(ಜ.23): ಶ್ರೀಲಂಕಾ ವಿರುದ್ದದ ಗಾಲೆ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ನ ಅನುಭವಿ ವೇಗದ ಬೌಲರ್‌ ಜೇಮ್ಸ್ ಆ್ಯಂಡರ್‌ಸನ್‌ 6 ವಿಕೆಟ್‌ ಕಬಳಿಸುವ ಮೂಲಕ ಕ್ರಿಕೆಟ್‌ ದಿಗ್ಗಜ ಗ್ಲೆನ್‌ ಮೆಗ್ರಾಥ್‌ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. 

ಹೌದು, ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್‌ ಮೆಗ್ರಾತ್ ಒಟ್ಟು 29 ಬಾರಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಇದೀಗ ಆ್ಯಂಡರ್‌ಸನ್‌ ಗಾಲೆ ಟೆಸ್ಟ್ ಪಂದ್ಯದಲ್ಲಿ ನಿರ್ಶೋನ್‌ ಡಿಕ್‌ವೆಲ್ಲಾ, ಸುರಂಗ ಲಕ್ಮಲ್, ಏಂಜಲೋ ಮ್ಯಾಥ್ಯೂಸ್‌, ಕುಸಾಲ್ ಪೆರೇರಾ ಹಾಗೂ ಲಹೀರು ತಿರುಮನ್ನೆ ವಿಕೆಟ್‌ ಕಬಳಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 30ನೇ ಬಾರಿಗೆ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. 

ಇದಷ್ಟೇ ಅಲ್ಲದೇ 38 ವರ್ಷ 177 ದಿನದ ಆ್ಯಂಡರ್‌ಸನ್‌ ಇನಿಂಗ್ಸ್‌ವೊಂದರಲ್ಲಿ 5+ ವಿಕೆಟ್ ಕಬಳಿಸಿದ ಹಿರಿಯ ವೇಗಿ ಹಾಗೂ ಒಟ್ಟಾರೆ ಎರಡನೇ ಬೌಲರ್ ಎನ್ನುವ ಕೀರ್ತಿಗೂ ಆ್ಯಂಡರ್‌ಸನ್‌ ಭಾಜನರಾಗಿದ್ದಾರೆ. ಈ ಮೊದಲು ಲಂಕಾದ ಸ್ಪಿನ್ನರ್ ರಂಗನಾ ಹೆರಾತ್(40 ವರ್ಷ 123 ದಿನ) ದಕ್ಷಿಣ ಆಫ್ರಿಕಾ ವಿರುದ್ದ ಕೊಲಂಬೋ ಮೈದಾನದಲ್ಲಿ 5+ ವಿಕೆಟ್ ಕಬಳಿಸಿದ್ದ ಸಾಧನೆ ಮಾಡಿದ್ದರು.

ಇಂಡೋ-ಇಂಗ್ಲೆಂಡ್‌ ಟೆಸ್ಟ್ ಸರಣಿ: ಪ್ರೇಕ್ಷಕರಿಗಿಲ್ಲ ಪ್ರವೇಶ..!

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು 5+ ವಿಕೆಟ್ ಕಬಳಿಸಿದ ದಾಖಲೆ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳೀಧರನ್ ಹೆಸರಿನಲ್ಲಿದೆ. ಮುರುಳಿ 67 ಬಾರಿ ಇನಿಂಗ್ಸ್‌ವೊಂದರಲ್ಲಿ 5+ ವಿಕೆಟ್ ಕಬಳಿಸಿದ್ದಾರೆ. ಇದಾದ ಬಳಿಕ ಶೇನ್‌ ವಾರ್ನ್‌(37), ರಿಚರ್ಡ್‌ ಹ್ಯಾಡ್ಲಿ(36), ಅನಿಲ್‌ ಕುಂಬ್ಳೆ(35) ಹಾಗೂ ರಂಗನಾ ಹೆರಾತ್(34) 30ಕ್ಕೂ ಹೆಚ್ಚು ಬಾರಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 600ಕ್ಕೂ ಅಧಿಕ ವಿಕೆಟ್‌ ಕಬಳಿಸಿದ ಮೊದಲ ವೇಗಿ ಹಾಗೂ ಒಟ್ಟಾರೆ 4ನೇ ಬೌಲರ್‌ ಎನ್ನುವ ದಾಖಲೆಯು ಜೇಮ್ಸ್‌ ಆ್ಯಂಡರ್‌ಸನ್‌ ಹೆಸರಿನಲ್ಲಿದೆ. ಸದ್ಯ 606 ವಿಕೆಟ್ ಕಬಳಿಸಿರುವ ಸ್ವಿಂಗ್ ಬೌಲರ್‌ ಇನ್ನು ಕೇವಲ 14 ವಿಕೆಟ್‌ ಕಬಳಿಸಿದರೆ ಅನಿಲ್‌ ಕುಂಬ್ಳೆ ಹೆಸರಿನಲ್ಲಿರುವ(619) ದಾಖಲೆ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಲಿದ್ದಾರೆ.
 

Follow Us:
Download App:
  • android
  • ios