ಲಂಡನ್‌(ಜ.13): ಶ್ರೀಲಂಕಾ ವಿರುದ್ದ ಜನವರಿ 14ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಬೆನ್ ಸ್ಟೋಕ್ಸ್‌ ಹಾಗೂ ಜೋಫ್ರಾ ಆರ್ಚರ್‌ಗೆ ವಿಶ್ರಾಂತಿ ನೀಡಲಾಗಿದೆ

ಬೆನ್‌ ಸ್ಟೋಕ್ಸ್ ತಂದೆ ಜೆಡ್ ಸ್ಟೋಕ್ಸ್ ಇತ್ತೀಚೆಗಷ್ಟೇ ಮೆದುಳು ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದರು. ಇನ್ನು ಡೆಡ್ಲಿ ವೇಗಿ ಜೋಫ್ರಾ ಆರ್ಚರ್ ಭಾರತ ವಿರುದ್ದ ಸರಣಿಗಾಗಿ ವಿಶ್ರಾಂತಿ ನೀಡಲಾಗಿದೆ. ಫೆಬ್ರವರಿ ಮೊದಲ ವಾರದಿಂದ ಇಂಗ್ಲೆಂಡ್‌ ತಂಡವು ಭಾರತ ವಿರುದ್ದ 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಹೀಗಾಗಿ ಮಹತ್ವದ ಟೆಸ್ಟ್ ಸರಣಿಗಾಗಿ ಸ್ಟೋಕ್ಸ್‌-ಆರ್ಚರ್‌ಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ರೋರಿ ಬರ್ನ್ಸ್‌ಗೆ ಸಹ ಲಂಕಾ ಎದುರಿನ ಟೆಸ್ಟ್ ಸರಣಿಗೆ ವಿಶ್ರಾಂತಿ ನೀಡಲಾಗಿದೆ.

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಶ್ರೀಲಂಕಾ ತಂಡ ಪ್ರಕಟ

ಇನ್ನು ಶ್ರೀಲಂಕಾಗೆ ಬಂದಿಳಿಯುತ್ತಿದ್ದಂತೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಮೊಯೀನ್ ಅಲಿ ಕೊರೋನಾ ಟೆಸ್ಟ್ ನೆಗೆಟಿವ್ ಬಂದಿದ್ದು, ತಂಡ ಕೂಡಿಕೊಂಡಿದ್ದಾರೆ.

2 ಪಂದ್ಯಗಳ ಟೆಸ್ಟ್ ಸರಣಿಗೆ ಗಾಲೆ ಮೈದಾನ ಆತಿಥ್ಯವನ್ನು ವಹಿಸಿದ್ದು, ಖಾಲಿ ಮೈದಾನದಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಜನವರಿ 14ರಿಂದ ಆರಂಭವಾದರೆ, ಜನವರಿ 22ರಿಂದ ಕೊನೆಯ ಟೆಸ್ಟ್ ಪಂದ್ಯ ಶುರುವಾಗಲಿದೆ.

ಇಂಗ್ಲೆಂಡ್ ತಂಡ ಹೀಗಿದೆ ನೋಡಿ:
ಜೋ ರೂಟ್(ನಾಯಕ), ಮೊಯಿನ್ ಅಲಿ, ಜೇಮ್ಸ್‌ ಆಂಡರ್‌ಸನ್, ಜಾನಿ ಬೇರ್‌ಸ್ಟೋವ್, ಡಾಮ್‌ ಬೆಸ್, ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್, ಜಾಕ್ ಕ್ರಾವ್ಲಿ, ಸ್ಯಾಮ್ ಕರನ್, ಬೆನ್ ಫೋಕ್ಸ್, ಡಾನ್‌ ಲಾರೆನ್ಸ್‌, ಜಾಕ್‌ ಲೀಚ್‌, ಡಾಮ್‌ ಸಿಬ್ಲಿ, ಓಲಿ ಸ್ಟೋನ್‌, ಕ್ರಿಸ್ ವೋಕ್ಸ್‌, ಮಾರ್ಕ್ ವುಡ್‌

ಕಾಯ್ದಿರಿಸಿದ ಆಟಗಾರರು:
ಜೇಮ್ಸ್‌ ಬ್ರಾಸಿ, ಮಾಸನ್‌ ಕ್ರೇನ್‌, ಸಕೀಬ್ ಮೊಹಮದ್, ಕ್ರೇಗ್‌ ಒವರ್‌ಟನ್‌, ಮ್ಯಾಥ್ಯೂ ಪಾರ್ಕಿನ್‌ಸನ್‌, ಒಲಿ ರಾಬಿನ್‌ಸನ್‌, ಅಮರ್‌ ವಿರ್ದಿ.