'ದಯವಿಟ್ಟು ನನಗೆ ಹಾಗೆ ಕರೀಬೇಡಿ, ಮುಜುಗರ ಆಗುತ್ತೆ': ವಿರಾಟ್ ಕೊಹ್ಲಿ ಹೀಗಂದಿದ್ದೇಕೆ..?

ವಿರಾಟ್ ಕೊಹ್ಲಿಗೆ ಆರ್‌ಸಿಬಿ ಜತೆಗೆ ಅವಿನಾಭಾವ ಸಂಬಂಧವಿದೆ. 2008ರಿಂದ ಆರಂಭವಾದ ಚೊಚ್ಚಲ ಆವೃತ್ತಿಯ ಐಪಿಎಲ್‌ನಿಂದಲೂ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಒಂದೇ ಫ್ರಾಂಚೈಸಿ ಜತೆ 16 ಸೀಸನ್ ಆಡಿದ ಏಕೈಕ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆ ವಿರಾಟ್ ಕೊಹ್ಲಿಗಿದೆ.

Embarrassed Virat Kohli Plea to RCB Fans Video goes viral kvn

ಬೆಂಗಳೂರು(ಮಾ.20): ಭಾರತ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ, ಐಪಿಎಲ್‌ನ ತವರು ಮೈದಾನ ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನ ಮಂಗಳವಾರ(ಮಾ.19) ಇಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿಗೆ ಆರ್‌ಸಿಬಿ ಜತೆಗೆ ಅವಿನಾಭಾವ ಸಂಬಂಧವಿದೆ. 2008ರಿಂದ ಆರಂಭವಾದ ಚೊಚ್ಚಲ ಆವೃತ್ತಿಯ ಐಪಿಎಲ್‌ನಿಂದಲೂ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಒಂದೇ ಫ್ರಾಂಚೈಸಿ ಜತೆ 16 ಸೀಸನ್ ಆಡಿದ ಏಕೈಕ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆ ವಿರಾಟ್ ಕೊಹ್ಲಿಗಿದೆ. ಆರ್‌ಸಿಬಿ ಫ್ಯಾನ್ಸ್ ವಿರಾಟ್ ಕೊಹ್ಲಿಯನ್ನು ಮನೆ ಮಗನಂತೆ ಪ್ರೀತಿ ನೀಡಿದ್ದಾರೆ. ಪ್ರೀತಿಯಿಂದ ಆರ್‌ಸಿಬಿ ಫ್ಯಾನ್ಸ್ ವಿರಾಟ್‌ಗೆ ಕಿಂಗ್ ಕೊಹ್ಲಿ ಅಂತ ಕರೆಯುತ್ತಾ ಬಂದಿದ್ದಾರೆ. 

WPL ಕಪ್‌ ಗೆದ್ದು ಬಾಯ್‌ ಫ್ರೆಂಡ್‌ ಜತೆ ಫೋಸ್‌ ಕೊಟ್ಟ RCB ಕ್ವೀನ್ ಸ್ಮೃತಿ ಮಂಧನಾ..! ನಮ್ಮ ಕ್ರಶ್‌ ಬಿಟ್ಬಿಡು ಎಂದ ಫ್ಯಾನ್ಸ್

ಇದೀಗ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದ ವೇಳೆಯಲ್ಲಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಡ್ಯಾನೀಶ್ ಶೇಠ್, ವಿರಾಟ್ ಕೊಹ್ಲಿಯನ್ನು ಸ್ಟೇಜ್‌ಗೆ ಕರೆಯುವಾಗ ಕಿಂಗ್ ಕೊಹ್ಲಿ ಎಂದು ಆಹ್ವಾನಿಸಿದರು. ಆಗ ಸ್ಟೇಜ್‌ಗೆ ಬಂದ ಕೊಹ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ನನಗೆ ಹಾಗೆ ಕಿಂಗ್ ಕೊಹ್ಲಿ ಅಂತ ಕರೀಬೇಡಿ. ಅದರಿಂದ ನನಗೆ ಮುಜುಗರವನ್ನುಂಟಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ. 

ವಿರಾಟ್ ಕೊಹ್ಲಿ ಸ್ಟೇಜ್‌ಗೆ ಬಂದಾಗ, ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿತ್ತು. ಆಗ ಮಾತನಾಡಿದ ಕೊಹ್ಲಿ, "ಇಂದು ರಾತ್ರಿಯೇ ನಾವು ಚೆನ್ನೈಗೆ ವಿಮಾನ ಏರಬೇಕಿದೆ. ನಮಗಾಗಿ ಚಾರ್ಟರ್ ಪ್ಲೈಟ್ ರೆಡಿಯಿದೆ. ಹೀಗಾಗಿ ನಮಗೆ ಹೆಚ್ಚಿನ ಸಮಯವಿಲ್ಲ" ಎಂದು ಹೇಳಿದ್ದಾರೆ.

"ಮೊದಲನೆಯದಾಗಿ ಆ ಹೆಸರಿನಿಂದ ನನ್ನನ್ನು ಕರೆಯಬೇಡಿ. ದಯವಿಟ್ಟು ನನ್ನನ್ನು ವಿರಾಟ್ ಎಂದಷ್ಟೇ ಕರೆಯಿರಿ. ಪ್ರತಿ ವರ್ಷ ನೀವು ನನ್ನನ್ನು ಹಾಗೆ ಕರೆದಾಗಲು ನನಗೆ ಮುಜುಗರವಾಗುತ್ತದೆ ಎಂದು ನಾನು ಈಗಷ್ಟೇ ಫಾಫ್‌ಗೆ ಹೇಳಿದೆ. ಹೀಗಾಗಿ ಇನ್ನು ಮುಂದೆ ದಯವಿಟ್ಟು ವಿರಾಟ್ ಎಂದು ಕರೆಯಿರಿ ಎಂದು ವಿರಾಟ್ ಕೊಹ್ಲಿ ಮನವಿ ಮಾಡಿಕೊಂಡಿದ್ದಾರೆ.

Watch: ಬೆಂಗಳೂರು ಆಗಿ ಬದಲಾದ ಬ್ಯಾಂಗಲೂರ್‌, 'ಇದು ಆರ್‌ಸಿಬಿ ಹೊಸ ಅಧ್ಯಾಯ' ಎಂದು ಕನ್ನಡದಲ್ಲೇ ಹೇಳಿದ ಕೊಹ್ಲಿ!

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದ್ದು, ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. 

ಈಗಾಗಲೇ ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ತಂಡವು ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ. ಇದೀಗ ವಿರಾಟ್ ಕೊಹ್ಲಿ ಟ್ರೋಫಿ ಡಬಲ್ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios