Asianet Suvarna News Asianet Suvarna News

Duleep Trophy ಆರ್‌ಸಿಬಿ ವೇಗಿ ವೈಶಾಖ್ ಮಾರಕ ದಾಳಿ: ದಕ್ಷಿಣ ವಲ​ಯಕ್ಕೆ ಜಯ​ದ ನಿರೀಕ್ಷೆ!

ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯ ಮಿಂಚಿನ ಆಟ
ಸೆಮೀಸ್‌ನಲ್ಲಿ ಉತ್ತರ ವಲಯವನ್ನು 211 ರನ್‌ಗಳಿಗೆ ಕಟ್ಟಿ ಹಾಕಿದ ದಕ್ಷಿಣ ವಲಯ
5 ವಿಕೆಟ್ ಕಬಳಿಸಿ ಮಿಂಚಿದ ಕನ್ನಡಿಗ ವೇಗಿ ವೈಶಾಖ್ ವಿಜಯ್‌ಕುಮಾರ್

Duleep Trophy Vijaykumar Vyshak 5 wickets haul helps South Zone restrict North Zone to 211 runs kvn
Author
First Published Jul 8, 2023, 6:19 AM IST

ಬೆಂಗ​ಳೂ​ರು(ಜು.08): ದುಲೀಪ್‌ ಟ್ರೋಪಿ ಟೂರ್ನಿ​ಯಲ್ಲಿ ಉತ್ತರ ವಲ​ಯದ ವಿರುದ್ಧ ದಕ್ಷಿಣ ವಲಯ ಸೆಮಿ​ಫೈ​ನ​ಲ್‌​ನಲ್ಲಿ ಗೆಲು​ವಿನ ನಿರೀ​ಕ್ಷೆ​ಯ​ಲ್ಲಿದೆ. ಮೊದಲ ಇನಿಂಗ್ಸ್‌ನಲ್ಲಿ 3 ರನ್ ಮುನ್ನಡೆ ಗಳಿಸಿದ್ದ ಉತ್ತರ ವಲಯ, ಆರ್‌ಸಿಬಿ ವೇಗಿ ವಿ ವೈಶಾಖ್ ಮಾರಕ ದಾಳಿಗೆ ತತ್ತರಿಸಿ ಕೇವಲ 211 ರನ್‌ಗಳಿಗೆ ಸರ್ವಪತನ ಕಂಡಿದೆ. ಇದೀಗ ದಕ್ಷಿಣ ವಲಯ ತಂಡಕ್ಕೆ 215 ರನ್‌ ಗುರಿ ಲಭಿ​ಸಿದ್ದು, 3ನೇ ದಿನ​ದಂತ್ಯಕ್ಕೆ ವಿಕೆಟ್‌ ನಷ್ಟ​ವಿ​ಲ್ಲದೇ 21 ರನ್‌ ಗಳಿ​ಸಿದೆ. ಕೊನೆ ದಿನ​ವಾದ ಶನಿ​ವಾರ ತಂಡ 194 ರನ್‌ ಗಳಿ​ಸ​ಬೇ​ಕಿದೆ.

ಗುರು​ವಾರ 2ನೇ ಇನ್ನಿಂಗ್‌್ಸ​ನಲ್ಲಿ 2 ವಿಕೆಟ್‌ ಕಳೆ​ದು​ಕೊಂಡು 51 ರನ್‌ ಗಳಿ​ಸಿದ್ದ ಉತ್ತರ ವಲ​ಯ ಶುಕ್ರ​ವಾರ 211 ರನ್‌ಗೆ ಸರ್ವ​ಪ​ತನ ಕಂಡಿತು. ಪ್ರಭ್‌​ಸಿ​ಮ್ರ​ನ್‌ ಸಿಂಗ್‌ 93 ಎಸೆ​ತ​ಗ​ಳಲ್ಲಿ ಹೋರಾ​ಟದ 63 ರನ್‌ ಸಿಡಿಸಿದರು. ವೈಶಾಕ್‌ 5 ವಿಕೆಟ್‌ ಗೊಂಚಲು ಪಡೆ​ದರೆ, ಮೊದಲ ಇನ್ನಿಂಗ್‌್ಸ​ನಲ್ಲಿ 5 ವಿಕೆಟ್‌ ಕಬ​ಳಿ​ಸಿದ್ದ ವಿದ್ವತ್‌ ಕಾವೇ​ರಪ್ಪ 2 ವಿಕೆಟ್‌ ಕಿತ್ತರು. ಉಳಿದ 3 ವಿಕೆಟ್‌ ಸ್ಪಿನ್ನ​ರ್‌ ಸಾಯಿ ಕಿಶೋರ್‌ ಪಾಲಾ​ಯಿ​ತು.

ಸ್ಕೋರ್‌: ಉತ್ತರ ವಲಯ 198/10 ಮತ್ತು 211/10 (ಪ್ರ​ಭ್‌​ಸಿ​ಮ್ರನ್‌ 63, ಹರ್ಷಿತ್‌ 38, ವೈಶಾಕ್‌ 5-76)
ದಕ್ಷಿಣ ವಲಯ 195/10 ಮತ್ತು 21/0 (3ನೇ ದಿನ​ದಂತ್ಯ​ಕ್ಕೆ)(ಮ​ಯಾಂಕ್‌ 15*, ಸುಧ​ರ್ಶನ್‌ 05*)

ಫೈನಲ್‌ ಸನಿ​ಹ​ಕ್ಕೆ ಪಶ್ಚಿಮ ವಲ​ಯ

ಪಶ್ಚಿಮ ವಲಯ ಈ ಬಾರಿ​ಯೂ ಫೈನ​ಲ್‌​ಗೇ​ರು​ವುದು ಬಹು​ತೇಕ ಖಚಿ​ವಾ​ಗಿದೆ. ಕೇಂದ್ರ ವಲ​ಯದ ವಿರುದ್ಧ 2ನೇ ಇನ್ನಿಂಗ್‌್ಸ​ನಲ್ಲಿ 3ನೇ ದಿನ​ದಂತ್ಯಕ್ಕೆ ಪಶ್ಚಿಮ ವಲಯ 9 ವಿಕೆ​ಟ್‌ಗೆ 292 ರನ್‌ ಗಳಿ​ಸಿ​ದ್ದು, ಒಟ್ಟು 384 ರನ್‌ ಮುನ್ನಡೆ ಪಡೆ​ದಿದೆ. ಒಂದು ವೇಳೆ ಪಂದ್ಯ ಡ್ರಾಗೊಂಡರೂ ಮೊದಲ ಇನ್ನಿಂಗ್‌್ಸ ಮುನ್ನಡೆ ಆಧಾ​ರ​ದಲ್ಲಿ ಪಶ್ಚಿಮ ವಲಯ ಫೈನಲ್‌ ಪ್ರವೇ​ಶಿ​ಸ​ಲಿ​ದೆ. 2ನೇ ದಿನ​ 3 ವಿಕೆಟ್‌ಗೆ 149 ರನ್‌ ಗಳಿ​ಸಿದ್ದ ಪಶ್ಚಿಮ ವಲಯಕ್ಕೆ ಚೇತೇ​ಶ್ವರ್‌ ಪೂಜಾರ 133 ರನ್‌ ಸಿಡಿಸಿ ತಂಡಕ್ಕೆ ಮತ್ತೆ ಆಸ​ರೆ​ಯಾ​ದರು. ಸೌರಭ್‌ 4 ವಿಕೆಟ್‌ ಕಿತ್ತರು.

ಏಷ್ಯಾ​ಡ್‌​: ಭಾರತ ಕ್ರಿಕೆ​ಟ್‌ ತಂಡ​ಗಳ ಸ್ಪರ್ಧೆ ಖಚಿ​ತ

ಮುಂಬೈ: ಚೀನಾದ ಹ್ಯಾಂಗ್ಝೂ​ನಲ್ಲಿ ನಡೆ​ಯ​ಲಿ​ರುವ ಏಷ್ಯನ್‌ ಗೇಮ್ಸ್‌​ನಲ್ಲಿ ಭಾರತ ಕ್ರಿಕೆಟ್‌ ತಂಡ​ಗಳು ಪಾಲ್ಗೊ​ಳ್ಳು​ವುದು ಖಚಿ​ತ​ವಾ​ಗಿದೆ. ಶುಕ್ರ​ವಾರ ನಡೆದ ಬಿಸಿ​ಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆ​ಯಲ್ಲಿ ಇದನ್ನು ಅನು​ಮೋ​ದಿ​ಸ​ಲಾ​ಯಿತು. ಪುರು​ಷರ ವಿಭಾ​ಗ​ದಲ್ಲಿ ಭಾರ​ತದ 2ನೇ ದರ್ಜೆ​ಯ ತಂಡ​ವನ್ನು ಆಡಿ​ಸಲು ಬಿಸಿ​ಸಿಐ ನಿರ್ಧ​ರಿ​ಸಿದೆ. ಆದರೆ ಮಹಿಳಾ ವಿಭಾ​ಗದಲ್ಲಿ ಮೊದಲ ದರ್ಜೆಯ ತಂಡ​ವನ್ನೇ ಬಿಸಿ​ಸಿಐ ಕಣ​ಕ್ಕಿ​ಳಿ​ಸ​ಲಿದೆ.

'ನೀವು ನನಗೆ ಟೆಕ್ಸ್ಟ್ ಮಾಡಿ ಸಾಕು': ತನ್ನ ಬಗ್ಗೆ ಟ್ವೀಟ್ ಮಾಡೋರಿಗೆ ರಿಯಾನ್‌ ಪರಾಗ್ ತಿರುಗೇಟು..!

ಇದೇ ವೇಳೆ ಅ.16ರಿಂದ ಆರಂಭ​ಗೊ​ಳ್ಳ​ಲಿ​ರುವ ಮುಷ್ತಾಕ್‌ ಅಲಿ ಟಿ20ಯಲ್ಲಿ ಐಪಿ​ಎಲ್‌ ಮಾದ​ರಿಯ ಇಂಪ್ಯಾಕ್ಟ್ ಆಟ​ಗಾರ ನಿಯಮ ಜಾರಿಗೆ ಬಿ​ಸಿ​ಸಿಐ ನಿರ್ಧ​ರಿ​ಸಿ​ದೆ. ಮುಷ್ತಾಕ್‌ ಅಲಿ ಟಿ20ಯಲ್ಲಿ ಕಳೆದ ಋುತು​ವಿ​ನಲ್ಲೇ ಈ ನಿಯಮ ಮೊದಲ ಬಾರಿ ಜಾರಿ​ಗೊ​ಳಿ​ಸ​ಲಾ​ಗಿತ್ತು. ಆದರೆ 14ನೇ ಓವರ್‌ ಮುಕ್ತಾ​ಯಕ್ಕೂ ಮುನ್ನ ಇಂಪ್ಯಾಕ್ಟ್ ಆಟ​ಗಾ​ರ​ನನ್ನು ಬಳ​ಸ​ಬೇ​ಕಿತ್ತು.

ಒಂದೇ ದಿನ​ದಲ್ಲಿ ನಿವೃತ್ತಿ ಹಿಂಪ​ಡೆದ ತಮೀ​ಮ್‌!

ಚಿತ್ತ​ಗಾಂಗ್‌: ಗುರು​ವಾ​ರ​ವಷ್ಟೇ ಅಂತಾ​ರಾ​ಷ್ಟ್ರೀಯ ಕ್ರಿಕೆ​ಟ್‌ಗೆ ದಿಢೀರ್‌ ನಿವೃತ್ತಿ ಘೋಷಿ​ಸಿದ್ದ ಬಾಂಗ್ಲಾ​ದೇಶದ ಕ್ರಿಕೆ​ಟಿಗ ತಮೀಮ್‌ ಇಕ್ಬಾಲ್‌, ಒಂದೇ ದಿನಕ್ಕೆ ತಮ್ಮ ನಿರ್ಧಾ​ರ​ದಿಂದ ಹಿಂದೆ ಸರಿ​ದಿ​ದ್ದಾರೆ. ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರ ಸೂಚನೆ ಮೇರೆಗೆ ನಿವೃತ್ತಿ ಹಿಂಪ​ಡೆ​ದಿ​ದ್ದಾಗಿ ತಮೀಮ್‌ ತಿಳಿ​ಸಿದ್ದು, ಒಂದೂ​ವ​ರೆ ತಿಂಗಳ ಬಳಿಕ ಮತ್ತೆ ಆಡು​ವು​ದಾಗಿ ಹೇಳಿ​ದ್ದಾರೆ. ಶುಕ್ರ​ವಾರ ಬಾಂಗ್ಲಾ ಮಾಜಿ ನಾಯಕ ಮುಶ್ರಫೆ ಮೊರ್ತಜಾ ಹಾಗೂ ತಮೀಮ್‌ ಪ್ರಧಾ​ನಿ​ಯನ್ನು ಭೇಟಿ​ಯಾ​ಗಿದ್ದರು. ಈ ವೇಳೆ ನಿವೃತ್ತಿ ಹಿಂಪ​ಡೆದು ಕ್ರಿಕೆ​ಟ್‌ಗೆ ಮರ​ಳು​ವಂತೆ ಪ್ರಧಾನಿ ಸೂಚಿ​ಸಿ​ದ್ದಾರೆ.

Follow Us:
Download App:
  • android
  • ios