ಎಲೈಸಿ ಪೆರ್ರಿ ಸ್ಫೋಟಕ ಆಟಕ್ಕೆ ಮಣಿದ ಟೀಂ ಇಂಡಿಯಾ

ಗೆಲ್ಲಲು 131 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾಕ್ಕೆ, ಕೊನೆಯ 4 ಓವರಲ್ಲಿ 32 ರನ್‌ ಬೇಕಿದ್ದಾಗ, ಪೆರ್ರಿ 21 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 34 ರನ್‌ ಸಿಡಿಸಿ, ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.

Ellyse Perry slogs six to level T20 series with India in 300th Australia game kvn

ನವಿ ಮುಂಬೈ: ಎಲೈಸಿ ಪೆರ್ರಿ ತಮ್ಮ 300ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸ್ಫೋಟಕ ಆಟವಾಡಿ, ಭಾರತ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ 6 ವಿಕೆಟ್‌ ಗೆಲುವು ತಂದುಕೊಟ್ಟರು. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಲ್ಲಿ ಸಮಗೊಂಡಿದ್ದು, ಜ.9ರಂದು ನಡೆಯಲಿರುವ 3ನೇ ಪಂದ್ಯ ಸರಣಿ ವಿಜೇತರನ್ನು ನಿರ್ಧರಿಸಲಿದೆ.

ಗೆಲ್ಲಲು 131 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾಕ್ಕೆ, ಕೊನೆಯ 4 ಓವರಲ್ಲಿ 32 ರನ್‌ ಬೇಕಿದ್ದಾಗ, ಪೆರ್ರಿ 21 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 34 ರನ್‌ ಸಿಡಿಸಿ, ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.

Ranji Trophy: ಪಂಜಾಬ್ ಎದುರು ಕರ್ನಾಟಕದ ಗೆಲುವಿಗೆ ಬೇಕು 7 ವಿಕೆಟ್‌!

ಮೊದಲು ಬ್ಯಾಟ್‌ ಮಾಡಲು ಇಳಿಸಲ್ಪಟ್ಟ ಭಾರತ 20 ಓವರಲ್ಲಿ ಗಳಿಸಿದ್ದು 8 ವಿಕೆಟ್‌ಗೆ ಕೇವಲ 130 ರನ್‌. 54 ರನ್‌ಗೆ ಸ್ಮೃತಿ, ಶಫಾಲಿ, ಜೆಮಿಮಾ, ಹರ್ಮನ್‌ಪ್ರೀತ್‌ರ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ದೀಪ್ತಿ ಶರ್ಮಾ (30), ರಿಚಾ ಘೋಷ್‌ (23) ಆಸರೆಯಾದರು. ಆದರೂ, ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ವಿಫಲವಾಯಿತು.

ಅಲೀಸಾ ಹೀಲಿ (26), ಬೆಥ್‌ ಮೂನಿ (20) ಮೊದಲ ವಿಕೆಟ್‌ಗೆ 51 ರನ್‌ ಸೇರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರೂ, ಪೆರ್ರಿಯ ಇನ್ನಿಂಗ್ಸ್‌ ಆಸೀಸ್‌ಗೆ ಗೆಲುವು ತಂದುಕೊಟ್ಟಿತು.

ಸ್ಕೋರ್‌: 
ಭಾರತ 20 ಓವರಲ್ಲಿ 130/8 (ದೀಪ್ತಿ 30, ರಿಚಾ 23, ಜಾರ್ಜಿಯಾ 2-17), 
ಆಸ್ಟ್ರೇಲಿಯಾ 19 ಓವರಲ್ಲಿ 133/4 (ಪೆರ್ರಿ 34, ಅಲೀಸಾ 26, ದೀಪ್ತಿ 2-22)

ಪತ್ನಿ ಒಪ್ಪಿದರೆ ಕೋಚ್ ಆಗುತ್ತೇನೆ: ಡೇವಿಡ್ ವಾರ್ನರ್‌

ಸಿಡ್ನಿ: ಇತ್ತೀಚೆಗೆ ಟೆಸ್ಟ್‌, ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಆಸ್ಟ್ರೇಲಿಯಾದ ತಾರಾ ಆಟಗಾರ ಡೇವಿಡ್‌ ವಾರ್ನರ್‌, ಭವಿಷ್ಯದಲ್ಲಿ ತಮಗೆ ಕೋಚ್‌ ಆಗಲು ಆಸೆ ಇದ್ದು, ಪತ್ನಿ ಒಪ್ಪಿದರೆ ಕೋಚಿಂಗ್‌ನತ್ತ ಗಮನ ಹರಿಸುವುದಾಗಿ ಹೇಳಿಕೊಂಡಿದ್ದಾರೆ. 

ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಂಗ್ಲರು ಮಾಸ್ಟರ್ ಪ್ಲಾನ್..!

ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ವಾರ್ನರ್‌, ‘ನನಗೆ ಕೋಚ್‌ ಆಗಿ ಕಾರ್ಯನಿರ್ವಹಿಸುವ ಆಸೆ ಇದೆ. ಪತ್ನಿಯೊಂದಿಗೆ ಚರ್ಚಿಸುತ್ತೇನೆ. ವರ್ಷದಲ್ಲಿ ಕೆಲ ದಿನಗಳ ಕಾಲ ಮನೆಯಿಂದ ದೂರವಿರಲು ಅನುಮತಿ ಕೊಟ್ಟರೆ ಕೋಚಿಂಗ್‌ ವೃತ್ತಿಬದುಕನ್ನು ಗಂಭೀರವಾಗಿ ಪರಿಗಣಿಸುತ್ತೇನೆ’ ಎಂದಿದ್ದಾರೆ. ಮತ್ತೊಂದು ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಕಾಮೆಂಟೇಟರ್‌ ಆಗಿ ಕೆಲಸ ಮಾಡುವ ಆಸೆಯೂ ಇದೆ ಎಂದು ವಾರ್ನರ್‌ ಹೇಳಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios