ಯುವಕರನ್ನು ನಾಚಿಸುವಂತೆ ಆಡಿದ ವೃದ್ಧ ವೃದ್ಧ ಕ್ರಿಕೆಟ್ ಆಡುತ್ತಿರುವ ವಿಡಿಯೋ ವೈರಲ್ ತಾತನ ಅಟಕ್ಕೆ ನೆಟ್ಟಿಗರಿಂದ ಭಾರಿ ಪ್ರಶಂಸೆ
ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮದಂತೆ ಬೆಳೆದಿದೆ. ಅಂಬೆಗಾಲಿಡುವ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕನವರೆಗೂ ಕ್ರಿಕೆಟ್ ಮೇಲಿನ ಪ್ರೀತಿ ಸರ್ವಕಾಲಿಕವಾಗಿದ್ದು, ಇದಕ್ಕೊಂದು ಉತ್ತಮ ಉದಾಹರಣೆ ವಯೋವೃದ್ಧರೊಬ್ಬರ ಕ್ರಿಕೆಟ್ ಆಟ. ಹೌದು ವೃದ್ಧರೊಬ್ಬರು ಕ್ರಿಕೆಟ್ ಆಡುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೆರೆಯಾಗಿದ್ದು, ವೃದ್ಧನ ಹುರುಪು, ಉತ್ಸಾಹ ಯುವಕರನ್ನು ನಾಚಿಸುವಂತಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಅಜ್ಜ ಬ್ಯಾಟ್ ಹಿಡಿದು ನಿಂತಿದ್ದು, ಯುವಕರು ಬೌಲಿಂಗ್ ಮಡುತ್ತಿದ್ದಾರೆ. ಹುಡುಗರು ಹಾಕಿದ ಬಾಲ್‌ಗೆ ಬ್ಯಾಟಿಂಗ್ ಮಾಡುವ ಅಜ್ಜ ಬಾಲನ್ನು ಮೈದಾನದಿಂದಾಚೆ ಅಟ್ಟಿ ವಿಕೆಟ್ ಮಧ್ಯೆ ರನ್‌ಗಾಗಿ ಓಡುತ್ತಾರೆ. ಅವರು ಬ್ಯಾಟಿಂಗ್ ನಂತರ ಓಡುವ ರಭಸವೇ ನೋಡುಗರನ್ನು ಗಾಬರಿಯಾಗುವಂತೆ ಮಾಡುತ್ತಿದೆ. ಅಷ್ಟು ಬಿರುಸಾಗಿ ಅಜ್ಜ ರನ್‌ಗಾಗಿ ಓಡುತ್ತಿದ್ದು, ಇದನ್ನು ನೋಡುವ ಸುತ್ತಲಿದ್ದ ಹುಡುಗರು ಜೋರಾಗಿ ಬೊಬ್ಬೆ ಹಾಕಿ ಅಜ್ಜನನ್ನು ಪ್ರೋತ್ಸಾಹಿಸುತ್ತಾರೆ.
ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಅಜ್ಜ ಸಾಬೀತು ಮಾಡಿ ತೋರಿಸಿದ್ದಾರೆ. ನಮ್ಮಲ್ಲಿ ಈಗಾಗಲೇ ವಯಸ್ಸನ್ನು ಮೀರಿ ಅನೇಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ನೀವು ನೋಡಿರಬಹುದು. ಅದೇ ರೀತಿಯ ವಿಡಿಯೋ ಇದಾಗಿದ್ದು, ಅಜ್ಜನ ಹುರುಪು ನೋಡಿದ ನೆಟ್ಟಿಗರು ವಾಹ್ ಎಂದಿದ್ದಾರೆ.
ಬಲೋಚಿ ಬೆಂಜೋ ವಾದ್ಯದಲ್ಲಿ 'ಆಯೇ ಹೋ ಮೇರಿ ಜಿಂದಗಿ' ಹಾಡು ನುಡಿಸಿದ ಪಾಕ್ ವೃದ್ಧ
ಸ್ಥಳೀಯ ಮಾಧ್ಯಮವೊಂದು ಈ ಇವರಿಗೆ 80 ವರ್ಷ ಎಂದು ಹೇಳಿದೆ. ಈ ವಿಡಿಯೋ ಗೋಡ್ಮನ್ ಚಿಕ್ನ(Godman Chikna) ಎಂಬ ಟ್ವಿಟ್ಟರ್ ಖಾತೆಯಿಂದ ಅಪ್ಲೋಡ್ ಆಗಿದ್ದು, 14 ಸೆಕೆಂಡ್‌ಗಳ ಈ ವಿಡಿಯೋವನ್ನು ಈಗಾಗಲೇ 4,000 ಜನ ವೀಕ್ಷಿಸಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಕೊನೆ ಉಸಿರಿರುವವರೆಗೆ ಇರುತ್ತದೆ ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. ಭಾರತ ಹಾಗೂ ಭಾರತೀಯರು ಕ್ರಿಕೆಟ್ ಹೊಂದಿರುವುದಕ್ಕೆ ನಿಜವಾಗಿಯೂ ಅದೃಷ್ಟ ಮಾಡಿದ್ದಾರೆ ಎಂದು ವಿಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ.
ದೇಸಿ ಕ್ವೀನ್ Swapna Choudhary ಕುಣಿತವನ್ನೇ ಮೀರಿಸಿದ ವೃದ್ಧ, ವಿಡಿಯೋ ವೈರಲ್!
ಕಳೆದ ವರ್ಷ ಆಕ್ಟೋಬರ್‌ನಲ್ಲಿ 97 ವರ್ಷದ ವ್ಯಕ್ತಿಯೊಬ್ಬರು ಗ್ರಾಂಡ್ ಸ್ಲಾಮ್ ಚಾಂಪಿಯನ್ ರಾಫೆಲ್ ನಡಾಲ್ ಜೊತೆ ಟೆನ್ನಿಸ್ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಾಗೆಯೇ ಉಕ್ರೇನಿಯನ್ (Ukrain) ಆಟಗಾರ ಸ್ಟಾನಿಸ್ಲಾವ್ಸ್ಕಿ (Stanislavskyi) ಅವರು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ITF) ಪರವಾನಗಿ ಹೊಂದಿರುವ ವಿಶ್ವದ ಅತ್ಯಂತ ಹಳೆಯ ಆಟಗಾರ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.
