Asianet Suvarna News Asianet Suvarna News

Ashes 2021: 12 ದಿನಗಳಲ್ಲಿ ಆ್ಯಷಸ್ ಸೋತಿದ್ದೇವೆ, ನಮಗೆ ನಾಚಿಕೆಯಾಗ್ಬೇಕು!

ಇಂಗ್ಲೆಂಡ್ ತಂಡದ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರ ಟೀಕೆ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 14 ರನ್ ಗಳ ಸೋಲು ಕಂಡ ಇಂಗ್ಲೆಂಡ್
ಆ್ಯಷಸ್ ಟ್ರೋಫಿ ಮೇಲೆ ಮತ್ತೆ ಅಧಿಕಾರ ಸ್ಥಾಪಿಸಿದ ಆಸ್ಟ್ರೇಲಿಯಾ
 

England Former captains criticise England Team surrender in Melbourne and Ashes Test Series san
Author
Bengaluru, First Published Dec 28, 2021, 6:34 PM IST

ಮೆಲ್ಬೋರ್ನ್ (ಡಿ. 28): ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (England)ತಂಡದ ಇನ್ನಿಂಗ್ಸ್ ಮತ್ತು 14 ರನ್ ಗಳ ಸೋಲಿಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ಟೀಕಾಪ್ರಹಾರ ಮಾಡಿದ್ದಾರೆ. ಮೆಲ್ಬೋರ್ನ್ ನಲ್ಲಿ (Melbourne) ನಡೆದ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು 2ನೇ ಇನ್ನಿಂಗ್ಸ್ ನಲ್ಲಿ ಕೇವಲ 68 ರನ್ ಗೆ ಆಲೌಟ್ ಮಾಡಿದ ಆಸ್ಟ್ರೇಲಿಯಾ (Australia) ಕೇವಲ ಅಧಿಕೃತ 12 ದಿನದ ಆಟದಲ್ಲಿ ಆ್ಯಷಸ್ ಟ್ರೋಫಿಯನ್ನು ಮರಳಿ ಜಯಿಸಿದೆ. ಇದರ ಬೆನ್ನಲ್ಲಿಯೇ ಇಂಗ್ಲೆಂಡ್ ತಂಡ ಮಾಜಿ ನಾಯಕರಾದ ಮೈಕೆಲ್ ವಾನ್ (Michael Vaughan) ಹಾಗೂ ಇಯಾನ್ ಬಾಥಮ್ (Ian Botham), ಇಂಥ ಸೋಲುಗಳಿಂದ ನಮಗೆ ನಾಚಿಕೆಯಾಗುತ್ತಿದೆ ಎಂದು ರೂಟ್ (Joe Root) ಸಾರಥ್ಯದ ಇಂಗ್ಲೆಂಡ್ ತಂಡದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಕೇವಲ ಮೂರೇ ದಿನದಲ್ಲಿ ಮುಕ್ತಾಯವಾದ ಟೆಸ್ಟ್ ಪಂದ್ಯದೊಂದಿಗೆ ಆಸ್ಟ್ರೇಲಿಯಾ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಮುನ್ನಡೆಗೇರಿದ್ದು, "ದಿ ಅರ್ನ್"  (The Urn) ಎಂದು ಸಾಂಪ್ರದಾಯಿಕವಾಗಿ ಕರೆಸಿಕೊಳ್ಳುವ ಆ್ಯಷಸ್ ಟ್ರೋಫಿಯನ್ನು ಜಯಿಸಿದಂತಾಗಿದೆ. ಆ್ಯಷಸ್ ಇತಿಹಾಸದಲ್ಲಿ ಯಾವುದೇ ತಂಡವೊಂದು ಕೇವಲ 12 ದಿನಗಳಲ್ಲಿ ಟ್ರೋಫಿ ಜಯಿಸಿದ್ದು ಇದೇ ಮೊದಲಾಗಿದೆ. ಜೋ ರೂಟ್ ನೇತೃತ್ವದ ತಂಡ ಇದೇ ರೀತಿಯಲ್ಲಿ ಆಡಿದರೆ, ಟೆಸ್ಟ್ ಮಾದರಿಯ ಕ್ರಿಕೆಟ್ ಅನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇದ್ದಲ್ಲಿ 2023ರಲ್ಲಿ ತವರಿನಲ್ಲಿ ನಡೆಯಲಿರುವ ಆ್ಯಷಸ್ ಸರಣಿಯನ್ನು ಸೋಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ನಮ್ಮ ಟೆಸ್ಟ್ ತಂಡ ಉತ್ತಮವಾಗಿಲ್ಲ. ಯಾಕೆಂದರೆ, ತಂಡದ ಹೆಚ್ಚಿನ ಆಟಗಾರರು ಟೆಸ್ಟ್ ಗಿಂತ ಹೆಚ್ಚಾಗಿ ಏಕದಿನ ಹಾಗೂ ಟಿ20 ಮಾದರಿಯ ಕ್ರಿಕೆಟ್ ನತ್ತ ಆಕರ್ಷಿತರಾಗಿದ್ದಾರೆ. ವೈಟ್ ಬಾಲ್ ಕ್ರಿಕೆಟ್ ನತ್ತ ಅವರ ಗಮನ ಹೆಚ್ಚಿದ್ದರಿಂದಲೇ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ಕಡಿಮೆಯಾಗದೆ' ಎಂದು ಮೈಕೆಲ್ ವಾನ್ ಹೇಳಿದ್ದಾರೆ. ಇದರ ಫಲಿತಾಂಶವಾಗಿ ಇಂಗ್ಲೆಂಡ್ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗೆಲುವು ಕಂಡಿತ್ತು ಎಂದಿದ್ದಾರೆ. ಟೆಸ್ಟ್ ಕ್ರಿಕೆಟ್ ನತ್ತ ಗಮನ ಕೇಂದ್ರೀಕರಿಸದೆ ನಾವು ಉತ್ತಮ ಕ್ರಿಕೆಟ್ ದೇಶವಾಗಲು ಸಾಧ್ಯವಿಲ್ಲ. ಅದರಲ್ಲೂ ಅಸ್ಟ್ರೇಲಿಯಾದಂಥ ದೇಶಕ್ಕೆ ಬಂದು ಕ್ರಿಕೆಟ್ ಆಡಲು ಸಾಧ್ಯವೇ ಇಲ್ಲ. ಈಗ ನೋಡುತ್ತಿರುವ ತಂಡವೇ 2023ರ ಆ್ಯಷಸ್ ನಲ್ಲಿ ಆಡಿದರೆ ಖಂಡಿತವಾಗಿ ಸೋಲು ಕಾಣಲಿದೆ ಎಂದು ಇಂಗ್ಲೆಂಡ್ ತಂಡವನ್ನು 51 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿ 26 ಗೆಲುವು ತಂದುಕೊಟ್ಟಿರುವ ವಾನ್ ಹೇಳಿದ್ದಾರೆ. 

Ashes 2021: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಸೋಲು: ಟ್ರೋಫಿ ಆಸಿಸ್ ಕೈವಶ!
ಇಂಗ್ಲೆಂಡ್ ಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್ ಗಳ ಪೈಕಿ ಒಬ್ಬರಾಗಿರುವ ಇಯಾನ್ ಬಾಥಮ್ ಕೂಡ ತಂಡದ ನಿರ್ವಹಣೆಯ ಮೇಲೆ ಕಿಡಿಕಾರಿದ್ದು, "12 ದಿನಗಳಲ್ಲಿ ಆ್ಯಷಸ್ ಸೋತಿದ್ದೇವೆ ಎಂದರೆ ನಮಗೆ ನಾಚಿಕೆಯಾಗ್ಬೇಕು. ಇಷ್ಟು ವೇಗವಾಗಿ ಟ್ರೋಫಿ ಸೋತಿರುವುದು ಇದೇ ಮೊದಲು ಎನ್ನುವುದು ನನ್ನ ಅನಿಸಿಕೆ. ಒಟ್ಟಾರೆ ಇಂಗ್ಲೆಂಡ್ ತಂಡ ತನ್ನ ಲಯವನ್ನು ಕಳೆದುಕೊಂಡಿದೆ' ಎಂದಿದ್ದಾರೆ.

SA vs India Boxing Day Test: 55 ರನ್ ಅಂತರದಲ್ಲಿ ಉರುಳಿದ 7 ವಿಕೆಟ್, 327ಕ್ಕೆ ಭಾರತ ಆಲೌಟ್!
ಈ ಸೋಲುಗಳಿಂದ ನನಗಂತೂ ಬಹಳ ಮುಜುಗರವಾಗುತ್ತಿದೆ ಎಂದು ಖಾಸಗಿ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಟ್ಟಾರೆ ತಂಡದ ಪಮುಖ ಸಮಸ್ಯೆ ಇರುವುದು ಅಗ್ರ ಕ್ರಮಾಂಕದ ಬ್ಯಾಟಿಂಗ್. ಈ ಸರಣಿಯಲ್ಲಿ ಎರಡು ಬಾರಿ ಅವರು ಆರಂಭಿಕ ಜೋಡಿಯನ್ನು ಬದಲಿಸಿದರು. ಅದು ಕೆಲಸ ಮಾಡಿಲ್ಲ. ಮುಂದಿನ ಸಿಡ್ನಿ ಟೆಸ್ಟ್ ಗೆ ಇನ್ನೂ ಕೆಲ ದಿನಗಳ ಸಮಯವಿದ. ಅಷ್ಟರಲ್ಲಿ ಅಲೆಕ್ಸ್ ಲೀ ಯಂಥ ಬ್ಯಾಟ್ಸ್ ಮನ್ ತಂಡಕ್ಕೆ ಬಂದರೆ ಒಳಿತು' ಎಂದು ಬಾಥಮ್ ಹೇಳಿದ್ದಾರೆ.

Follow Us:
Download App:
  • android
  • ios