ಲಂಡನ್(ಜು.30)‌: ಆಗಸ್ಟ್ 5ರಿಂದ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ 14 ಆಟಗಾರರ ಇಂಗ್ಲೆಂಡ್‌ ತಂಡವನ್ನು ಪ್ರಕಟಿಸಲಾಗಿದೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡಿದ ಆಟಗಾರರನ್ನೇ ಉಳಿಸಿಕೊಳ್ಳಲಾಗಿದ್ದು, ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ

ವಿಂಡೀಸ್ ವಿರುದ್ಧ ಆಡಿದ ಎಲ್ಲಾ ಆರು ವೇಗದ ಬೌಲರ್‌ಗಳನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಇನ್ನು ತಂಡದಲ್ಲಿರುವ ಏಕೈಕ ಸ್ಪಿನ್ನರ್ ಡಾಮ್ ಬ್ಲಿಸ್ ಕೂಡಾ ತಮ್ಮ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ಜನ ಕಾಯ್ದಿರಿಸಿದ ಆಟಗಾರರ ಪೈಕಿ ಜಾಕ್ ಲೀಜ್ ಕೂಡಾ ಒಬ್ಬರೆನಿಸಿದ್ದಾರೆ. 

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌: ಬ್ರಾಡ್‌ಗೆ ಜಾಕ್‌ಪಾಟ್, 8ನೇ ಸ್ಥಾನಕ್ಕೆ ಕುಸಿದ ಬುಮ್ರಾ

ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಬೀಗುತ್ತಿರುವ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಪಾಕಿಸ್ತಾನ ತಂಡವು ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಆಗಸ್ಟ್ 5 ರಿಂದ 9ರವರೆಗೆ ಮ್ಯಾಂಚೆಸ್ಟರ್‌ನಲ್ಲಿ ಮೊದಲ ಟೆಸ್ಟ್‌, ಆ.13 ರಿಂದ 17 ಹಾಗೂ ಆ.21 ರಿಂದ 25ರವರೆಗೆ ಸೌಥಾಂಪ್ಟನ್‌ನಲ್ಲಿ ಕ್ರಮವಾಗಿ 2 ಮತ್ತು 3ನೇ ಟೆಸ್ಟ್‌ ಪಂದ್ಯಗಳು ನಡೆಯಲಿವೆ.

ತಂಡ: ಜೋ ರೂಟ್‌ (ನಾಯಕ), ಜೇಮ್ಸ್‌ ಆ್ಯಂಡರ್ಸನ್‌, ಜೋಫ್ರಾ ಆರ್ಚರ್‌, ಡೊಮಿನಿಕ್‌ ಬೇಸ್‌, ಸ್ಟುವರ್ಟ್‌ ಬ್ರಾಡ್‌, ಬಟ್ಲರ್‌, ಬನ್ಸ್‌ರ್‍, ಕ್ರಾವ್ಲೆ, ಸ್ಯಾಮ್‌ ಕರ್ರನ್‌, ಪೋಪ್‌, ಸಿಬ್ಲೆ, ಬೆನ್‌ ಸ್ಟೋಕ್ಸ್‌, ಕ್ರಿಸ್‌ ವೋಕ್ಸ್‌, ಮಾರ್ಕ್ ವುಡ್‌.