ಪುಣೆ(ಮಾ.27):  ಇದು ಅಚ್ಚರಿಯಾದರೂ ಸತ್ಯ. ಮಹಿಳೆಯರ ಪರ್ಫ್ಯೂಮ್ ಹಾಕುವ ಅಭ್ಯಾಸ ಸಂಪೂರ್ಣ ಇಂಗ್ಲೆಂಡ್ ಪುರುಷ ತಂಡಕ್ಕಿದೆ. ಈ ಮಾತನ್ನು ಆಲ್ರೌಂಡರ್ ಬೆನ್ ಸ್ಟೋಕ್ಸ್ ಬಹಿರಂಗ ಪಡಿಸಿದ್ದಾರೆ. ಇದರ ಜೊತೆಗೆ ಕೆಲ ಕುತೂಹಲ ಮಾಹಿತಿಗಳನ್ನು ಸ್ಟೋಕ್ಸ್ ಬಹಿರಂಗ ಪಡಿಸಿದ್ದಾರೆ.

2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ, ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್!

ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡ ಮಹಿಳೆಯ ಡಿಯೋಡ್ರೆಂಟ್ ಬಳಕೆ ಮಾಡುತ್ತೆ. ಮಹಿಳೆಯರ ಪರ್ಫ್ಯೂಮ್ ಸುವಾಸನೆ ಹೊಂದಿದೆ. ಹೀಗಾಗಿ ಬಳಕೆ ಮಾಡುತ್ತೇವೆ. ನಾನು ಮಾತ್ರವಲ್ಲ, ಸಂಪೂರ್ಣ ತಂಡವೇ ಮಹಿಳೆಯ ಡಿಯೋಡ್ರೆಂಟ್ ಬಳಕೆ ಮಾಡುತ್ತದೆ ಎಂದು ಸ್ಟೋಕ್ಸ್ ಹೇಳಿದ್ದಾರೆ.

ಇಂದು ತಂಡದ ರೂಢಿಯಾಗಿದೆ. ಪರ್ಫ್ಯೂಮ್ ಬಳಕೆ ಮಾಡಿ ಮೈದಾನಕ್ಕಿಳಿಯುತ್ತೇವೆ ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.  ಪುರಷರ ಡಿಯೋಡ್ರೆಂಟ್ ಇದ್ದರೂ ಮಹಿಳೆಯರ ಪರ್ಫ್ಯೂಮ ಬಳಕೆ ಇದೀಗ ಅಭಿಮಾನಿಗಳಲ್ಲಿ ಅಚ್ಚರಿ ತಂದಿದೆ.  2ನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ 99 ರನ್  ಸಿಡಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಸಿದ್ದಾರೆ.