ಇಂಗ್ಲೆಂಡ್-ಭಾರತ ನಡುವಿನ 3ನೇ ಟಿ20 ಪಂದ್ಯ 77 ರನ್ ಸಿಡಿಸಿದ ಡೇವಿಡ್ ಮಲನ್ ಭಾರತಕ್ಕೆ 216 ರನ್ ಟಾರ್ಗೆಟ್ ನೀಡಿದ ಇಂಗ್ಲೆಂಡ್
ಟ್ರೆಂಟ್ ಬ್ರಿಡ್ಜ್(ಜು.10): ಡೇವಿಡ್ ಮಲನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಅಂತಿಮ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದೆ. ಭಾರತ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 215 ರನ್ ಸಿಡಿಸಿದೆ.
ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೀಸೆಂಟ್ ಆರಂಭ ಪಡೆಯಿತು. ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ 31 ರನ್ ಜೊತೆಯಾಟ ನೀಡಿದರು. ಬಟ್ಲರ್ 18ರನ್ ಸಿಡಿಸಿ ಔಟಾದರು. ಇತ್ತ ಜೇಸನ್ ರಾಯ್ 27 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಡೇವಿಡ್ ಮಲನ್ ಹೋರಾಟ ಟೀಂ ಇಂಡಿಯಾಗೆ ತಲೆನೋವಾಯಿತು. ಮಲನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಟೀಂ ಇಂಡಿಯಾ vs ವಿಶ್ವ ಇಲೆವೆನ್, ವಿಶೇಷ ಪಂದ್ಯ ಆಯೋಜಿಸಲ ಮೋದಿ ಸರ್ಕಾರದ ಮನವಿ!
ಫಿಲಿಪ್ ಸಾಲ್ಟ್ ಕೇವಲ 8 ರನ್ ಸಿಡಿಸಿ ಔಟಾದರು. ಲಿಯಾಮ್ ಲಿವಿಂಗ್‌ಸ್ಟೋನ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಡೇವಿಡ್ ಮಲನ್ ಅರ್ಧಶತಕ ಪೂರೈಸಿದರು. ಮಲನ್ 39 ಎಸೆತದಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 77 ರನ್ ಸಿಡಿಸಿದರು. ಆದರೆ ಮೊಯಿನ್ ಆಲಿ ಡಕೌಟ್ ಆದರು.
ಲಿವಿಂಗ್‌ಸ್ಟೋನ್ ಹಾಗೂ ಹ್ಯಾರಿ ಬ್ರೂಕ್ ಜೊತೆಯಾಟ ಇಂಗ್ಲೆಂಡ್‌ಗೆ ನೆರವಾಯಿತು. ಆದರೆ ಬ್ರೂಕ್ 19 ರನ್ ಸಿಡಿಸಿ ಔಟಾದರು. ಕ್ರಿಸ್ ಜೋರ್ಡನ್ 11 ರನ್ ಸಿಡಿಸಿ ಔಟಾದರು. ಲಿಯಾಮ್ ಲಿವಿಂಗ್‌ಸ್ಟೋನ್ 29 ಪಂದ್ಯದಲ್ಲಿ ಅಜೇಯ 42 ರನ್ ಸಿಡಿಸಿದರು. ಇದರೊಂದಿಗೆ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 215 ರನ್ ಸಿಡಿಸಿತು.
3 ಪಂದ್ಯಗಳ ಟಿ20 ಸರಣಿಯ ಆರಂಭಿಕ ಎರಡು ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಈ ಮೂಲಕ ಅಂತಿಮ ಪಂದ್ಯಕ್ಕೂ ಮೊದಲೇ ಸರಣಿ ಕೈವಶ ಮಾಡಿದೆ. ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 50 ರನ್ ಗೆಲುವು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 8 ವಿಕೆಟ್ ನಷ್ಟಕ್ಕೆ 198 ರನ್ ಸಿಡಿಸಿತು. ಇತ್ತ ಇಂಗ್ಲೆಂಡ್ 148 ರನ್ ಸಿಡಿಸಿ ಸೋಲೋಪ್ಪಿಕೊಂಡಿತು.
ಕೊಹ್ಲಿ ಈಗ ತಂಡಕ್ಕೆ ಹೊರೆ: ವಿರಾಟ್ ಬಗ್ಗೆ ಪಾಕ್ ಕ್ರಿಕೆಟಿಗನ ಅಚ್ಚರಿ ಹೇಳಿಕೆ!
ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 49 ರನ್ ಗೆಲುವು ದಾಖಲಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 170 ರನ್ ಸಿಡಿಸಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ 17 ಓವರ್‌ನಲ್ಲಿ 121 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.
ಇಂಗ್ಲೆಂಡ್ ಪ್ಲೇಯಿಂಗ್ 11
ಜೇಸನ್ ರಾಯ್, ಜೋಸ್ ಬಟ್ಲರ್(ನಾಯಕ), ಡೇವಿಡ್ ಮಲನ್, ಫಿಲಿಪ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಆಲಿ, ಡೇವಿಡ್ ವಿಲೆ, ಕ್ರಿಸ್ ಜೋರ್ಡನ್, ರೀಸ್ ಟೊಪ್ಲೆ, ರಿಚರ್ಡ್ ಗ್ಲೀಸನ್
ಟೀಂ ಇಂಡಿಯಾ ಇಂಗ್ಲೆಂಡ್ 11
ರೋಹಿತ್ ಶರ್ಮಾ(ನಾಯಕ), ರಿಷಬ್ ಪಂತ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಅವೇಶ್ ಖಾನ್, ಉಮ್ರಾನ್ ಮಲಿಕ್, ರವಿ ಬಿಶ್ನೋಯ್
